Sunday, January 25, 2026
Homeಕ್ರೀಡೆVIRAT KOHLI : ಫ್ಯಾನ್ಸ್ ಮಧ್ಯೆ ಸಿಲುಕಿದ ಕಿಂಗ್ ಕೊಹ್ಲಿ! ಹೊರಬರಲಾಗದೆ ಒದ್ದಾಡಿದ ದಿಗ್ಗಜ ಕ್ರಿಕೆಟಿಗ...

VIRAT KOHLI : ಫ್ಯಾನ್ಸ್ ಮಧ್ಯೆ ಸಿಲುಕಿದ ಕಿಂಗ್ ಕೊಹ್ಲಿ! ಹೊರಬರಲಾಗದೆ ಒದ್ದಾಡಿದ ದಿಗ್ಗಜ ಕ್ರಿಕೆಟಿಗ : VIDEO

ನವದೆಹಲಿ : ಟೀಂ ಇಂಡಿಯಾದ (Team india) ರನ್ ಮೆಷಿನ್, ಕಿಂಗ್ ಕೊಹ್ಲಿ, ದಾಖಲೆಗಳ ಹೀರೋ, ಚೇಸಿಂಗ್ ಮಾಸ್ಟರ್ ವಿರಾಟ್ ಕೊಹ್ಲಿ (Virat kohli) ಮತ್ತೆ ಸುದ್ದಿಯಲ್ಲಿದ್ದಾರೆ. ನಾಯಕತ್ವ ಕಳೆದುಕೊಂಡರೂ. ಕೆಲ ವರ್ಷಗಳಿಂದ ಸರಿಯಾಗಿ ಆಡದಿದ್ದರೂ. ಅವರ ಮೇಲಿನ ಕ್ರೇಜ್ ದುಪ್ಪಟ್ಟಾಗಿದೆ. ಕಿಂಗ್ ಕೊಹ್ಲಿ ಈಗಾಗಲೇ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಅತ್ಯಂತ ಜನಪ್ರಿಯ ಕ್ರಿಕೆಟಿಗರಾಗಿದ್ದಾರೆ (Popular cricketer) .ಅದಕ್ಕೆ ವಡೋದರಾ ವಿಮಾನ ನಿಲ್ದಾಣದಲ್ಲಿ ನಡೆದ ಘಟನೆಯೇ ಸಾಕ್ಷಿ.

ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೂ ಮುನ್ನ ವಡೋದರಾ ವಿಮಾನ ನಿಲ್ದಾಣಕ್ಕೆ ಬಂದ ವಿರಾಟ್ ಕೊಹ್ಲಿಯನ್ನು ಸ್ವಾಗತಿಸಲು ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಜಮಾಯಿಸಿದ್ರು.ಆತಿಥೇಯ ಭಾರತ ತಂಡವು ಬ್ಲ್ಯಾಕ್‌ಕ್ಯಾಪ್ಸ್ ವಿರುದ್ಧ ಮೂರು ಪಂದ್ಯಗಳ ಸರಣಿಯನ್ನು ಆಡಲು ಸಜ್ಜಾಗಿದೆ. ಮೊದಲ ಪಂದ್ಯ ಜನವರಿ 11 ರಂದು ವಡೋದರಾದ ಬಿಸಿಎ ಕ್ರೀಡಾಂಗಣದಲ್ಲಿ ನಡೆಯಲಿದೆ. ಏಕದಿನ ಪಂದ್ಯಗಳಲ್ಲಿ ಮಾತ್ರ ಕೊಹ್ಲಿ ಆಡಲಿದ್ದಾರೆ.

ವಿರಾಟ್​ ಕೊಹ್ಲಿ ಬರ್ತಿದ್ದಂತೆಯೇ ನೂರಾರು ಜನರು ಬಂದುಬಿಟ್ರು. ಭದ್ರತಾ ಸಿಬ್ಬಂದಿ ಕೊಹ್ಲಿಯನ್ನು ವಿಮಾನ ನಿಲ್ದಾಣದ ಹೊರಗೆ ತಮ್ಮ ಕಾರಿನಲ್ಲಿ ಕರೆದುಕೊಂಡು ಹೋಗಲು ಹೆಣಗಾಡಿದರು.
ಏರ್​ಪೋರ್ಟ್​ನಿಂದ ಹೊರಬಂದ ವಿರಾಟ್ ಕೊಹ್ಲಿ ತಮ್ಮ ಕಾರಿನ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ, ಅಭಿಮಾನಿಗಳು ಸೆಲ್ಫಿಗಾಗಿ ಮುತ್ತಿದ್ದರು. ಇದರಿಂದಾಗಿ ಭದ್ರತಾ ಸಿಬ್ಬಂದಿಗಳು ಕೊಹ್ಲಿಯನ್ನು ಸುರಕ್ಷಿತವಾಗಿ ಕಾರಿನ ಬಳಿ ಕರೆದೊಯ್ಯಲು ಶ್ರಮಿಸಬೇಕಾಯಿತು.

