ರಾಹುಲ್ ಗಾಂಧಿಯ ಸಂಸದ ಸ್ಥಾನ ರದ್ದುಗೊಳಿಸಿದ್ದನ್ನು ಖಂಡಿಸಿ ಕಾಂಗ್ರೆಸ್ ದೆಹಲಿಯ ರಾಜಘಟ್‌ನಲ್ಲಿ ಸತ್ಯಾಗ್ರಹ ನಡೆಸುತ್ತಿದ್ದು, ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸಿದ್ದಾರೆ.
ಮೋದಿಯನ್ನು ಮತ್ತೊಮ್ಮೆ ಹೇಡಿ ಎಂದು ಕರೆದ ಪ್ರಿಯಾಂಕಾ ಗಾಂಧಿ, ಅವರೊಬ್ಬ ದುರಹಂಕಾರಿ ವ್ಯಕ್ತಿ ಎಂದು ಕರೆದಿದ್ದಾರೆ. ಅಲ್ಲದೆ, ದೇಶದಲ್ಲಿ ಪ್ರಜಾಪ್ರಭುತ್ವವನ್ನು ಪೋಷಿಸುವಲ್ಲಿ ತಮ್ಮ ಕುಟುಂಬ ನೀಡಿದ ಕೊಡುಗೆ ಬಗ್ಗೆಯೂ ಪ್ರಿಯಾಂಕ ಗಮನ ಸೆಳೆದಿದ್ದಾರೆ.
ಈ ದೇಶದ ಪ್ರಧಾನಿ ಒಬ್ಬ ಹೇಡಿ. ನನ್ನ ಮೇಲೆ ಕೇಸು ಹಾಕಿ, ಜೈಲಿಗೆ ಕಳಿಸಲಿ. ಆದರೆ ಸತ್ಯವೇನೆಂದರೆ ಈ ದೇಶದ ಪ್ರಧಾನಿ ಒಬ್ಬ ಹೇಡಿ … ಅವರು ತನ್ನ ಅಧಿಕಾರದ ಹಿಂದೆ ಅಡಗಿಕೊಂಡಿದ್ದಾರೆ, ಅವರು ಒಬ್ಬ ದುರಹಂಕಾರಿ. ಈ ದೇಶಕ್ಕೆ ಹಳೆಯ ಸಂಪ್ರದಾಯವೊಂದಿದೆ, ಹಿಂದೂ ಧರ್ಮದ ಹಳೆಯ ಸಂಪ್ರದಾಯವನ್ನು ಹೊಂದಿದೆ … ಅಹಂಕಾರಿ ರಾಜನಿಗೆ ಜನರೇ ಜವಾಬು ಕೊಡುತ್ತಾರೆ ಎಂದು ಪ್ರಿಯಾಂಕ ಹೇಳಿದ್ದಾರೆ.
ಒಬ್ಬ ವ್ಯಕ್ತಿಯನ್ನು ಉಳಿಸಲು ಇಡೀ ಸರ್ಕಾರ ಏಕೆ ಪ್ರಯತ್ನಿಸುತ್ತಿದೆ? ಇಡೀ ದೇಶದ ಸಂಪತ್ತನ್ನು ನೀಡುತ್ತಿರುವ ಈ ಅದಾನಿಯಲ್ಲಿ ಏನಿದೆ? ಅವರ ಹೆಸರನ್ನು ತೆಗೆದುಕೊಂಡಾಗ ನೀವೇನಕ್ಕೆ ವಿಚಲಿತರಾಗ್ತೀರಿ? ಎಂದು ಪ್ರಿಯಾಂಕಾ ಕೇಳಿದ್ದಾರೆ.