Monday, June 15, 2026
Homeಟಾಪ್ ನ್ಯೂಸ್CONGRESS : ಕರ್ತವ್ಯ ಲೋಪ, ರಾಜ್ಯ ಯುವ ಕಾಂಗ್ರೆಸ್ ನಾಯಕರಿಗೆ ಹೈಕಮಾಂಡ್ ಶಾಕ್!

CONGRESS : ಕರ್ತವ್ಯ ಲೋಪ, ರಾಜ್ಯ ಯುವ ಕಾಂಗ್ರೆಸ್ ನಾಯಕರಿಗೆ ಹೈಕಮಾಂಡ್ ಶಾಕ್!

ಬೆಂಗಳೂರು: ರಾಜಕೀಯ ಚಟುವಟಿಕೆಗಳಿಂದ ದೂರ ಉಳಿದಿದ್ದ ಕರ್ನಾಟಕ ಯುವ ಕಾಂಗ್ರೆಸ್‌ನ (Youth congress) ಒಟ್ಟು ಹದಿನೈದು ಪದಾಧಿಕಾರಿಗಳನ್ನು ಭಾರತೀಯ ಯುವ ಕಾಂಗ್ರೆಸ್ (INC) ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದೆ (Suspend). ಸಂಘಟನೆಯ ನಿಯಮಾವಳಿಗಳ ಪ್ರಕಾರ ಸಭೆಗಳಿಗೆ ಹಾಜರಾಗದೆ ಮತ್ತು ಜವಾಬ್ದಾರಿಗಳನ್ನು ನಿಭಾಯಿಸದೆ ನಿಷ್ಕ್ರಿಯರಾಗಿದ್ದ ನಾಯಕರ ವಿರುದ್ಧ ಮೇ 13 ರಂದೇ ಈ ಶಿಸ್ತುಕ್ರಮ ಜರುಗಿಸಲಾಗಿದೆ.

ಹೀಗೆ ಪಕ್ಷವನ್ನು ಬಲಪಡಿಸುವಲ್ಲಿ ವಿಫಲರಾದ ಕಾರಣಕ್ಕಾಗಿ ತಾತ್ಕಾಲಿಕವಾಗಿ ಉಚ್ಚಾಟನೆಗೊಂಡ ಪ್ರಮುಖರ ವಿವರ ಹೀಗಿದೆ. ರಾಜ್ಯ ಉಪಾಧ್ಯಕ್ಷರಾಗಿದ್ದ ದೀಪಿಕಾ ರೆಡ್ಡಿ ಸೇರಿ ಪ್ರಧಾನ ಕಾರ್ಯದರ್ಶಿಗಳಾದ ಸಿ.ಎಸ್. ಫ್ರಾನ್ಸಿಸ್ ಬೆನಿಟೊ, ಬಿಂದು ಗೌಡ, ಸುಮನ್ ಸೋಮಶೇಖರ್, ಅಫ್ನಾನಖಾನಂ, ಲಕ್ಷ್ಮಿ ಕೆ, ವಾಣಿ ಕಾಂಬ್ಳೆ ಹಾಗೂ ದಕ್ಷಿಣಮೂರ್ತಿ ಎಸ್ ಅವರು ಸ್ಥಾನ ಕಳೆದುಕೊಂಡಿದ್ದಾರೆ.

ಇನ್ನು ಇವರೊಂದಿಗೆ ಕಾರ್ಯದರ್ಶಿಗಳ ವಿಭಾಗದಲ್ಲಿದ್ದ ಅಬ್ದುಲ್ ರವೂಫ್ ಬಿ.ಎಂ., ಸೈಯದ್ ಹುಸೇನ್ ಖಾದ್ರಿ, ಮೊಹಮ್ಮದ್ ಆಸಿಫ್ ಹುಸೇನ್, ಎಸ್.ಆರ್.ಎಸ್ ಚಂದ್ ಬಾಷಾ, ಗೋವರ್ಧನ್ ಜಿ.ಸಿ., ಪವನ್ ಸಾಲಿಯಾನ್ ಮತ್ತು ನವೀನ್ ಕುಮಾರ್ ಎಸ್ ಅವರನ್ನು ಹುದ್ದೆಯಿಂದ ಮುಕ್ತಗೊಳಿಸಲಾಗಿದೆ. ಸಂಘಟನಾ ಹಿತದೃಷ್ಟಿಯಿಂದ ಹೈಕಮಾಂಡ್ ಈ ಕಠಿಣ ನಿರ್ಧಾರ ತಳೆದಿದೆ.

ಹೆಚ್ಚಿನ ಸುದ್ದಿ

Change Language »
error: Content is protected !!