ಕಾಂಗ್ರೆಸ್ ಯುವಕ್ರಾಂತಿ ಸಮಾವೇಶದಲ್ಲಿ ಇಂದು ಘೋಷಿಸಲಾದ ಯುವನಿಧಿ ಯೋಜನೆಯನ್ನು ಸಂಸದ ತೇಜಸ್ವಿ ಸೂರ್ಯ ಟೀಕಿಸಿದ್ದಾರೆ. ಇದು ಯುವಕರಿಗೆ ಎಲೆಕ್ಷನ್ ಸಮಯದಲ್ಲಿ ಕಾಂಗ್ರೆಸ್ ಹಾಕ್ತಿರೋ ಭಿಕ್ಷೆ ಎಂದ ತೇಜಸ್ವಿ, ಯುವಕರನ್ನು ಪರಾವಲಂಬಿಗಳನ್ನಾಗಿ ಮಾಡುವುದು ಕಾಂಗ್ರೆಸ್ ಉದ್ದೇಶ ಎಂದ್ರು..
ಸ್ಟಾರ್ಟ್ ಅಪ್ ಇಂಡಿಯಾ, ಡಿಜಿಟಲ್ ಇಂಡಿಯಾ, ಮುದ್ರಾ ಮತ್ತು ಇನ್ನಿತರ ಯೋಜನೆಗಳಿಂದ ದೇಶದ ಯುವ ಜನತೆಯನ್ನು ಸ್ವಾವಲಂಬಿ, ಸ್ವಾಭಿಮಾನಿಗಳನ್ನಾಗಿಸುವ ಪ್ರಯತ್ನವನ್ನು ಬಿಜೆಪಿ ಮಾಡ್ತಿದ್ರೆ.., ಇನ್ನೊಂದೆಡೆ ಯಾವಾಗಲೂ ಸರ್ಕಾರದ ಮೇಲೆ ಮಾತ್ರ ಅವಲಂಬಿತರಾಗಿರಬೇಕು, ಸ್ವಾವಲಂಬಿ ಆಗಬಾರದು ಎನ್ನುವ ಉದ್ದೇಶದ ರಾಹುಲ್ ಗಾಂಧಿಯವರು ಮಾಡ್ತಿದ್ದಾರೆ.
ದೇಶದ ಯುವಜನತೆಗೆ ನರೇಂದ್ರ ಮೋದಿ ರವರ ಸ್ವಾವಲಂಬಿ, ಸ್ವಾಭಿಮಾನಿ ಭವಿಷ್ಯತ್ತಿನ ಅವಶ್ಯಕತೆ ಇದೆಯೋ ಅಥವಾ ಪ್ರತಿನಿತ್ಯ ಪರಾವಲಂಬಿ ಬದುಕಿಗೆ ಪ್ರೇರೇಪಿಸುವ ಕಾಂಗ್ರೆಸ್ ನ ಮಾದರಿ ಬೇಕೋ ದೇಶದ ಯುವ ಜನತೆ ನಿರ್ಧರಿಸಲಿ. ರಾಜ್ಯದ ಜನತೆ ಕಾಂಗ್ರೆಸ್ ನ ಮಾದರಿಯನ್ನು ಇಡೀ ದೇಶಾದ್ಯಂತ ತಿರಸ್ಕರಿಸಿದ್ದು, ಕರ್ನಾಟಕದ ಜನತೆ ಕೂಡ ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಸಂಸದ ಸೂರ್ಯ ಮಹಾಲಿಂಗಪುರದಲ್ಲಿ ನಡೆದ ಯುವ ಸಮ್ಮೇಳನದಲ್ಲಿ ಮಾತನಾಡುತ್ತಾ ಹೇಳಿದ್ರು