ನವದೆಹಲಿ: 2030ರ ಕಾಮನ್‌ವೆಲ್ತ್ ಕ್ರೀಡಾಕೂಟದ (2030 Commonwealth Games) ಆತಿಥ್ಯ ಅಧಿಕೃತವಾಗಿ ಭಾರತಕ್ಕೆ (India) ಹಸ್ತಾಂತರಗೊಂಡಿದ್ದು, ಗುಜರಾತ್‌ನ ಅಹಮದಾಬಾದ್‌ನಲ್ಲಿ ಈ ಜಾಗತಿಕ ಕ್ರೀಡೆಯನ್ನು ಆಯೋಜಿಸಲು ಸಿದ್ಧತೆಗಳು ಭರದಿಂದ ಸಾಗಿವೆ.
ಕಳೆದ ಗ್ಲಾಸ್ಗೋ ಆವೃತ್ತಿಗಿಂತ ಭಿನ್ನವಾಗಿ, ಭಾರತವು ಸುಮಾರು 15 ರಿಂದ 17 ವಿಭಿನ್ನ ಕ್ರೀಡಾ ಪ್ರಕಾರಗಳನ್ನು ಸೇರ್ಪಡೆಗೊಳಿಸಿ ಅತ್ಯಂತ ಅದ್ಧೂರಿಯಾಗಿ ಈ ಕೂಟವನ್ನು ನಡೆಸಲು ಯೋಜನೆ ರೂಪಿಸಿದೆ.
ಕ್ರೀಡಾಕೂಟದಲ್ಲಿ ‘ಯೋಗ’ ಮತ್ತು ‘ಕಬಡ್ಡಿ’?
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಸಾಂಪ್ರದಾಯಿಕ ಹಾಗೂ ಐತಿಹಾಸಿಕ ಕ್ರೀಡೆಗಳಾದ ‘ಯೋಗ’ ಮತ್ತು ಕಬಡ್ಡಿಯನ್ನು ಸೇರಿಸಲು ಭಾರತೀಯ ಕ್ರೀಡಾ ಪ್ರಾಧಿಕಾರ ತೀವ್ರ ಪರಿಶೀಲನೆ ನಡೆಸುತ್ತಿದೆ.
ಯೋಗ ಮತ್ತು ಕಬಡ್ಡಿಯನ್ನು ಕಾಮನ್‌ವೆಲ್ತ್‌ಗೆ ಸೇರ್ಪಡೆಗೊಳಿಸುವುದರಿಂದ ಈ ಎರಡೂ ಸಾಂಪ್ರದಾಯಿಕ ಕ್ರೀಡೆಗಳಿಗೆ ಅಭೂತಪೂರ್ವ ಜಾಗತಿಕ ಪ್ರಚಾರ ಮತ್ತು ಮನ್ನಣೆ ಸಿಗಲಿದೆ ಎಂದು ಅಧಿಕಾರಿಗಳು ಭಾವಿಸಿದ್ದಾರೆ.
2030ರ ಕಾಮನ್‌ವೆಲ್ತ್ ಕ್ರೀಡಾಕೂಟದ ಯಶಸ್ವಿ ಆಯೋಜನೆಯು ಭಾರತದ ಕ್ರೀಡಾ ಕ್ಷೇತ್ರದ ಅತಿದೊಡ್ಡ ಮೈಲಿಗಲ್ಲಾಗಲಿದ್ದು, 2036ರ ಒಲಿಂಪಿಕ್ಸ್ ಕ್ರೀಡಾಕೂಟವನ್ನು (2036 Olympic Games) ನಡೆಸಲು ಅಹಮದಾಬಾದ್ ಮಾಡುತ್ತಿರುವ ಬಿಡ್‌ಗೆ (Bid) ಆನೆಬಲ ನೀಡಲಿದೆ.
ಇದನ್ನೂ ಓದಿ: CRIME: ದೃಶ್ಯ ಸಿನಿಮಾ ಶೈಲಿಯ ಭೀಕರ ಕೊಲೆ ಪ್ರಕರಣ: 4 ವರ್ಷಗಳ ಬಳಿಕ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್