Sunday, May 17, 2026
Homeಟಾಪ್ ನ್ಯೂಸ್ದಿ ಎಲಿಫೆಂಟ್ ವಿಸ್ಪರರ್ಸ್ ಗೆ ಆಸ್ಕರ್ ಗರಿ

ದಿ ಎಲಿಫೆಂಟ್ ವಿಸ್ಪರರ್ಸ್ ಗೆ ಆಸ್ಕರ್ ಗರಿ

ಕಾರ್ತಿಕಿ ಗೊನ್ಸಾಲ್ವೆಸ್ ನಿರ್ದೇಶನದ ಭಾರತದ ಕಿರುಚಿತ್ರ ದಿ ಎಲಿಫೆಂಟ್ ವಿಸ್ಪರರ್ಸ್‌ಗೆ ಆಸ್ಕರ್ ಗೌರವ ಸಂದಿದೆ.  ಬೆಸ್ಟ್ ಡಾಕ್ಯುಮೆಂಟ್ ಶಾರ್ಟ್ ಫಿಲಂ ಕೆಟಗರಿಯಲ್ಲಿ ಆಸ್ಕರ್ ಪ್ರಶಸ್ತಿ ಪಡೆದಿರುವ ಈ ಕಿರುಚಿತ್ರಕ್ಕೆ ಗುನೀತ್ ಮೊಂಗಾ ನಿರ್ಮಾಣ ಮಾಡಿದ್ದಾರೆ.

ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವೆಸ್

ಕಳೆದ ವರ್ಷ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ ದಿ ಎಲಿಫೆಂಟ್ ವಿಸ್ಪರರ್ಸ್ ಕಿರುಚಿತ್ರ ಮುದುಮಲೈ ರಾಷ್ಟ್ರೀಯ ಉದ್ಯಾನವನದಲ್ಲಿ ಚಿತ್ರೀಕರಿಸಲಾಗಿತ್ತು.

೨ ಅನಾಥ ಆನೆ ಮರಿಗಳನ್ನು ಸ್ಥಳೀಯ ದಂಪತಿ ಬೆಳ್ಳಿ ಹಾಗೂ ಬೊಮ್ಮನ್ ಆರೈಕೆ ಮಾಡಿ ಬೆಳೆಸುತ್ತಾರೆ. ಅವುಗಳೀಗೆ ರಘು ಮತ್ತು ಅಮ್ಮು ಎಂದು ಹೆಸರಿಡುತ್ತಾರೆ. ಆನೆ ಮರಿಗಳ ಆರೈಕೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಡುವ ಈ ದಂಪತಿಗಳ ಕಥೆ ಹಾಗೂ ಆನೆಗಳೊಂದಿಗಿನ ಭಾವನಾತ್ಮಕ ಸಂಬಂಧವನ್ನು ಸುಂದವಾಗಿ ಚಿತ್ರೀಕರಿಸಲಾಗಿದ್ದು ಈ ಕಿರುಚಿತ್ರ ಜಾಗತಿಕ ಮೆಚ್ಚುಗೆಗೆ ಪಾತ್ರವಾಗಿದೆ

‘ದಿ ಎಲಿಫೆಂಟ್ ವಿಸ್ಪರರ್ಸ್’ ಜೊತೆಗೆ ‘ಬೆಸ್ಟ್ ಡಾಕ್ಯುಮೆಂಟರಿ ಶಾರ್ಟ್ ಫಿಲ್ಮ್’ ವಿಭಾಗದಲ್ಲಿ ‘ಹೌ ಡು ಯು ಮೆಷರ್‌ ಎ ಈಯರ್?’, ‘ಹೌಲ್‌ ಔಟ್’,  ‘ದಿ ಮಾರ್ಥಾ ಮಿಚೆಲ್ ಎಫೆಕ್ಟ್’, ‘ಸ್ಟ್ರೇಂಜರ್ ಅಟ್ ದಿ ಗೇಟ್’ ಸಾಕ್ಷ್ಯಚಿತ್ರಗಳು ಉತ್ತಮ ಕಿರುಚಿತ್ರ ವಿಭಾದ ಸ್ಪರ್ಧೆಯಲ್ಲಿದ್ದವು

ಹೆಚ್ಚಿನ ಸುದ್ದಿ

Change Language »
error: Content is protected !!