Thursday, July 16, 2026
Homeಟಾಪ್ ನ್ಯೂಸ್TECH TIPS : ಮನೆಯಿಂದ ಹೊರಡುವ ಮುನ್ನ ಈ ತಪ್ಪು ಮಾಡಿದ್ರೆ ಬ್ಯಾಟರಿ ಖಾಲಿ!

TECH TIPS : ಮನೆಯಿಂದ ಹೊರಡುವ ಮುನ್ನ ಈ ತಪ್ಪು ಮಾಡಿದ್ರೆ ಬ್ಯಾಟರಿ ಖಾಲಿ!

ಬೆಳಗ್ಗೆ ಎದ್ದ ತಕ್ಷಣ 100% ಚಾರ್ಜ್ (Mobile Charge) ಮಾಡಿಕೊಂಡು, ರಾಜನಂತೆ ಕೈಯಲ್ಲಿ ಫೋನ್ (Smart Phone) ಹಿಡಿದು ಆಫೀಸಿಗೋ, ಕಾಲೇಜಿಗೋ ಹೊರಡುತ್ತೇವೆ. ಆದರೆ ಮಧ್ಯಾಹ್ನ 2 ಗಂಟೆಯಾಗುವಷ್ಟರಲ್ಲಿ (Tech Tips) ಫೋನ್ ಬ್ಯಾಟರಿ ಡೆಡ್ (Battery) ಆಗಿರುತ್ತದೆ. ಅಷ್ಟೇ ಅಲ್ಲ, ನಾವೇನೂ ತಪ್ಪು ಮಾಡದಿದ್ದರೂ ದಿಢೀರನೆ ಬ್ಯಾಂಕ್ ಖಾತೆಯಿಂದ ಹಣ ಮಾಯವಾಗುವುದು, ಫೋನ್ ಹ್ಯಾಕ್ ಆಗುವ ಆಘಾತಕಾರಿ ಸುದ್ದಿಗಳು ದಿನನಿತ್ಯ ಕೇಳಿಬರುತ್ತಿವೆ.

ಇದೆಲ್ಲದಕ್ಕೂ ಕಾರಣ ನಿಮ್ಮ ಜೇಬಿನಲ್ಲಿರುವ ಸ್ಮಾರ್ಟ್‌ಫೋನ್‌ನಲ್ಲಿ ಅಡಗಿ ಕುಳಿತಿರುವ ಒಂದು ‘ಸೈಲೆಂಟ್ ಕಿಲ್ಲರ್’ ಸೆಟ್ಟಿಂಗ್ ಹೌದು, ಮನೆಯಿಂದ ಹೊರಡುವ ಮುನ್ನ ಕೇವಲ ಒಂದು ಸೆಟ್ಟಿಂಗ್ ಆಫ್ ಮಾಡದಿದ್ದರೆ ನಿಮ್ಮ ಇಡೀ ಜೀವನವೇ ಬೀದಿಗೆ ಬರಬಹುದು. ಅದುವೇ ನಿಮ್ಮ ಫೋನ್‌ನ ವೈ-ಫೈ (Wi-Fi) ಸೆಟ್ಟಿಂಗ್..

tech-tips-why-you-should-turn-off-wifi-in-public-places-cyber-security

ಮನೆಯಿಂದ ಹೊರಡುವಾಗ ವೈ-ಫೈ ಆಫ್ ಮಾಡುವುದನ್ನು ಶೇಕಡಾ 90 ರಷ್ಟು ಜನ ಮರೆಯುತ್ತಾರೆ. ಇದರಿಂದ ನಿಮ್ಮ ಫೋನ್‌ಗೆ ಹಾಗೂ ನಿಮ್ಮ ಬ್ಯಾಂಕ್ ಖಾತೆಗೆ ಎಷ್ಟು ದೊಡ್ಡ ಗಂಡಾಂತರ ಕಾಯ್ದಿರುತ್ತದೆ ಗೊತ್ತಾ? ಇಲ್ಲಿದೆ ನೋಡಿ ಆ ರೋಚಕ ಮತ್ತು ಶಾಕಿಂಗ್ ಸೀಕ್ರೆಟ್ಸ್..

ಬ್ಯಾಟರಿ ಕುಡಿಯುವ ರಕ್ತಪಿಶಾಚಿ ಈ ವೈ-ಫೈ

ಮನೆಯಲ್ಲಿದ್ದಾಗ ವೈ-ಫೈ ಆನ್ ಆಗಿದ್ದರೆ ಯಾವುದೇ ಸಮಸ್ಯೆಯಿಲ್ಲ. ಆದರೆ ನೀವು ಮನೆಯ ಲಕ್ಷ್ಮಣ ರೇಖೆ ದಾಟಿ ಹೊರಗೆ ಕಾಲಿಡುತ್ತಿದ್ದಂತೆ ಈ ವೈ-ಫೈ ಅಕ್ಷರಶಃ ರಕ್ತಪಿಶಾಚಿಯಂತೆ ಬದಲಾಗುತ್ತದೆ. ನಿಮ್ಮ ಫೋನ್ ಬ್ಯಾಕ್‌ಗ್ರೌಂಡ್‌ನಲ್ಲಿ ರಸ್ತೆಯಲ್ಲಿ ಸಿಗುವ, ಬಸ್‌ನಲ್ಲಿ ಸಿಗುವ ಪ್ರತಿಯೊಂದು ವೈ-ಫೈ ಸಿಗ್ನಲ್‌ಗಳನ್ನು ನಿರಂತರವಾಗಿ ಹುಡುಕುತ್ತಲೇ ಇರುತ್ತದೆ. 

