ಬೆಂಗಳೂರು: ಹುಣ್ಣಿಮೆಗೆ ಕಾಣುವ ಪೂರ್ಣ ಚಂದಿರ ತನ್ನ ಬಿಳಿ ಬಣ್ಣದಿಂದ ಪ್ರಪಂಚಕ್ಕೆ ಬೆಳದಿಂಗಳ ನೀಡುತ್ತಾನೆ. ಆದರೆ ಗುರುವಾರ ಸಂಭವಿಸಿದ ಹುಣ್ಣಿಮೆ ಚಂದಿರ ತನ್ನ ಬಣ್ಣ ಬದಲಿಸಿ ಎಲ್ಲರಲ್ಲು ಅಚ್ಚರಿ ಮೂಡಿಸಿದ್ದಾನೆ.
ಏ. 6 ರಂದು ಸಂಭವಿಸಿದ ಪೂರ್ಣ ಚಂದಿರ ಬದಲಾಗಿತ್ತು. ಪ್ರತಿ ಬಾರಿ ಬಿಳಿ ಬಣ್ಣದಲ್ಲಿ ಬರುತ್ತಿದ್ದ ಚಂದಿರ ನಿನ್ನೆ ಪಿಂಕ್ ಮೂನ್ ಆಗಿದ್ದ. ಆದರೆ ಈ ಪಿಂಕ್ ಮೂನ್ ಹಗಲಿನಲ್ಲಿ ಸಂಭವಿಸಿರುವುದರಿಂದ ಭಾರತದಲ್ಲಿ ಇದು ಗೋಚರಿಸಿಲ್ಲ. ವಿದೇಶಗಳಲ್ಲಿ ಪಿಂಕ್ ಮೂನ್ ಕಂಡಿದ್ದು, ಅದರ ಫೋಟೋಗಳನ್ನು ಸಾಮಾಜಿಕ ಮಾದ್ಯಮದಲ್ಲಿ ಹಂಚಿಕೊಳ್ಳಲಾಗಿದೆ.
ಪ್ರತಿ ಹುಣ್ಣಿಮೆಗೆ ಬಿಳಿ ಬಣ್ಣದ ಪೂರ್ಣ ಚಂದಿರನನ್ನ ಕಾಣುತ್ತಿದ್ದ ಜನ, ಪಿಂಕ್ ಮೂನ್ ಕಂವು ಅಚ್ಚರಿಗೊಂಡಿದ್ದಾರೆ.