Wednesday, March 26, 2025
Homeಟಾಪ್ ನ್ಯೂಸ್ಆಸ್ಕರ್ ಗೆದ್ದ 'ನಾಟು ನಾಟು'ಗೆ  ಟೆಸ್ಲಾ ಕಾರುಗಳ ಲೈಟ್ ಶೋ

ಆಸ್ಕರ್ ಗೆದ್ದ ‘ನಾಟು ನಾಟು’ಗೆ  ಟೆಸ್ಲಾ ಕಾರುಗಳ ಲೈಟ್ ಶೋ

ಆಸ್ಕರ್‌ನ ಗೆಲುವಿನ ನಂತರ, RRR ನ ನಾಟು ನಾಟು ಹಾಡು ಪ್ರಪಂಚದಾದ್ಯಂತ ಹೊಸ ಕ್ರೇಜ್ ಹುಟ್ಟುಹಾಕಿದೆ. ಸೆಲೆಬ್ರಿಟಿಗಳು, ಕ್ರಿಕೆಟಿಗರು, ಸೇರಿದಂತೆ ಎಲ್ಲರೂ ನಾಟು ನಾಟು ಹಾಡಿನ ಸ್ಟೆಪ್ ಹಾಕಿ ಕುಣಿಯುತ್ತಿದ್ದಾರೆ. ಇದೀಗ, ಹಾಡಿನ ಬೀಟ್‌ಗಳಿಗೆ ಟೆಸ್ಲಾ ಕಾರುಗಳ ಹೆಡ್‌ಲೈಟ್‌ ಗಳು ಮಿಂಚುವ  ವಿಡಿಯೋ ವೈರಲ್ ಆಗಿದೆ

ನಾಟು ನಾಟು ಹಾಡಿನ ಚಿತ್ರ

ವಿಭಿನ್ನ ನೃತ್ಯದಿಂದ ಅಭಿಮಾನಿಗಳ ಮನಗೆದ್ದಿದ್ದ ನಾಟು ನಾಟು ಹಾಡಿಗೆ ಕಾರುಗಳ ಲೈಟ್ ಡ್ಯಾನ್ಸ್‌ ವೈರಲ್ ವೀಡಿಯೊವನ್ನು RRR ಚಿತ್ರದ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ವೀಡಿಯೊ ಕ್ಲಿಪ್‌ನಲ್ಲಿ, ಹಲವಾರು ಟೆಸ್ಲಾ ಕಾರುಗಳು ನ್ಯೂಜೆರ್ಸಿಯಲ್ಲಿ ನಾಟು ನಾಟು ಬೀಟ್‌ಗಳಿಗೆ ಲಯಬದ್ಧವಾಗಿ ಬೆಳಗಿ ಸಂಚಲನ ಸೃಷ್ಠಿಸಿದೆ.

ಹೆಚ್ಚಿನ ಸುದ್ದಿ

error: Content is protected !!