No Charger? No Problem! Easy Ways to Power Up Your Phone Anywhere tech

ಈ ಕಣ್ಣಿಗೆ ಕಾಣದ ಸರ್ಚಿಂಗ್ ಪ್ರಕ್ರಿಯೆಯಿಂದಾಗಿ ಫೋನ್ ಬ್ಯಾಟರಿ ನೀರು ಕುಡಿದಂತೆ ಖಾಲಿಯಾಗುತ್ತದೆ. ಹೊರಗೆ ಹೋದಾಗ ವೈ-ಫೈ ಆಫ್ ಮಾಡಿದರೆ ಮಾತ್ರ ನಿಮ್ಮ ಫೋನ್ ಬ್ಯಾಟರಿ ಇಡೀ ದಿನ ಗಟ್ಟಿಯಾಗಿ ಬಾಳಿಕೆ ಬರಲು ಸಾಧ್ಯ.

ಉಚಿತ ವೈ-ಫೈ ಕನೆಕ್ಟ್ ಮಾಡುವ ಮುನ್ನ ಇರಲಿ ಎಚ್ಚರ

ರೈಲ್ವೇ ಸ್ಟೇಷನ್, ಬಸ್ ನಿಲ್ದಾಣ, ಶಾಪಿಂಗ್ ಮಾಲ್ ಅಥವಾ ದೊಡ್ಡ ಕೆಫೆಗಳಲ್ಲಿ ಸಿಗುವ ‘ಫ್ರೀ ವೈ-ಫೈ’ ನೋಡಿದ ತಕ್ಷಣ ನಾವೆಲ್ಲರೂ ಮುಗಿಬೀಳುತ್ತೇವೆ. ಆದರೆ ನೆನಪಿರಲಿ, ಪುಕ್ಕಟೆಯಾಗಿ ಸಿಗುವ ಈ ವೈ-ಫೈಗಳ ಹಿಂದೆ ಖತರ್ನಾಕ್ ಸೈಬರ್ ಹ್ಯಾಕರ್‌ಗಳು ಬಲೆ ಬೀಸಿ ಕಾಯುತ್ತಿರುತ್ತಾರೆ.. 

tech-tips-why-you-should-turn-off-wifi-in-public-places-cyber-security

ನಿಮ್ಮ ಫೋನ್‌ನ ವೈ-ಫೈ ಸೆಟ್ಟಿಂಗ್ ಆನ್ ಇದ್ದರೆ, ಅದು ತಕ್ಷಣವೇ ಈ ನಕಲಿ ನೆಟ್‌ವರ್ಕ್‌ಗಳಿಗೆ ಆಟೋಮ್ಯಾಟಿಕ್ ಆಗಿ ಕನೆಕ್ಟ್ ಆಗಿಬಿಡುತ್ತದೆ. ಒಮ್ಮೆ ಕನೆಕ್ಟ್ ಆಯಿತೆಂದರೆ ಮುಗಿದೇ ಹೋಯಿತು, ನಿಮ್ಮ ಇಂಟರ್ನೆಟ್ ಬ್ಯಾಂಕಿಂಗ್ ಪಾಸ್‌ವರ್ಡ್, ರಹಸ್ಯ ಫೋಟೋಗಳು, ಪರ್ಸನಲ್ ಮೆಸೇಜ್‌ಗಳೆಲ್ಲವೂ ಹ್ಯಾಕರ್‌ಗಳ ಕಂಪ್ಯೂಟರ್ ಪರದೆಯ ಮೇಲೆ ಪ್ರತ್ಯಕ್ಷವಾಗುತ್ತವೆ.

