ನವದೆಹಲಿ: ಪುರುಷನೊಟ್ಟಿಗೆ ವಿವಾಹದ (Marriage) ನಂತರ ಮಹಿಳೆ ಪತಿಯ (Husband wife) ಮನೆಯಲ್ಲಿ ನೆಲಸುವ ಸಂಪೂರ್ಣ ಹಕ್ಕನ್ನು ಹೊಂದಿರುತ್ತಾಳೆ. ಒಂದುವೇಳೆ ಆಕೆಯ ಪತಿಯನ್ನು ಆತನ ಪೋಷಕರು ಅಂದ್ರೆ ಮಹಿಳೆಯ ಅತ್ತೆ, ಮಾವ ಮಗನನ್ನು ಮನೆಯಿಂದ ಹೊರಹಾಕಿದರೂ ಸೊಸೆ ಮಾತ್ರ ಆ ಮನೆಯಲ್ಲಿ ನೆಲೆಸಲು ಹಕ್ಕನ್ನು ಹೊಂದಿರುತ್ತಾಳೆ ಎಂದು ದೆಹಲಿ ಹೈಕೋರ್ಟ್ (Delhi court) ಹೇಳಿದೆ.
ಇದನ್ನೂ ಓದಿ : ಸಂಗಾತಿ ಆರ್ಥಿಕ ಸ್ವಾವಲಂಬಿಯಾಗಿದ್ರೆ ಜೀವನಾಂಶ ನೀಡುವಂತಿಲ್ಲ, ಕೋರ್ಟ್ ಮಹತ್ವದ ತೀರ್ಪು
ಈ ಸಂಬಂಧ ಇಂದು (ಅ.19) ಮಹಿಳೆಯ ಅತ್ತೆ ಮತ್ತು ಮಾವ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ಅರ್ಜಿಯನ್ನು ವಜಾಗೊಳಿಸಿದ್ದು, ಈ ಮೇಲ್ಕಂಡ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಹೀಗಾಗಿ ಒಮ್ಮೆ ವಿವಾಹದ ನಂತರ ಕಾನೂನು ಪ್ರಕ್ರಿಯೆ ಮೂಲಕ ಮಾತ್ರವೇ ಸೊಸೆಯನ್ನು ಮನೆಯಿಂದ ಹೊರಹಾಕಬಹುದು ಎಂದು ಪೀಠ ಹೇಳಿದೆ.
2010ರಲ್ಲಿ ದಂಪತಿ ವಿವಾಹವಾಗಿದ್ದರು. ಕೆಲವು ದಿನಗಳ ಬಳಿಕ ದಂಪತಿ ಮತ್ತು ಅತ್ತೆ ಮಾವ ಅಂದ್ರೆ ಈ ಪ್ರಕರಣದ ಅರ್ಜಿದಾರರ ನಡುವೆ ಜಗಳ ಕಲಹ ಸೃಷ್ಟಿಯಾದ ಹಿನ್ನಲೆ ಪರಸ್ಪರ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದರು. ಈ ವೇಳೆ ಅರ್ಜಿದಾರರು, ತಾವು ವಾಸವಿರುವ ನಿವಾಸ ಸ್ವಯಾರ್ಜಿತ ಎಂದು ಕೋರ್ಟ್ ಮೆಟ್ಟಿಲೇರಿದ್ದರು.ಆದ್ರೆ ಕೋರ್ಟ್ ಈ ಮೇಲ್ಕಂಡ ಅಭಿಪ್ರಾಯ ವ್ಯಕ್ತಪಡಿಸಿದೆ.