ಬೆಂಗಳೂರು: ಒಂದು ಗಂಡು ಮತ್ತು ಹೆಣ್ಣಿನ ನಡುವೆ ನಡೆಯುವ ಲೈಂಗಿಕ ಕ್ರಿಯೆಗೆ (Sex) ಪರಸ್ಪರ ಸಮ್ಮತಿ (Mutual consent) ಇದ್ದಲ್ಲಿ ಅದು ಅಪರಾಧವಲ್ಲ ಎಂದು ಕರ್ನಾಟಕ ಹೈಕೋರ್ಟ್ (Highcourt) ಹೇಳಿದೆ. ಮಹಿಳೆಯೊಬ್ಬರು ವ್ಯಕ್ತಿಯೊಬ್ಬರ ವಿರುದ್ಧ ದಾಖಲಿಸಿದ್ದ ರೇಪ್ ಕೇಸ್ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಲಯ ಈ ಮಹತ್ವದ ತೀರ್ಪು ನೀಡಿದ್ದು, ಹೈಕೋರ್ಟ್ ಕೇಸ್ ಅನ್ನು ರದ್ದುಗೊಳಿಸಿದೆ.
ಮಹಿಳೆಯೊಬ್ಬರು ವ್ಯಕ್ತಿಯೊಬ್ಬರ ಮೇಲೆ ಅತ್ಯಾಚಾರದ ಆರೋಪ ಹೊರಿಸಿದ್ದರು. ಡೇಟಿಂಗ್ ಆಪ್ ನಲ್ಲಿ ಭೇಟಿಯಾಗಿ, ಆ ನಂತರ ಓಯೋ ರೂಂನಲ್ಲಿ ತನ್ನ ಮೇಲೆ ರೇಪ್ ನಡೆದಿದೆ ಎಂದು ಆರೋಪ ಮಾಡಿದ್ದರು . ಆದ್ರೆ ಇದು ಸುಳ್ಳು ಆರೋಪ ಹೀಗಾಗಿ ಎಫ್ಐಆರ್ ರದ್ದುಪಡಿಸುವಂತೆ ವ್ಯಕ್ತಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಪರಸ್ಪರ ಸಮ್ಮತಿಯ ಲೈಂಗಿಕ ಕ್ರಿಯೆ ಅಪರಾಧವಲ್ಲ ಎಂದು ತೀರ್ಪು ನೀಡಿದೆ.
ಇದನ್ನೂ ಓದಿ : ಪುತ್ರನನ್ನ ಹೊರಹಾಕಿದ್ರೂ.. ಸೊಸೆಯನ್ನು ಹೊರಹಾಕುವಂತಿಲ್ಲ : ದೆಹಲಿ ಹೈಕೋರ್ಟ್
ಹೀಗಾಗಿ ಎಫ್.ಐ.ಆರ್ ರದ್ದುಪಡಿಸುವಂತೆ ಅರ್ಜಿ ಸಲ್ಲಿಸಿದ್ದ ಸಾಂಪ್ರಾಸ್ ಆಂಥೋಣಿ ಅವರ ಅರ್ಜಿಯನ್ನು ನ್ಯಾಯಾಲಯ ಪುರಸ್ಕರಿಸಿದೆ. ಈ ಮಹಿಳೆ ಮತ್ತು ಯುವಕ ಡೇಟಿಂಗ್ ಆಪ್ ನಲ್ಲಿ 1 ವರ್ಷದಿಂದ ಸಂಪರ್ಕದಲ್ಲಿದ್ದರು. ಆ ಬಳಿಕ ಭೇಟಿಯಾದ ಜೋಡಿ ಓಯೋ ರೂಮ್ ನಲ್ಲಿ ಲೈಂಗಿಕ ಕ್ರಿಯೆ ನಡೆಸಿದ್ದಾರೆ. ಆದ್ರೆ ತನ್ನ ಪ್ರತಿರೋಧದ ನಂತರವೂ ಲೈಂಗಿಕ ಕ್ರಿಯೆ ನಡೆಸಿದ್ದಾಗಿ ಮಹಿಳೆ ಆರೋಪಿಸಿದ್ದರು.
ಆದ್ರೆ ಈ ಯುವಕ ಮತ್ತು ಮಹಿಳೆ ಚಾಟಿಂಗ್ ನಲ್ಲಿ ಪರಸ್ಪರ ಪೋಟೋ, ವೀಡಿಯೋಗಳನ್ನು ವಿನಿಯಮ ಮಾಡಿಕೊಂಡಿದ್ದಾರೆ.ಈ ಅಂಶಗಳನ್ನು ಗಮನಿಸಿದಾಗ ಮಹಿಳೆಯ ಆರೋಪ ಸುಳ್ಳೆಂದು ಸಾಭೀತಾಗುತ್ತದೆ. ಹೀಗಾಗಿ ಇದನ್ನು ಅತ್ಯಾಚಾರ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಹೇಳಿದ್ದಾರೆ.