Thursday, March 12, 2026
Homeಟಾಪ್ ನ್ಯೂಸ್TECH TIPS: ನಿಮ್ಮ ಫೋನ್​​​​​​​​​​​​​​​​​​​​​​​​​​​​​ಗಳಲ್ಲಿ ಈ ಆ್ಯಪ್​​​​​ಗಳಿವೆಯೇ? ಇದ್ರೆ ಮಾಹಿತಿ ಸೋರಿಕೆ ಪಕ್ಕಾ!

TECH TIPS: ನಿಮ್ಮ ಫೋನ್​​​​​​​​​​​​​​​​​​​​​​​​​​​​​ಗಳಲ್ಲಿ ಈ ಆ್ಯಪ್​​​​​ಗಳಿವೆಯೇ? ಇದ್ರೆ ಮಾಹಿತಿ ಸೋರಿಕೆ ಪಕ್ಕಾ!

ಇಂದಿನ ದಿನಗಳಲ್ಲಿ ಸ್ಮಾರ್ಟ್‌ಫೋನ್ (MobilePhone)  ನಮ್ಮ ವೈಯಕ್ತಿಕ ಜೀವನದ ಪ್ರಮುಖ (Tech Tips) ಭಾಗವಾಗಿದೆ. ಖಾಸಗಿ ಫೋಟೋಗಳು, ವಿಡಿಯೋಗಳು, ಬ್ಯಾಂಕಿಂಗ್ ಮಾಹಿತಿ, ಲೊಕೆಶನ್ ವಿವರಗಳು ಸೇರಿದಂತೆ ಅನೇಕ ಸೂಕ್ಷ್ಮ ಮಾಹಿತಿಗಳು ಫೋನ್‌ನಲ್ಲಿ ಸಂಗ್ರಹವಾಗಿರುತ್ತವೆ. ಆದರೆ ತಜ್ಞರು ನೀಡಿರುವ ಎಚ್ಚರಿಕೆಯ ಪ್ರಕಾರ, ಕೆಲವು ಆ್ಯಪ್‌ಗಳ ಮೂಲಕ ಈ ಮಾಹಿತಿಗಳು ನಮಗೆ ತಿಳಿಯದೇ ಸೋರಿಕೆಯಾಗುವ ಸಾಧ್ಯತೆ ಇದೆ.

ಕೆಲವು ಅಪ್ಲಿಕೇಶನ್‌ಗಳು ಬಳಕೆದಾರರ ಬ್ರೌಸಿಂಗ್ ಇತಿಹಾಸ, ಕರೆ ವಿವರಗಳು, ಲೊಕೆಶನ್ ಡೇಟಾ ಸೇರಿದಂತೆ ವಿವಿಧ ಮಾಹಿತಿಗಳನ್ನು ಸಂಗ್ರಹಿಸಿ ತೃತೀಯ ವ್ಯಕ್ತಿಗಳಿಗೆ ಕಳುಹಿಸಬಹುದು. ಈ ಮಾಹಿತಿಯನ್ನು ಜಾಹೀರಾತು ಕಂಪನಿಗಳು ಬಳಸುವ ಸಾಧ್ಯತೆ ಇದೆ. ಬಳಕೆದಾರರು ಯಾವುದೇ ವಿಷಯವನ್ನು ಹುಡುಕಿದ ನಂತರ ಅದೇ ವಿಷಯಕ್ಕೆ ಸಂಬಂಧಿಸಿದ ಜಾಹೀರಾತುಗಳು ಕಾಣಿಸಿಕೊಳ್ಳುವುದು ಇದಕ್ಕೆ ಉದಾಹರಣೆಯಾಗಿದೆ.

Social media crime - 954 cases registered in 9 months cyber crime

 

 

ಯಾವ ಆ್ಯಪ್‌ಗಳಿಂದ ಹೆಚ್ಚು ಅಪಾಯ?

