Thursday, April 16, 2026
Homeಕ್ರೈಂLPG CRISIS: ಯುದ್ಧದ ಎಫೆಕ್ಟ್​​​ನಿಂದ ಎಲ್‌ಪಿಜಿ ಕೊರತೆ, ಗ್ಯಾಸ್ ಕಾಳಸಂತೆ ಅಕ್ರಮದ ಮೇಲೆ ಖಾಕಿ ಕಣ್ಣು

LPG CRISIS: ಯುದ್ಧದ ಎಫೆಕ್ಟ್​​​ನಿಂದ ಎಲ್‌ಪಿಜಿ ಕೊರತೆ, ಗ್ಯಾಸ್ ಕಾಳಸಂತೆ ಅಕ್ರಮದ ಮೇಲೆ ಖಾಕಿ ಕಣ್ಣು

ಕೋಲಾರ : ಕಳೆದ ಕೆಲವು ದಿನಗಳಿಂದ ಅಡುಗೆ ಅನಿಲದ (LPG Cylinder) ಲಭ್ಯತೆ ಕಡಿಮೆಯಾಗಿರುವುದರಿಂದ ರಾಜ್ಯದ ಹಲವೆಡೆ ಜನರಿಗೆ ತೊಂದರೆ ಉಂಟಾಗಿದೆ. ಗ್ಯಾಸ್ ಸರಬರಾಜಿನಲ್ಲಿ ವ್ಯತ್ಯಯ ಕಂಡುಬಂದಿದ್ದು, ಹೋಟೆಲ್ ಉದ್ಯಮಕ್ಕೂ (Hotel business) ಇದರಿಂದ ಭಾರೀ ಪರಿಣಾಮ ಬೀಳುವ ಪರಿಸ್ಥಿತಿ ಎದುರಾಗಿದೆ. ಈ ಸಂದರ್ಭವನ್ನು ದುರುಪಯೋಗಪಡಿಸಿಕೊಂಡ ಕೆಲವರು ಕಾಳಸಂತೆಯಲ್ಲಿ ಸಿಲಿಂಡರ್ ಮಾರಾಟ ಮಾಡುವ ಮೂಲಕ ಲಾಭ ಪಡೆಯುತ್ತಿರುವ ಘಟನೆಗಳು ಬೆಳಕಿಗೆ ಬಂದಿವೆ. ಕೋಲಾರ (Kolar) ಜಿಲ್ಲೆಯ ಕೆಜಿಎಫ್ ಭಾಗದಲ್ಲಿ ಅಕ್ರಮ ರೀ-ಫಿಲ್ಲಿಂಗ್ ಕೇಂದ್ರಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.

ಇದನ್ನೂ ಓದಿ : 60ಕ್ಕೂ ಹೆಚ್ಚು ಇಂದಿರಾ ಕ್ಯಾಂಟೀನ್ ತಾತ್ಕಾಲಿಕವಾಗಿ ಬಂದ್!

ನಗರದ ಅಂಡರ್ಸನ್ ಪೇಟೆಯ ಸಲ್ಡಾನ ಸರ್ಕಲ್ ಪ್ರದೇಶದಲ್ಲಿ ಗ್ಯಾಸ್ ಅನ್ನು ಅಕ್ರಮವಾಗಿ ತುಂಬಿಸುತ್ತಿದ್ದ ಸ್ಥಳದ ಬಗ್ಗೆ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದರು. ರಾಜಾ ಸಾಬ್ ಎಂಬ ವ್ಯಕ್ತಿ ಸಂಗ್ರಹಿಸಿದ್ದ ಎರಡು ಸಿಲಿಂಡರ್‌ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.

ಪೂರೈಕೆ ತೊಂದರೆಯಿಂದ ಕಾಳಸಂತೆಯಲ್ಲಿ ಗ್ಯಾಸ್ ಬೆಲೆ ಭಾರೀ ಏರಿಕೆಯಾಗಿದೆ. ಮೊದಲು ಕಡಿಮೆ ದರದಲ್ಲಿದ್ದ ಗ್ಯಾಸ್ ಈಗ ಕಿಲೋಗೆ 250ರಿಂದ 280 ರೂಪಾಯಿ ವರೆಗೆ ಮಾರಾಟವಾಗುತ್ತಿದೆ. ಹೋಟೆಲ್‌ಗಳಿಗೆ ನೀಡಬೇಕಿದ್ದ ಸಿಲಿಂಡರ್‌ಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿರುವುದನ್ನು ತಡೆಯಲು ಸಾರ್ವಜನಿಕರು ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಹೆಚ್ಚಿನ ಸುದ್ದಿ

Change Language »
error: Content is protected !!