ಒಂದು ಹಂತದಲ್ಲಿ, ಜನಸಂದಣಿಯನ್ನು ನಿಯಂತ್ರಿಸುವುದು ಕಷ್ಟಕರವಾಯಿತು, ಇದರಿಂದ ವಿರಾಟ್ ಕೊಹ್ಲಿ ಕೂಡ ಸ್ವಲ್ಪ ಕಸಿವಿಸಿಗೊಂಡರು. ಆದಾಗ್ಯೂ, ಅವರು ತಾಳ್ಮೆಯಿಂದ ಸ್ಮೈಲ್ ಕೊಟ್ಟು, ಅಭಿಮಾನಿಗಳೊಂದಿಗೆ ಫೋಟೋಗಳಿಗೆ ಪೋಸ್ ನೀಡಿ ಹೊರಟು ಹೋದರು. ಸದ್ಯ, ಅದರ ವಿಡಿಯೋ ವೈರಲ್ ಆಗುತ್ತಿದೆ.

ವಿರಾಟ್ ಕೊಹ್ಲಿ ದಾಖಲೆ :

ಡಿಸೆಂಬರ್ ತಿಂಗಳಿನಲ್ಲಿ ವೃತ್ತಿಪರ ಕೊಹ್ಲಿ ವಿಜಯ್ ಹಜಾರೆ ಟ್ರೋಫಿಗೆ ಮರಳಿದ್ರು. 15 ವರ್ಷಗಳಲ್ಲಿ ಮೊದಲ ಬಾರಿಗೆ ಲಿಸ್ಟ್ ಎನಲ್ಲಿ ಆಡಿದರು. ಟೀಂ ಇಂಡಿಯಾ ಮಾಜಿ ನಾಯಕ ಕೊಹ್ಲಿ ಎರಡು ಪಂದ್ಯಗಳಲ್ಲಿ 131 ರನ್ ಗಳಿಸಿದ್ರು.
ಇತ್ತೀಚಿನ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ, ಕೊಹ್ಲಿ ಸತತ ಎರಡು ಶತಕ, ಒಂದು ಅರ್ಧಶತಕ ಬಾರಿಸಿ, ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಇದನ್ನೂ ಓದಿ : ರಾಹುಲ್ ದ್ರಾವಿಡ್ ದಾಖಲೆ ಉಡೀಸ್, ಶತಕ ಗಳಿಸಿ ಹೊಸ ಇತಿಹಾಸ ಬರೆದ ಸ್ಟೀವ್ ಸ್ಮಿತ್

ವಿರಾಟ್ ಕೊಹ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಂತ ವೇಗವಾಗಿ 28,000 ರನ್ ಗಳಿಸಿದ ಕ್ರಿಕೆಟಿಗ ಎನ್ನಿಸಿಕೊಳ್ಳಲು ಕೇವಲ 25 ರನ್‌ಗಳ ಅವಶ್ಯಕತೆಯಿದೆ. ಈ ಮೈಲಿಗಲ್ಲು ತಲುಪಿದ ಮೂರನೇ ಆಟಗಾರ ಎನಿಸಿಕೊಳ್ಳಲಿದ್ದಾರೆ. ಕೊಹ್ಲಿಗಿಂತ ಮೊದಲು ಸಚಿನ್ ತೆಂಡೂಲ್ಕರ್ ಮತ್ತು ಕುಮಾರ್ ಸಂಗಕ್ಕಾರ ಮಾತ್ರ ಈ ಸಾಧನೆ ಮಾಡಿದ್ದಾರೆ.37 ವರ್ಷದ ಕೊಹ್ಲಿ 623 ಇನ್ನಿಂಗ್ಸ್‌ಗಳಲ್ಲಿ 84 ಶತಕಗಳು ಮತ್ತು 145 ಅರ್ಧ ಶತಕಗಳೊಂದಿಗೆ ಒಟ್ಟು 27,975 ರನ್ ಗಳಿಸಿದ್ದಾರೆ. ಸಚಿನ್ ತಮ್ಮ 644 ನೇ ಇನ್ನಿಂಗ್ಸ್‌ಗಳಲ್ಲಿ ಈ ಮೈಲಿಗಲ್ಲನ್ನು ತಲುಪಿದ್ರು. ಸಂಗಕ್ಕಾರ ತಮ್ಮ 666 ನೇ ಇನ್ನಿಂಗ್ಸ್‌ಗಳಲ್ಲಿ ದಾಖಲೆ ಬರೆದಿದ್ದರು.

ಹೆಚ್ಚಿನ ಸುದ್ದಿ

Change Language »
While viewing the website, tap in the menu bar. Scroll down the list of options, then tap Add to Home Screen.
Use Safari for a better experience.
error: Content is protected !!