Wednesday, August 19, 2026
Homeಟಾಪ್ ನ್ಯೂಸ್SONAM WANGCHUK : ವಾಂಗ್ಚೂಕ್​​ ಶಾರೀರಿಕ ಸ್ವಾಯತ್ತತೆಗೆ ಧಕ್ಕೆಯಾಗಿಲ್ಲ- ಸೋನಂ ಪತ್ನಿಯ ಅರ್ಜಿ ವಜಾಗೊಳಿಸಿದ ದೆಹಲಿ...

SONAM WANGCHUK : ವಾಂಗ್ಚೂಕ್​​ ಶಾರೀರಿಕ ಸ್ವಾಯತ್ತತೆಗೆ ಧಕ್ಕೆಯಾಗಿಲ್ಲ- ಸೋನಂ ಪತ್ನಿಯ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್

ನವದೆಹಲಿ: ಸಾಮಾಜಿಕ ಹೋರಾಟಗಾರ ಸೋನಂ ವಾಂಗ್ಚುಕ್ (Sonam Wangchuk) ಅವರನ್ನು ಸಫ್ದರ್ಜಂಗ್ ಆಸ್ಪತ್ರೆಯಿಂದ ಖಾಸಗಿ ವೈದ್ಯಕೀಯ ಸಂಸ್ಥೆಗೆ ಸ್ಥಳಾಂತರಿಸಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ (Delhi Highcourt) ತಿರಸ್ಕರಿಸಿದೆ. ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಜೆ ಆಂಗ್ಮೋ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (PIL) ಮೂಲಕ ಈ ಬೇಡಿಕೆಯನ್ನು ನ್ಯಾಯಾಲಯದ ಮುಂದೆ ಇಟ್ಟಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಪೀಠ ಕೇಂದ್ರ ಸರ್ಕಾರದ ಕ್ರಮವನ್ನು ಎತ್ತಿಹಿಡಿದಿದೆ. ಹೋರಾಟಗಾರರ ಆರೋಗ್ಯ ಪರಿಸ್ಥಿತಿ ತೀರಾ ಕ್ಷೀಣಿಸುತ್ತಿದ್ದ ಕಾರಣದಿಂದಲೇ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ :  ಆಸ್ಪತ್ರೆಯಿಂದ ಸೋನಮ್ ವಾಂಗ್‌ಚುಕ್ ಮೊದಲ ಸಂದೇಶ: ಸಿಜೆಪಿ ಸಂಸತ್ ಮಾರ್ಚ್ ಯಶಸ್ವಿಗೊಳಿಸಲು ಕರೆ

ಹೀಗಾಗಿ ಆಡಳಿತ ಮಂಡಳಿಯ ಈ ತೀರ್ಮಾನ ಯಾವುದೇ ರೀತಿಯಲ್ಲೂ ಅವರ ವ್ಯಕ್ತಿಗತ ಸ್ವಾಯತ್ತತೆಯ ಹಕ್ಕನ್ನು ಉಲ್ಲಂಘಿಸುವುದಿಲ್ಲ ಮತ್ತು ಇದು ಪೂರ್ವಗ್ರಹ ಪೀಡಿತ ನಿರ್ಧಾರವಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಈ ಮೂಲಕ ವಾಂಗ್ಚುಕ್ ಅವರನ್ನು ಬೇರೆಡೆಗೆ ದಾಖಲಿಸುವಂತೆ ಕೋರಿದ್ದ ಮನವಿಗೆ ಕಾನೂನು ಹಿನ್ನಡೆಯಾಗಿದೆ.

ಹೆಚ್ಚಿನ ಸುದ್ದಿ

Change Language »
error: Content is protected !!