Thursday, March 12, 2026
Homeಟಾಪ್ ನ್ಯೂಸ್TAMILNADU: ಪುರುಷರಿಗೂ ಉಚಿತ ಬಸ್, ಪ್ರತಿಯೊಬ್ಬರಿಗೂ ಸೂರು ಖಚಿತ : ಎಐಎಡಿಎಂಕೆ ಭರಪೂರ ಘೋಷಣೆ!

TAMILNADU: ಪುರುಷರಿಗೂ ಉಚಿತ ಬಸ್, ಪ್ರತಿಯೊಬ್ಬರಿಗೂ ಸೂರು ಖಚಿತ : ಎಐಎಡಿಎಂಕೆ ಭರಪೂರ ಘೋಷಣೆ!

ತಮಿಳುನಾಡು : 2023 ರ ವಿಧಾನಸಭಾ ಚುನಾವಣೆಯಲ್ಲಿ (Legislative assembly election) ಪಂಚ ಗ್ಯಾರೆಂಟಿಗಳನ್ನು (Guareenty schemes) ಘೋಷಣೆ ಮಾಡಿ ಕಾಂಗ್ರೆಸ್ ಅಧಿಕೇರಕ್ಕೇರಿದ್ದೇ ತಡ, ದೇಶದ ಬಹುತೇಕ ರಾಜಕೀಯ ಪಕ್ಷಗಳು ಈ ಮಾಡೆಲ್ ಅನ್ನು ತಮ್ಮ ತಮ್ಮ ರಾಜ್ಯಗಳಲ್ಲೂ ಘೋಷಣೆ ಮಾಡಿ ಅಧಿಕಾರದ ಚುಕ್ಕಾಣಿ ಹಿಡಿಯಲು ಪ್ರಯತ್ನ ಮಾಡಿ ಕೆಲವು ಕಡೆ ಯಶಸ್ಸು ಕಂಡಿವೆ ಕೂಡ. ಇದೀಗ ತಮಿಳುನಾಡಿನ (Tamilnadu) ಸರದಿ.

ಇದನ್ನೂ ಓದಿ : ದೇಶದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಚಾಲನೆ- ವಿಶೇಷತೆಗಳೇನು..? : VIDEO

ಹೌದು, ತಮಿಳುನಾಡಿನಲ್ಲಿ ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆ ಕಾವು ಜೋರಾಗಿದೆ. ರಾಜಕೀಯ ಪಕ್ಷಗಳ ಭರವಸೆಗಳು, ಭಾಗ್ಯಗಳ ಘೋಷಣೆಯಲ್ಲಿ ತೊಡಗಿವೆ. ಹೀಗಾಗಿ ಎಐಎಡಿಎಂಕೆ ಪಕ್ಷ ತಾವು ಅಧಿಕಾರಕ್ಕೆ ಬಂದ್ರೆ ಮಹಿಳೆಯರಿಗೆ ಮಾಸಿಕ 2 ಸಾವಿರ ರೂಪಾಯಿ, ಮಹಿಳೆಯರ ಜೊತೆ ಪುರುಷರಿಗೂ ಉಚಿತ ಬಸ್ ಸೇವೆ ವಿಸ್ತರಣೆ ಮಾಡುವುದಾಗಿ ಘೋಷಿಸಿದ್ದಾರೆ.

ಈ ಬಾರಿ AIADMK ಪಕ್ಷ ಅಧಿಕಾರಕ್ಕೆ ಬಂದಲ್ಲಿ ಮಹಿಳೆಯರಂತೆ ಪುರುಷರಿಗೂ ಉಚಿತ ಬಸ್ ಸೇವೆ ಸಿಗಲಿದೆ. ಆದ್ರೆ ಇದು ಎಷ್ಟರಮಟ್ಟಿಗೆ ಮತಗಳಾಗಿ ಪಕ್ಷಕ್ಕೆ ಲಾಭವಾಗಲಿದೆ ಎಂಬುದು ಕುತೂಹಲ. ಇದಿಷ್ಟೇ ಅಲ್ಲದೇ ಪ್ರತಿಯೊಬ್ಬರಿಗೂ ಸೂರು ಕಲ್ಪಿಸುವ ಯೋಜನೆಯನ್ನೂ ಘೋಷಿಸಲಾಗಿದೆ.

ಹೆಚ್ಚಿನ ಸುದ್ದಿ

Change Language »
error: Content is protected !!