Wednesday, August 19, 2026
Homeಟಾಪ್ ನ್ಯೂಸ್NOBEL PRIZE : ವೈದ್ಯಕೀಯ ಕ್ಷೇತ್ರಕ್ಕೆ ನೊಬೆಲ್ ಪ್ರಶಸ್ತಿ ಪ್ರಕಟ, ಮೂವರು ವಿಜ್ಞಾನಿಗಳಿಗೆ ಸಂದ ಗೌರವ

NOBEL PRIZE : ವೈದ್ಯಕೀಯ ಕ್ಷೇತ್ರಕ್ಕೆ ನೊಬೆಲ್ ಪ್ರಶಸ್ತಿ ಪ್ರಕಟ, ಮೂವರು ವಿಜ್ಞಾನಿಗಳಿಗೆ ಸಂದ ಗೌರವ

ಸ್ವೀಡನ್ : 2025ನೇ ಸಾಲಿನ ವೈದ್ಯಕೀಯ ಕ್ಷೇತ್ರದ ನೊಬೆಲ್ ಪ್ರಶಸ್ತಿ (Nobel prize 2025) ಘೋಷಣೆ ಮಾಡಲಾಗಿದ್ದು, ರೋಗನಿರೋಧಕ ಶಕ್ತಿ ಹೆಚ್ಚಳ ಸಂಬಂಧ ನಡೆಸಿದ ಸಂಶೋಧನೆಗಾಗಿ ವಿಜ್ಞಾನಿಗಳಾದ ಅಮೆರಿಕದ ಮೇರಿ ಈ. ಬ್ರಂಕೋ (Mary E Brunkow), ಫ್ರೆಡ್ ರಾಮ್‌ಡೆಲ್ (Fred Ramsdell) ಹಾಗೂ ಜಪಾನ್‌ನ ಶಿಮೋನ್‌ ಸಕಾಗುಚಿ (Shimon sakaguch) ಅವರಿಗೆ ವೈದ್ಯಕೀಯ ನೊಬೆಲ್ ಘೋಷಣೆ ಮಾಡಲಾಗಿದೆ.

ಇದನ್ನೂ ಓದಿ : ಇಂದಿನಿಂದ ನೊಬೆಲ್ ಪ್ರಶಸ್ತಿ ಘೋಷಣೆ – ಟ್ರಂಪ್ ಡ್ರಾಮಾಗೆ ಸಿಗುತ್ತಾ ನೊಬೆಲ್ ಶಾಂತಿ ಪ್ರಶಸ್ತಿ?

ಇಂದು (ಅ.6) ಸ್ಟಾಕ್‌ಹೋಮ್‌ನ ಕರೊಲಿನ್ಸಾ ಇನ್‌ಸ್ಟಿಟ್ಯೂಟ್‌ನಲ್ಲಿ ಈ ಹೆಸರುಗಳನ್ನು ಅಧಿಕೃತವಾಗಿ ಘೋಷಿಸುವ ಮೂಲಕ 2025 ರ ನೊಬೆಲ್‌ ಪುರಸ್ಕಾರ ಘೋಷಣೆಗೆ ಚಾಲನೆ ದೊರೆತಿದೆ. ಕ್ಯಾನ್ಸರ್‌ಗೆ ಹೊಸ ವಿಧಾನದಲ್ಲಿ ಚಿಕಿತ್ಸೆ ನೀಡುವ ‘ಮೈಕ್ರೋಆರ್‌ಎನ್‌ಎ’
ಆವಿಷ್ಕಾರಕ್ಕಾಗಿ ಅಮೆರಿಕದ ವಿಕ್ಟರ್ ಆ್ಯಂಬೊಸ್ ಮತ್ತು ಗ್ಯಾರಿ ರುನ್ ಅವರಿಗೆ ಕಳೆದ ವರ್ಷ ವೈದ್ಯಕೀಯ ಕ್ಷೇತ್ರದ ನೊಬೆಲ್‌ ಪುರಸ್ಕಾರ ದೊರೆತಿತ್ತು.

ಇನ್ನುಳಿದಂತೆ ಭೌತವಿಜ್ಞಾನ, ರಸಾಯನ ವಿಜ್ಞಾನ ಕ್ಷೇತ್ರಗಳ ಪ್ರಶಸ್ತಿ ನೊಬೆಲ್ ವಿಜೇತರ ಹೆಸರನ್ನು ಅಕ್ಟೋಬರ್ 7 & 8 ರಂದು ಹಾಗೂ ಸಾಹಿತ್ಯ ಕ್ಷೇತ್ರದ ಪುರಸ್ಕಾರವನ್ನು 9 ರಂದು ಜೊತೆಗೆ ನೊಬೆಲ್‌ ಶಾಂತಿ ಪ್ರಶಸ್ತಿಯನ್ನು ಅಕ್ಟೋಬರ್ 10 ರಂದು ಘೋಷಿಸಲಾಗುತ್ತದೆ. ಡಿಸೆಂಬರ್ 10ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಹೆಚ್ಚಿನ ಸುದ್ದಿ

Change Language »
error: Content is protected !!