ನವದೆಹಲಿ : ಕರ್ನಾಟಕ (Karnataka), ಪಂಜಾಬ್, ತೆಲಂಗಾಣ ಹಾಗೂ ದೆಹಲಿ ರಾಜ್ಯಗಳಲ್ಲಿ ಪ್ರಸ್ತುತ ನಡೆಯುತ್ತಿರುವ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆಯ (SIR) ದಿನಾಂಕಗಳನ್ನು ಕೇಂದ್ರ ಚುನಾವಣಾ ಆಯೋಗ (Central Election commission) ಮುಂದೂಡಿದೆ. ಸಾರ್ವಜನಿಕರಿಂದ ನಿರೀಕ್ಷಿತ ಪ್ರಮಾಣದಲ್ಲಿ ದಾಖಲೆಗಳು ಸಲ್ಲಿಕೆಯಾಗದ ಕಾರಣ, ಮನೆ ಮನೆ ಸಮೀಕ್ಷೆ ಹಾಗೂ ಕರಡು ಪಟ್ಟಿ ಸಿದ್ಧಪಡಿಸುವ ಪ್ರಕ್ರಿಯೆಯನ್ನು ಹತ್ತು ದಿನಗಳ ಕಾಲ ವಿಸ್ತರಿಸಲು ಆಯೋಗ ನಿರ್ಧರಿಸಿದೆ.
ಈ ಹೊಸ ಆದೇಶದನ್ವಯ, ಕರ್ನಾಟಕದಲ್ಲಿ ಮನೆ ಮನೆ ಗಣತಿ ಕಾರ್ಯ ಆಗಸ್ಟ್ 8ರ ವರೆಗೆ ಮುಂದುವರಿಯಲಿದ್ದು, ಕರಡು ಪಟ್ಟಿಯನ್ನು ಆಗಸ್ಟ್ 17ರಂದು ಬಿಡುಗಡೆ ಮಾಡಲಾಗುತ್ತದೆ. ಆಕ್ಷೇಪಣೆ ಸಲ್ಲಿಸಲು ಸೆಪ್ಟೆಂಬರ್ 16ರ ವರೆಗೆ ಕಾಲಾವಕಾಶ ನೀಡಲಾಗಿದ್ದು, ಅಂತಿಮ ಮತದಾರರ ಪಟ್ಟಿ ಸೆಪ್ಟೆಂಬರ್ 18ರಂದು ಪ್ರಕಟಗೊಳ್ಳಲಿದೆ. ಇದೇ ರೀತಿಯ ಬದಲಾವಣೆಗಳು ದೆಹಲಿ, ಪಂಜಾಬ್ ಮತ್ತು ತೆಲಂಗಾಣ ರಾಜ್ಯಗಳ ವೇಳಾಪಟ್ಟಿಗೂ ಅನ್ವಯಿಸಲಿವೆ.
ಇದನ್ನೂ ಓದಿ : ಚುನಾವಣಾ ಆಯೋಗದಿಂದ ಬಿಎಲ್‌ಒಗಳಿಗೆ ಬಂಪರ್ ಕೊಡುಗೆ – 6,000 ರೂ. ವಿಶೇಷ ಗೌರವಧನ ಘೋಷಣೆ!
ಇದೇ ಪ್ರಕ್ರಿಯೆಯಡಿ ಒಟ್ಟು ಆರು ರಾಜ್ಯಗಳಲ್ಲಿ ಈವರೆಗೆ ನಡೆಸಿದ ಪರಿಶೀಲನೆಯಲ್ಲಿ ನಕಲಿ ಹಾಗೂ ಮರಣ ಹೊಂದಿದ ಸುಮಾರು 32 ಲಕ್ಷ ಮತದಾರರ ಹೆಸರುಗಳನ್ನು ಕೈಬಿಡಲಾಗಿದೆ. ಇದರಲ್ಲಿ ಒಡಿಶಾ ರಾಜ್ಯದಲ್ಲೇ ಅತಿ ಹೆಚ್ಚು ಹೆಸರುಗಳನ್ನು ತೆಗೆದುಹಾಕಲಾಗಿದ್ದು, ದಾದ್ರಾ ನಗರ ಹವೇಲಿಯಲ್ಲಿ ಗರಿಷ್ಠ ಪ್ರಮಾಣದ ಶೇಕಡಾವಾರು ಮತದಾರರ ಕಡಿತವಾಗಿದೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.