ವಿದ್ಯಾರ್ಥಿನಿಯೋರ್ವಳೊಡನೆ ಕಳೆದ ಖಾಸಗಿ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಯುವತಿಯ ತೇಜೋವಧೆ ಮಾಡಿದ ಆರೋಪದ ಮೇಲೆ ಕ್ರೈಸ್ತ ಧರ್ಮಗುರುವೊಬ್ಬನನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ.
ತಮಿಳುನಾಡಿನ ಕನ್ಯಾಕುಮಾರಿ ಬಳಿಯಿರುವ ತಾಕಳಾ ಚರ್ಚ್‍ನಲ್ಲಿ ಧರ್ಮಗುರುವಾಗಿ ಕಾರ್ಯ ನಿರ್ವಹಿಸುತ್ತಿದ್ದ ಬೆನ್‍ಡಿಕ್ಟ್ ಆಂಟೋ ಬಂಧಿತ ಆರೋಪಿ.
ಕೆಲದಿನಗಳ ಹಿಂದಷ್ಟೇ ಒಂದು ಗುಂಪಿನಿಂದ ಹಲ್ಲೆಗೀಡಾಗಿದ್ದ, ಬೆನ್‍ಡಿಕ್ಟ್ ಆಂಟೋ ಲ್ಯಾಪ್‍ಟಾಪ್ ಕಳುವಾಗಿತ್ತು. ಈ ಬಗ್ಗೆ ಬೆನ್‍ಡಿಕ್ಟ್ ಆಂಟೋ ಯಾವುದೇ ದೂರು ದಾಖಲಿಸಿರಲಿಲ್ಲ. ಆದರೆ ಆ ಲ್ಯಾಪ್‍ಟಾಪ್‍ನಲ್ಲಿ ಬೆನ್‍ಡಿಕ್ಟ್‍ಗೆ ಸಂಬಂಧಿಸಿದ ಖಾಸಗಿ ವಿಡಿಯೋಗಳಿತ್ತು ಎನ್ನಲಾಗಿದೆ.
ಈ ವಿಡಿಯೋಗಳು ಬಳಿಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದರಿಂದ ಮನನೊಂದ ಯುವತಿ ತನ್ನ ಚಾರಿತ್ರೆ ವಧೆಯಾಗಿದೆ ಎಂದು ಬೆನ್‍ಡಿಕ್ಟ್ ವಿರುದ್ಧ ದೂರು ದಾಖಲಿಸಿದ್ದಳು. ಕೂಡಲೇ ಬೆನ್‍ಡಿಕ್ಟ್ ಆಂಟೋ ಅಲ್ಲಿಂದ ಪರಾರಿಯಾಗಿದ್ದ.
ಇಂದು ಬೆಂಗಳೂರಿನಲ್ಲಿ ಬೆನ್‍ಡಿಕ್ಟ್ ಆಂಟೋನನ್ನು ಪೊಲೀಸರು ಬಂಧನಕ್ಕೊಳಪಡಿಸಿ ತನಿಖೆ ನಡೆಸಿದ್ದಾರೆ. ಈಗಾಗಲೇ ಚರ್ಚ್ ಧರ್ಮಗುರು ಸ್ಥಾನದಿಂದ ಆತನನ್ನು ತೆರವುಗೊಳಿಸಿ ಬೇರೆ ವ್ಯಕ್ತಿಯನ್ನು ನೇಮಿಸಲಾಗಿದೆ.