Thursday, July 16, 2026
Homeಟಾಪ್ ನ್ಯೂಸ್TEJASVI SURYA: ದ್ವೇಷ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಸುಪ್ರೀಂ ತೀರ್ಪು ಪಾಠವಾಗಬೇಕಿದೆ: ತೇಜಸ್ವಿ ಸೂರ್ಯ

TEJASVI SURYA: ದ್ವೇಷ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಸುಪ್ರೀಂ ತೀರ್ಪು ಪಾಠವಾಗಬೇಕಿದೆ: ತೇಜಸ್ವಿ ಸೂರ್ಯ

ಬೆಂಗಳೂರು: ತೇಜಸ್ವಿ ಸೂರ್ಯ (Tejasvi Surya) ವಿರುದ್ಧ ರಾಜ್ಯ ಸರ್ಕಾರ (State Government) ಸಲ್ಲಿಸಿದ್ದ ಅರ್ಜಿಯನ್ನ ವಜಾ ಮಾಡಿರುವ ಸುಪ್ರೀಂ ಕೋರ್ಟ್‌ (Supreme Court) ಹೈಕೋರ್ಟ್‌ (High Court) ಆದೇಶವನ್ನ ಪುಸ್ಕರಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ತೇಜಸ್ವಿ ಸೂರ್ಯ ಈ ತೀರ್ಪು ಸರ್ಕಾರಕ್ಕೆ ಪಾಠವಾಗಬೇಕು ಎಂದು ಹೇಳಿದ್ದಾರೆ.

ಕಾಂಗ್ರೆಸ್‌ಗೆ ಸೋಲಾಗಿದೆ
ಈ ಪ್ರಕರಣದ ಬಗ್ಗೆ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿರುವ ಸಂಸದ ತೇಜಸ್ವಿ ಸೂರ್ಯ, ಸಚಿವರೊಬ್ಬರ ಆಜ್ಞೆಯ ಮೇರೆಗೆ ಕರ್ನಾಟಕ ಸರ್ಕಾರ ನನ್ನ ವಿರುದ್ಧ ಸುಳ್ಳು ಸುದ್ದಿ ಹರಡುತ್ತಿದ್ದೇನೆ ಎಂದು ಆರೋಪಿಸಿ ಎಫ್‌ಐಆರ್ ದಾಖಲಿಸಿತ್ತು. ಆದರೆ ಈ ಸುಳ್ಳು ದೂರನ್ನ  ಹೈಕೋರ್ಟ್ ವಿವರವಾದ ಆದೇಶದೊಂದಿಗೆ ರದ್ದು ಮಾಡುವಂತೆ ಹೇಳಿತ್ತು. ಆದರೆ ಸೇಡಿನ ರಾಜಕೀಯದ ಕಾಂಗ್ರೆಸ್‌ ಅವರ ಚಟ ಅವರನ್ನು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗುವಂತೆ ಮಾಡಿದ್ದು, ಇದೀಗ ಅಲ್ಲೂ ಸೋಲಾಗಿದೆ ಎಂದಿದ್ದಾರೆ.

