ನವದೆಹಲಿ: ಮೊಘಲ್ ದೊರೆ ಶಹಜಹಾನ್ ನಿರ್ಮಿಸಿದ ತಾಜ್ ಮಹಲ್ ಪ್ರೀತಿಯ ಸಂಕೇತವಲ್ಲ ಎಂದು ಅಸ್ಸಾಂನ ಬಿಜೆಪಿ ಶಾಸಕ ರುಪ್ ಜ್ಯೋತಿ ಕುರ್ಮಿ ಹೇಳಿದ್ದಾರೆ .
‘ಶಹಜಹಾನ್ ತಾಜ್ ಮಹಲ್ ನಿರ್ಮಿಸಿದ್ದು ತನ್ನ ಪತ್ನಿ ಮುಮ್ತಾಜ್ ಗಾಗಿ. ಆದರೆ ಶಹಜಹಾನ್ ನಾಲ್ಕು ಬಾರಿ ಮದುವೆಯಾಗಿದ್ದ. ಒಂದು ವೇಳೆ ಪ್ರೀತಿಗಾಗಿ ಇದನ್ನು ನಿರ್ಮಿಸಿದ್ದರೆ ಶಹಜಾನ್ ಇನ್ನೂ ಮೂವರನ್ನು ಮದುವೆಯಾಗಿದ್ದು ಯಾಕೆ?” ಎಂದು ಅವರು ಪ್ರಶ್ನಿಸಿದರು.
ಎನ್ ಸಿ ಇ ಆರ್ ಟಿ ಹೊಸ ಪಠ್ಯಪುಸ್ತಕದಲ್ಲಿ ಮೊಘಲ್ ಸಾಮ್ರಾಜ್ಯದ ವಿಷಯಗಳಿಗೆ ಕತ್ತರಿ ಹಾಕಿದೆ ಎನ್ನುವಂತಹ ವಿವಾದದ ನಡುವೆ ಶಾಸಕರ ಈ ಹೇಳಿಕೆ ಬಂದಿದೆ.
“ಮೊಘಲ್ ರಾಜ ಜಹಾಂಗೀರ್ 20 ಮದುವೆಯಾಗಿದ್ದ. ಶಹಜಹಾನ್ ತಾಜ್ ಮಹಲ್ ನಿರ್ಮಿಸಿದ್ದರೂ ನಾಲ್ಕು ಬಾರಿ ಮದುವೆಯಾಗಿದ್ದ ಎಂದು ನಮ್ಮ ಮಕ್ಕಳಿಗೆ ಹೇಳುವುದನ್ನು ನಾವು ಬಯಸುವುದಿಲ್ಲ” ಎಂದವರು ಹೇಳಿದರು