Monday, January 20, 2025
Homeಬೆಂಗಳೂರುಟೀ ಮಾರಿ ಸಂಪಾದಿಸಿದ ಹಣವನ್ನು ಪಕ್ಷಕ್ಕೆ ನೀಡಿದ ಯುವಕ

ಟೀ ಮಾರಿ ಸಂಪಾದಿಸಿದ ಹಣವನ್ನು ಪಕ್ಷಕ್ಕೆ ನೀಡಿದ ಯುವಕ

ತಾನು ಟೀ ಮಾರಿ ಉಳಿಸಿದ 50 ಸಾವಿರ ರೂ. ಹಣವನ್ನು ಜೆಡಿಎಸ್ ಪಕ್ಷದ ಅಭ್ಯರ್ಥಿಯ ಚುನಾವಣಾ ಖರ್ಚಿಗೆ ನೀಡಿದ ಘಟನೆ ಯಶವಂತಪುರ ಕ್ಷೇತ್ರದಲ್ಲಿ ಮಂಗಳವಾರ ನಡೆದಿದೆ. ಕುಮಾರಸ್ವಾಮಿ ಸಮ್ಮುಖದಲ್ಲಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಜವರಾಯಿ ಗೌಡರಿಗೆ ಯುವಕ ಹಣ ಅರ್ಪಿಸಿದ್ದಾನೆ
ಬಸವರಾಜು ಎಂಬ ಯುವಕ ತಿಪ್ಪೇನಹಳ್ಳಿಯ ಬಳ್ಳಿ ಟೀ ಅಂಗಡಿ ವಹಿವಾಟಿನಲ್ಲಿ ಜೀವನ ಸಾಗಿಸುತ್ತಿದ್ದು, ಪಕ್ಷದ ಪ್ರಚಾರ ಕಾರ್ಯಕ್ಕಾಗಿ ಹಣ ಉಳಿತಾಯ ಮಾಡುತ್ತಿದ್ದ. ಇಂದು ಒಂದು ವರ್ಷ ಉಳಿತಾಯ ಮಾಡಿದ ಹಣವನ್ನು ಜವರಾಯಿ ಗೌಡರಿಗೆ ನೀಡಿದ್ದಾನೆ. ತುಂಬಿದ ಸಭೆಯಲ್ಲಿ ಬಸವರಾಜು ಕೈಯಿಂದ ಹಣ ಸ್ವೀಕರಿಸಿದ ಕುಮಾರಸ್ವಾಮಿ ನಿಮ್ಮಂಥವರಿಂದಲೇ ನಮ್ಮ ಪಕ್ಷ ಉಳಿದಿದೆ ಎಂದು ಅದನ್ನು ಜವರಾಯಿ ಗೌಡರಿಗೆ ಹಸ್ತಾಂತರಿಸಿದರು.

ಹೆಚ್ಚಿನ ಸುದ್ದಿ

error: Content is protected !!