ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ರಾಜ್ಯ ಪೊಲೀಸ್ ಇಲಾಖೆ ಫೀಲ್ಡಿಗಿಳಿದಿದ್ದು, ಪ್ರತಿಯೊಬ್ಬರ ಮೇಲೆ ಹದ್ದಿನ ಕಣ್ಣಿಟ್ಟಿದೆ.
ಶಿವಮೊಗ್ಗ
ಅಕ್ರಮವಾಗಿ ಬೊಲೆರೋ ವಾಹನದಲ್ಲಿ ಸಾಗಿಸುತ್ತಿದ್ದ 4.50 ಕೋಟಿ ರೂ. ಮೌಲ್ಯದ ಸೀರೆಗಳನ್ನು ಹಾಗೂ 1.40 ಕೋಟಿ ಹಣವನ್ನು ಶಿವಮೊಗ್ಗದ ದೊಡ್ಡಪೇಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಭರ್ಜರಿ ಕಾರ್ಯಾಚರಣೆ ನಡೆಸಿದ ಅಬಕಾರಿ ಇಲಾಖೆ ಸಿಬ್ಬಂದಿ ಅಕ್ರಮವಾಗಿ ಕಾರಿನಲ್ಲಿ ಶಿವಮೊಗ್ಗದ ದೇವಬಾಳ-ಯಡವಾಳ ಬಳಿ ಸಾಗಿಸುತ್ತಿದ್ದ ವಿವಿಧ ಬಗೆಯ 3 ಲಕ್ಷದ 21 ಸಾವಿರದ ಮೌಲ್ಯದ ಮದ್ಯವನ್ನು ವಶಕ್ಕೆ ಪಡೆದು ಓರ್ವನನ್ನು ಬಂಧಿಸಿ ವಿಚಾರಣೆ ಮಾಡ್ತಿದ್ದಾರೆ.
ಬೆಂಗಳೂರು
ಇನ್ನು ಬೆಂಗಳೂರಿನಲ್ಲೂ ಂಆಉP ಅಲೋಕ್ ಕುಮಾರ್, ಬೆಂಗಳೂರು ಕಮಿಷನರ್ ಜತೆಗೆ ಜಿಲ್ಲಾ ಕಮಿಷನರ್, ಐಜಿಪಿ, ಎಸ್ಪಿಗಳು ತಡರಾತ್ರಿ ಪೊಲೀಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.
ಮಂಗಳೂರು ಮತ್ತು ಮೈಸೂರಿನಲ್ಲಿ 500 ಲೀಟರ್ ಮದ್ಯ, ಅಲ್ಲದೇ ರಾಜ್ಯದ ಹಲವು ಚೆಕ್ ಪೋಸ್ಟ್ಗಳಲ್ಲಿ 50 ಲಕ್ಷ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನೀತಿ ಸಂಹಿತೆ ಉಲ್ಲಂಘನೆ ಸಂಬAಧ ರಾಮನಗರ ಜಿಲ್ಲೆಯಲ್ಲಿ 13 ಕೇಸ್ ದಾಖಲು ಆಗಿದೆ. ಜಿಲ್ಲೆಯ ವಿವಿಧ ಚೆಕ್ ಪೋಸ್ಟ್ ನಲ್ಲಿ ಪೋಲಿಸರ ತಪಾಸಣೆ ವೇಳೆ 75 ಸಾವಿರ ಮೌಲ್ಯದ 82 ಲೀ ಮದ್ಯ 2 ಲಕ್ಷ ಮೌಲ್ಯದ ಮಾದಕ ವಸ್ತುಗಳು ಹಾಗೂ 14 ಲಕ್ಷದ 50 ಸಾವಿರ ರೂ ಹಣ ವಶಕ್ಕೆ ಪಡೆಯಲಾಗಿದೆ.