Wednesday, March 26, 2025
Homeದೇಶರಾಮನವಮಿ ಆಚರಣೆ ವೇಳೆ ಗಲಭೆ: ಪೊಲೀಸ್ ವಾಹನಗಳಿಗೆ ಬೆಂಕಿ

ರಾಮನವಮಿ ಆಚರಣೆ ವೇಳೆ ಗಲಭೆ: ಪೊಲೀಸ್ ವಾಹನಗಳಿಗೆ ಬೆಂಕಿ

ಮುಂಬೈ: ಕ್ಷುಲ್ಲಕ ಕಾರಣವೊಂದಕ್ಕೆ 2 ಗುಂಪುಗಳ ನಡುವೆ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿದ್ದು, ಹಿಂಸಾಚಾರ ನಡೆದು ಪೊಲೀಸ್ ತಂಡವೊಂದರ ಮೇಲೆ ದಾಳಿ ನಡೆಸಿ, ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿರುವ ಘಟನೆ ಮುಂಬೈಯ ಔರಂಗಾಬಾದ್ ನಲ್ಲಿ ನಡೆದಿದೆ.

ರಮಝಾನ್ ತಿಂಗಳು ಮತ್ತು ರಾಮ ನವಮಿಯ ಸಂದರ್ಭದಲ್ಲೇ ಈ ಹಿಂಸಾಚಾರ ನಡೆದಿರುವುದರಿಂದ ಪರಿಸ್ಥಿತಿಯ ನಿಯಂತ್ರಣಕ್ಕೆ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ.

ಹಿಂಸಾಚಾರದಲ್ಲಿ 500–600 ಯುವಕರು ಭಾಗಿಯಾಗಿದ್ದಾರೆ ಎನ್ನಲಾಗಿದ್ದು, ಇದುವರೆಗೂ ಯಾರನ್ನೂ ಗುರುತಿಸಿಲ್ಲ.

’ಕೆಲ ಯುವಕರ ಜಗಳದಿಂದ ಇದು ಆರಂಭವಾಗಿತ್ತು. ಆರೋಪಿಗಳ ಬಂಧನ ಕಾರ್ಯಾಚರಣೆ ನಡೆಯುತ್ತಿದೆ. 6ರಿಂದ 7 ವಾಹನಗಳು ಜಖಂಗೊಂಡಿದೆ’’ ಎಂದು ಪೊಲೀಸ್ ಕಮಿಷನರ್ ನಿಖಿಲ್ ಗುಪ್ತಾ ಹೇಳಿದ್ದಾರೆ.

ಹೆಚ್ಚಿನ ಸುದ್ದಿ

error: Content is protected !!