ನಿಮ್ಮ ಪ್ರತಿ ಹೆಜ್ಜೆಯು ಆಗುತ್ತೆ ಟ್ರ್ಯಾಕ್ 

ನಿಮ್ಮ ಫೋನ್ ಈ ಹಿಂದೆ ಎಲ್ಲೆಲ್ಲಿ ಕನೆಕ್ಟ್ ಆಗಿತ್ತು ಎಂಬ ಇಡೀ ಹಿಸ್ಟರಿಯನ್ನು ವೈ-ಫೈ ನೆಟ್‌ವರ್ಕ್ ಪಟ್ಟಿಯಲ್ಲಿ ಬಚ್ಚಿಟ್ಟುಕೊಂಡಿರುತ್ತದೆ. ಗೂಗಲ್ ಮತ್ತು ಆಪಲ್‌ನಂತಹ ದೈತ್ಯ ಕಂಪನಿಗಳು ಇದರ ಮೂಲಕವೇ ನಿಮ್ಮ ಲೊಕೇಷನ್ ಅನ್ನು ಡೇ ಅಂಡ್ ನೈಟ್ ಟ್ರ್ಯಾಕ್ ಮಾಡುತ್ತವೆ. ಒಂದು ವೇಳೆ ಈ ಡೇಟಾ ಹ್ಯಾಕರ್‌ಗಳ ಕೈಗೆ ಸಿಕ್ಕರೆ, ನೀವು ಪ್ರತಿದಿನ ಎಲ್ಲೆಲ್ಲಿ ಹೋಗುತ್ತೀರಿ, ಎಲ್ಲಿ ವಾಸಿಸುತ್ತೀರಿ ಎಂಬ ನಿಮ್ಮ ಪ್ರತಿಯೊಂದು ರಹಸ್ಯವೂ ಅವರಿಗೆ ಸಿಕ್ಕಿಬಿಡುತ್ತದೆ.

tech-tips-why-you-should-turn-off-wifi-in-public-places-cyber-security

ಮರೆಗುಳಿಗಳಿಗಾಗಿ ಫೋನ್‌ನಲ್ಲೇ ಇದೆ ರೋಬೋಟಿಕ್ ಸೆಟ್ಟಿಂಗ್

ಪ್ರತಿ ಬಾರಿ ಮನೆಯಿಂದ ಹೊರಡುವಾಗ ವೈ-ಫೈ ಆಫ್ ಮಾಡಲು ನೆನಪಿರಲ್ಲಪ್ಪಾ” ಅನ್ನೋರಿಗೆ ಫೋನ್‌ನಲ್ಲೇ ಅದ್ಭುತ ಆಪ್ಷನ್ ಇದೆ. ನೀವು ಐಫೋನ್ ಬಳಸುತ್ತಿದ್ದರೆ, ‘ಶಾರ್ಟ್‌ಕಟ್’ ಆಪ್‌ಗೆ ಹೋಗಿ ‘ಆಟೋಮೇಷನ್’ ಸೆಟ್ ಮಾಡಿಬಿಡಿ. ನೀವು ಮನೆಯ ಲೊಕೇಷನ್ ಬಿಟ್ಟು 100 ಮೀಟರ್ ದೂರ ಹೋಗುತ್ತಿದ್ದಂತೆ ನಿಮ್ಮ ಫೋನ್ ತನ್ನಷ್ಟಕ್ಕೆ ತಾನೇ ವೈ-ಫೈ ಆಫ್ ಮಾಡಿಕೊಳ್ಳುತ್ತದೆ.

ಇನ್ನು ಸ್ಯಾಮ್‌ಸಂಗ್, ಒನ್‌ಪ್ಲಸ್, ಶಾವೋಮಿ, ರಿಯಲ್‌ಮಿಯಂತಹ ಆಂಡ್ರಾಯ್ಡ್ ಫೋನ್‌ಗಳಲ್ಲೂ ವೈ-ಫೈ ಸೆಟ್ಟಿಂಗ್ಸ್‌ಗೆ ಹೋಗಿ ‘ಸ್ಮಾರ್ಟ್ ವೈ-ಫೈ’ ಅಥವಾ ‘ಆಟೋ ಆಫ್’ ಆನ್ ಮಾಡಿದರೆ ಸಾಕು, ಪರಿಚಿತ ಜಾಗ ಬಿಟ್ಟ ತಕ್ಷಣ ವೈ-ಫೈ ಲಾಕ್ ಆಗುತ್ತದೆ.

ಹೊರಗೆ ಹೋಗುವಾಗ ಬ್ಲೂಟೂತ್ ಕೂಡ ಆಫ್ ಮಾಡಿ ಹೊರಡಿ. ಅದು ಕೂಡ ಬ್ಯಾಟರಿ ತಿನ್ನುವುದರ ಜೊತೆಗೆ ಅಕ್ಕಪಕ್ಕದ ಅನಗತ್ಯ ಡಿವೈಸ್‌ಗಳಿಗೆ ಕನೆಕ್ಟ್ ಆಗುವಂತೆ ಮಾಡಿ ನಿಮ್ಮ ಪ್ರೈವೆಸಿಗೆ ಕನ್ನ ಹಾಕಬಹುದು.. ಇನ್ನೇಕೆ ತಡ, ಇಂದಿನಿಂದಲೇ ಈ ರೂಢಿ ಮಾಡಿಕೊಳ್ಳಿ, ಸೇಫ್ ಆಗಿರಿ..

ಹೆಚ್ಚಿನ ಸುದ್ದಿ

Change Language »
error: Content is protected !!