ಕಾಂಗ್ರೆಸ್‌ ನನ್ನ ವಿರುದ್ಧ ಅಭಿಯಾನ ಮಾಡುತ್ತಿದೆ
ಇನ್ನು ಸುಪ್ರೀಂ ಕೋರ್ಟ್ ಸರ್ಕಾರದ ಅರ್ಜಿಯನ್ನು ವಜಾ ಮಾಡಿದ್ದಲ್ಲದೇ, ಅವರಿಗೆ ಶುಲ್ಕ ವಿಧಿಸಿದೆ. ಅಲ್ಲದೇ, ಕೋರ್ಟ್‌ ಹಾಗೂ ಇತರ ಸಂಸ್ಥೆಗಳನ್ನ ರಾಜಕೀಯಕ್ಕಾಗಿ ಬೇರೆಯವರ ವಿರುದ್ಧ ಬಳಕೆ ಮಾಡುವುದನ್ನ ನಿಲ್ಲಿಸಬೇಕು ಎಂದು ಎಚ್ಚರಿಕೆ ನೀಡಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಬಹಳ ಸಮಯದಿಂದ ಕಾಂಗ್ರೆಸ್ ನನ್ನ ವಿರುದ್ಧ ಸರಿಯಾಗಿ ಪ್ಲ್ಯಾನ್‌ ಮಾಡಿ, ತಪ್ಪು ಮಾಹಿತಿ ನೀಡುವ ಅಭಿಯಾನವನ್ನು ನಡೆಸುತ್ತಿದೆ, ರಾಜಕೀಯ ದ್ವೇಷಕ್ಕಾಗಿ ವಿರೋಧಿಗಳ ವಿರುದ್ಧ ಪೊಲೀಸ್ ಮತ್ತು ನ್ಯಾಯಾಂಗವನ್ನು ದುರುಪಯೋಗಪಡಿಸಿಕೊಂಡಿದೆ. ಈ ತೀರ್ಪು ಅವರಿಗೆ ಪಾಠವಾಗಬೇಕು ಎಂದು ಕಾಂಗ್ರೆಸ್‌ ವಿರುದ್ಧ ಕೆಂಡ ಕಾರಿದ್ದಾರೆ.

ಏನಿದು ಪ್ರಕರಣ?

ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, 2024 ರ ನವೆಂಬರ್‌ 7 ರಂದು ರೈತನ ಆತ್ಮಹ*ತ್ಯೆಗೆ ಸಂಬಂಧಿಸಿದಂತೆ ಪೋಸ್ಟ್‌ ಒಂದನ್ನು ಹಂಚಿಕೊಂಡಿದ್ದರು. ಅದರಲ್ಲಿ ತಮ್ಮ ಜಮೀಮಿನ ಪಹಣಿಯಲ್ಲಿ ವಕ್ಫ್‌ ಆಸ್ತಿ ಎಂದು ನಮೂದಾಗಿದ್ದರಿಂದ ಮನನೊಂದು ಹಾವೇರಿಯ ಹರನಗಿ ಗ್ರಾಮದ ರೈತರೊಬ್ಬರು ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪ ಮಾಡಿದ್ದರು.
ಆದರೆ, ತೇಜಸ್ವಿ ಸೂರ್ಯ ಮಾಡಿದ ಆರೋಪ ಸುಳ್ಳು. ಇಂತಹ ಯಾವುದೇ ಪ್ರಕರಣ ನಡೆದಿಲ್ಲ ಎಂದು ಎಸ್‌ಪಿ ಸ್ಪಷ್ಟನೆ ನೀಡಿದ್ದರು. ಅದಾದ ಬಳಿಕ ತೇಜಸ್ವಿ ಸೂರ್ಯ ಪೋಸ್ಟ್‌ ಡಿಲೀಟ್ ಮಾಡಿದ್ದರು.
ಸುಳ್ಳು ಸುದ್ದಿ ಹರಡಿದ್ದಕ್ಕಾಗಿ ತೇಜಸ್ವಿ ಸೂರ್ಯ ವಿರುದ್ಧ ಹಾವೇರಿಯ ಸೆನ್‌ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ–2023 ರ (BNS) ಕಲಂ 353ರ (2) ಅಂದರೆ ವಿವಿಧ ಗುಂಪುಗಳ ನಡುವೆ ದ್ವೇಷ ಹರಡುವ ಮತ್ತು ದ್ವೇಷಕ್ಕೆ ಪ್ರಚೋದನೆ ನೀಡಲು ಸುಳ್ಳು ಸುದ್ದಿ ಹರಡಿದ ಆರೋಪದ ಅಡಿಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು.

ಹೆಚ್ಚಿನ ಸುದ್ದಿ

Change Language »
error: Content is protected !!