ಉಚಿತ VPN ಆ್ಯಪ್‌ಗಳು :

ಉಚಿತವಾಗಿ ಲಭ್ಯವಿರುವ VPN ಸೇವೆಗಳು ಬಳಕೆದಾರರ ಬ್ರೌಸಿಂಗ್ ಮಾಹಿತಿಯನ್ನು ತಮ್ಮ ಸರ್ವರ್‌ಗಳಲ್ಲಿ ಸಂಗ್ರಹಿಸುವ ಸಾಧ್ಯತೆ ಇದೆ. ಕೆಲವು ಸಂದರ್ಭಗಳಲ್ಲಿ ಈ ಮಾಹಿತಿಯನ್ನು ವ್ಯಾಪಾರಿಕ ಉದ್ದೇಶಗಳಿಗೆ ಬಳಸಲಾಗಬಹುದು.

ಅನಗತ್ಯ ಯುಟಿಲಿಟಿ ಆ್ಯಪ್‌ಗಳು :

ಫ್ಲ್ಯಾಶ್‌ಲೈಟ್, ಕ್ಲೀನರ್, ಫೋನ್ ಬೂಸ್ಟರ್ ಮುಂತಾದ ಆ್ಯಪ್‌ಗಳು ಹೆಚ್ಚುವರಿ ಅನುಮತಿಗಳನ್ನು ಕೇಳಬಹುದು. ಇವು ಅನಾವಶ್ಯಕವಾಗಿದ್ದರೂ ಡೇಟಾ ಸಂಗ್ರಹಿಸುವ ಸಾಧ್ಯತೆ ಇದೆ ಎಂದು ತಜ್ಞರು ಸೂಚಿಸಿದ್ದಾರೆ.

cyber crime

ಫೋಟೋ ಮತ್ತು ಫೇಸ್ ಫಿಲ್ಟರ್ ಆ್ಯಪ್‌ಗಳು :

ಫೋಟೋ ಹಾಗೂ ವಿಡಿಯೋ ಎಡಿಟಿಂಗ್ ಆ್ಯಪ್‌ಗಳು ಮುಖ ಗುರುತಿನ ಮಾಹಿತಿ ಸೇರಿದಂತೆ ಸೂಕ್ಷ್ಮ ಡೇಟಾವನ್ನು ಸಂಗ್ರಹಿಸಬಹುದೆಂಬ ಆತಂಕ ವ್ಯಕ್ತವಾಗಿದೆ.

ಬಳಕೆದಾರರು ಏನು ಮಾಡಬೇಕು?

tech tips using- mobile phone-at-night-health-risks

ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡುವಾಗ ಅವು ಕೇಳುವ ಪರ್ಮಿಷನ್‌ಗಳನ್ನು ಗಮನಿಸಬೇಕು. ಅಗತ್ಯವಿಲ್ಲದ ಅನುಮತಿಗಳಿಗೆ ಒಪ್ಪಿಗೆ ನೀಡಬಾರದು. ಹೊಸ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡುವ ಮೊದಲು ಅದರ ರೇಟಿಂಗ್ ಮತ್ತು ರಿವ್ಯೂ ನೋಡುವುದು ಬಹಳ ಮುಖ್ಯ.

ಡಿಜಿಟಲ್ ಯುಗದಲ್ಲಿ ವೈಯಕ್ತಿಕ ಮಾಹಿತಿಯ ಸುರಕ್ಷತೆ ಅತ್ಯಂತ ಮಹತ್ವದ್ದಾಗಿದೆ. ಸ್ಮಾರ್ಟ್‌ಫೋನ್ ಬಳಕೆದಾರರು ಎಚ್ಚರಿಕೆಯಿಂದ ನಡೆದುಕೊಳ್ಳುವುದು ಬಹಳ ಉತ್ತಮ..

ಹೆಚ್ಚಿನ ಸುದ್ದಿ

Change Language »
error: Content is protected !!