ಕೇರಳ : ನಾಗರೀಕ ಸಮಾಜದಲ್ಲಿ ದೈಹಿಕ ಸುಖಕ್ಕಾಗಿ ಸೆಕ್ಸ್ ವರ್ಕರ್ಸ್‌ಗಳ (Sex workers) ಮೊರೆ ಹೋಗುವ ವ್ಯಕ್ತಿಗಳನ್ನು ‘ಗ್ರಾಹಕ’ (Customer) ಎಂದು ಪರಿಗಣಿಸಲು ಸಾಧ್ಯವಿಲ್ಲ. ಗ್ರಾಹಕ ಅಥವಾ ಸೇವೆ ಎಂಬುದು ಇಲ್ಲಿ ಸಮಂಜಸವಲ್ಲ. ಸೆಕ್ಸ್ ವರ್ಕರ್ಸ್ ಗಳನ್ನು ಉತ್ಪನ್ನ ಅಥವಾ ವಸ್ತುವಿನ ರೀತಿ ನೋಡುವುದು ಸರಿಯಲ್ಲ ಎಂದು ಕೇರಳ ಹೈಕೋರ್ಟ್ (Kerala highcourt) ಹೇಳಿದೆ.
ಇದನ್ನೂ ಓದಿ : ಅನುಕಂಪದ ನೌಕರಿಗೆ ಸೋದರರಿಗೂ ಇದೆ ಹಕ್ಕು – ಹೈಕೋರ್ಟ್ ಮಹತ್ವದ ತೀರ್ಪು!
ಹೀಗಾಗಿ ಲೈಂಗಿಕ ಸುಖಕ್ಕಾಗಿ ಸೆಕ್ಸ್ ವರ್ಕರ್ಸ್ ಮೊರೆ ಹೋಗುವ ವ್ಯಕ್ತಿಯ ವಿರುದ್ಧ ಅನೈತಿಕ ಕಳ್ಳಸಾಗಣೆ ಕಾಯ್ದೆ 1956ರ ಅನ್ವಯ ಕಾನೂನು ಕ್ರಮ ಜರುಗಿಸಲು ಅವಕಾಶವಿದೆ. ಲೈಂಗಿಕ ಕಾರ್ಯಕರ್ತೆಗೆ ಹಣ ನೀಡುವ ಮೂಲಕ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ವ್ಯಕ್ತಿ ವೇಶ್ಯಾವಾಟಿಕೆ ಉತ್ತೇಜಿಸಿದಂತಾಗುತ್ತದೆ ಎಂದು ಕೇರಳ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ವೇಶ್ಯಾವಾಟಿಕೆ ನಡೆಸುತ್ತಿದ್ದ ವ್ಯಕ್ತಿಯೊಬ್ಬ ಆರೋಪ ಎದುರಿಸುತ್ತಿದ್ದ ವ್ಯಕ್ತಿಯೊಬ್ಬ ಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿಯನ್ನು ಪೀಠ ವಿಚಾರಣೆ ನಡೆಸಿತು. ಈ ವೇಳೆ, ಲೈಂಗಿಕ ಸುಖಕ್ಕಾಗಿ ಸೆಕ್ಸ್ ವರ್ಕರ್ಸ್ ಗಳನ್ನು ಅವಲಭಿಸುವವರನ್ನು ಗ್ರಾಹಕ ಎನ್ನಲು ಸಾಧ್ಯವಿಲ್ಲ ಎಂದು ಹೇಳಿದೆ.
ಕೇರಳದ ಪೆರೂರ್ಕಡ ಪೊಲೀಸ್ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಈ ಪ್ರಕರಣದ ಅರ್ಜಿದಾರ & ಮಹಿಳೆ ಒಟ್ಟಿಗೆ ಬೆತ್ತಲೆಯಾಗಿ ಪತ್ತೆಯಾಗಿದ್ದರು. ಆದ್ರೆ ಈ ಪ್ರಕರಣದಲ್ಲಿ ಪತ್ತೆಯಾಗಿದ್ದ ವ್ಯಕ್ತಿ ಗ್ರಾಹಕ ಮಾತ್ರ. ಆತನ ವಿರುದ್ಧ ವೇಶ್ಯಾವಾಟಿಕೆಗೆ ಪ್ರೇರೇಪಿಸಿದ ಆರೋಪ ಹೊರಿಸಲು ಸಾಧ್ಯವಿಲ್ಲ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು. ಆದ್ರೆ ಕೋರ್ಟ್ ಈ ವಾದವನ್ನು ತಿರಸ್ಕರಿಸಿದೆ.