ನವದೆಹಲಿ: ಪ್ರಶ್ನೆಪತ್ರಿಕೆ ಸೋರಿಕೆ (Question paper leak) ತಡೆಗೆ ಸಂಬಂಧಿಸಿದ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅನುಮೋದನೆ ದೊರೆತಿರುವ ಬೆನ್ನಲ್ಲೇ, ಲೋಕಸಭೆಯಲ್ಲಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ (Tejaswi surya) ಮಾಡಿದ ಭಾಷಣ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ (Social media) ಗಮನ ಸೆಳೆಯುತ್ತಿದೆ. ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಶಾಶ್ವತ ಸುಧಾರಣೆ ತರಲು ಪ್ರಧಾನಿ ನರೇಂದ್ರ ಮೋದಿ (PM Modi) ನೇತೃತ್ವದ ಸರ್ಕಾರ ಬದ್ಧವಾಗಿದೆ, ಈಗಾಗಲೇ ಕೈಗೊಂಡಿರುವ ಕ್ರಮಗಳು ವಿದ್ಯಾರ್ಥಿಗಳ ಪರವಾಗಿದೆ ಎಂದು ಹೇಳಿದ್ದಾರೆ.
The Opposition thinks because of this issue, they have the youth on their side. There can be no bigger Delulu than that.
Today’s youth are aware, informed and quick to recognise who is genuinely working for them.
They know that if someone is working in their interest, it is PM… pic.twitter.com/AuWC3ZR0fh
— Tejasvi Surya (@Tejasvi_Surya) July 28, 2026
ಹೌದು, ಪ್ರಶ್ನೆಪತ್ರಿಕೆ ಸೋರಿಕೆಯಿಂದ ಸಾಮಾನ್ಯ ಹಾಗೂ ಬಡ ಕುಟುಂಬಗಳ ವಿದ್ಯಾರ್ಥಿಗಳ ಭವಿಷ್ಯಕ್ಕೆ ದೊಡ್ಡ ಹೊಡೆತ ಬೀಳುತ್ತದೆ. ಪ್ರತಿಭೆ ಮತ್ತು ಶ್ರಮಕ್ಕೆ ನ್ಯಾಯ ಒದಗಿಸುವ ಪರೀಕ್ಷಾ ವ್ಯವಸ್ಥೆಯನ್ನು ರಕ್ಷಿಸುವುದು ಸರ್ಕಾರದ ಜವಾಬ್ದಾರಿ ಎಂದು ಸೂರ್ಯ ಅಭಿಪ್ರಾಯಪಟ್ಟರು. ಚರ್ಚೆಗೆ ಒತ್ತಾಯಿಸಿದ್ದ ವಿರೋಧ ಪಕ್ಷಗಳೇ ಮಸೂದೆ ಮಂಡನೆಯಾದ ಬಳಿಕ ಕಲಾಪಕ್ಕೆ ಅಡ್ಡಿಪಡಿಸುತ್ತಿವೆ ಎಂದು ಆರೋಪಿಸಿದರು.
ಇದನ್ನೂ ಓದಿ : ಪತ್ರಿಕಾಗೋಷ್ಠಿ ಎನ್ನುವುದು ಅಡ್ಡಗೋಡೆ – ಪಿಎಂ ಮೋದಿಯನ್ನು ಸಮರ್ಥಿಸಿಕೊಂಡ ಎಂಪಿ ತೇಜಸ್ವಿ!
ಇನ್ನು ತಮ್ಮ ಭಾಷಣದ ವೇಳೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಕನ್ನಡದಲ್ಲೇ ಪ್ರಶ್ನಿಸಿದ ಅವರು, ಕೆಪಿಎಸ್‌ಸಿ ವಿವಾದ, ವೆಟರ್ನರಿ ಕಾಲೇಜು ಪ್ರವೇಶ ಹಗರಣ ಸೇರಿದಂತೆ ರಾಜ್ಯದ ಹಲವು ಪ್ರಕರಣಗಳ ಬಗ್ಗೆ ಉತ್ತರ ನೀಡುವಂತೆ ಆಗ್ರಹಿಸಿದರು. ಜೊತೆಗೆ ಸಿಬಿಐ ತನಿಖೆ, ಎನ್‌ಟಿಎ ಬಲವರ್ಧನೆ, ಕಂಪ್ಯೂಟರ್ ಆಧಾರಿತ ಪರೀಕ್ಷೆ ಹಾಗೂ ಕಠಿಣ ಕಾನೂನು ಜಾರಿಯಂತಹ ಕ್ರಮಗಳನ್ನು ಮೋದಿ ಸರ್ಕಾರ ಈಗಾಗಲೇ ಕೈಗೊಂಡಿದೆ ಎಂದು ಹೇಳಿದರು.