ಯಾದಗಿರಿ: ಅಮೆರಿಕದ (America) ಕ್ಯಾಲಿಫೋರ್ನಿಯಾದಲ್ಲಿ (California) ನಡೆದ ಭೀಕರ ಅಪಘಾತದಲ್ಲಿ ಯಾದಗಿರಿ ಜಿಲ್ಲೆಯ ತಬಲಾ ಕಲಾವಿದ ಸಾಮ್ರಾಟ್ ಕಕ್ಕೇರಿ (Samrat Kakkeri) ಸಾವಿಗೀಡಾಗಿದ್ದಾರೆ.
ಟ್ರಕ್ ಮತ್ತು ಕಾರು ಡಿಕ್ಕಿ
ಕ್ಯಾಲಿಫೋರ್ನಿಯಾದ ಮಿಡಲ್ ಟೌನ್ ಸಮೀಪ ಹಾರ್ಬಿನ್ ಸ್ಪ್ರೀಂಗ್ ರಸ್ತೆಯಲ್ಲಿ ಭಾನುವಾರ ಈ ಅಪಘಾತ ಸಂಭವಿಸಿದ್ದು, ಇದರಲ್ಲಿ 45 ವರ್ಷ ವಯಸ್ಸಿನ ಸಾಮ್ರಾಟ್ ಕಕ್ಕೇರಿ ಅವರು ಮೃತಪಟ್ಟಿದ್ದಾರೆ. ಇನ್ನು ಸಾಮ್ರಾಟ್ ಕಕ್ಕೇರಿ ಅವರ ಜೊತೆಗಿದ್ದ ಮತ್ತೊಬ್ಬರು ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಕಾರ್ಯಕ್ರಮ ಮುಗಿಸಿ ಬರುವಾಗ ಘಟನೆ
ಎಂಬಿಎ ಪದವಿ ಪಡೆದಿದ್ದ ಸಾಮ್ರಾಟ್ ಕಕ್ಕೇರಿ ಅವರು ಅದ್ಭುತ ತಬಲಾ ಕಲಾವಿದರಾಗಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ್ದಾರೆ. ಮೊದಲು ಹೈದರಾಬಾದ್‌ನಲ್ಲಿ ವಾಸವಿದ್ದ ಅವರು, ಸುಮಾರು 15 ವರ್ಷಗಳ ಹಿಂದೆ ಅಮೆರಿಕಾಗೆ ಹೋಗಿ ಅಲ್ಲಿ ನೆಲೆಸಿದ್ದರು. ಕ್ಯಾಲಿಫೋರ್ನಿಯಾದಲ್ಲಿ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿ ಮನೆಗೆ ವಾಪಸ್ ಬರುತ್ತಿದ್ದಾಗ ಅವರ ಕಾರು ಮತ್ತು ಟ್ರಕ್ ಮಧ್ಯೆ ಡಿಕ್ಕಿ ಆಗಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇನ್ನು ಅಮೆರಿಕಾ ಮೂಲದ ಮಹಿಳೆಯನ್ನ ಮದುವೆಯಾಗಿರುವ ಅವರಿಗೆ ಒಂದು ಹೆಣ್ಣು ಮಗುವಿದೆ.
BENGALURU HORROR : ಬೆಂಗಳೂರು ಚೆನ್ನೈ ಹೆದ್ದಾರಿಯಲ್ಲಿ ಭೀಕರ ಅಪಘಾತ – ಮೂವರು ಸಾ*ವು, 7 ಮಂದಿ ಗಂಭೀರ!
ಬೈಕ್‌ಗೆ ಡಿಕ್ಕಿ ಹೊಡೆದ ಬಸ್
ಎದುರುಗಡೆಯಿಂದ ಬಂದ ಬೈಕ್‌ಗೆಕಿಲ್ಲರ್ ಕೆಎಸ್ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಗ್ರಾಮ ಲೆಕ್ಕಾಧಿಕಾರಿ ಸಾವನ್ನಪ್ಪಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
ಮಹೇಶ್ ತುಮಕೂರಿನಿಂದ 15 ದಿನಗಳ ಹಿಂದೆ ಹುಟ್ಟಿದ್ದ ಮಗಳ ಜನನ ಪ್ರಮಾಣ ಪತ್ರವನ್ನ ತೆಗೆದುಕೊಂಡು ತನ್ನೂರಿಗೆ ಹೋಗುವಾಗ ಈ ಘಟನೆ ನಡೆದಿದ್ದು, ಸಾರಿಗೆ ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಸ್ಥಳದಲ್ಲೇ 25 ವರ್ಷದ ಗ್ರಾಮ ಲೆಕ್ಕಾಧಿಕಾರಿ ಮೃತಪಟ್ಟಿದ್ದಾರೆ. ಮಹೇಶ್,ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಮೂಕನಹಳ್ಳಿ ಗ್ರಾಮದ ವಾಸಿಯಾಗಿದ್ದು, ತುಮಕೂರು ಹೊರವಲಯದ ಹೆಗ್ಗೆರೆ ಬಳಿಯ ಗೃಹ ಸಚಿವ ಪರಮೇಶ್ವರ ಮನೆ ಮುಂದೆ ಘಟನೆ ನಡೆದಿದೆ. ಇನ್ನು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ನಟ ಅಜಿತ್ ಕಾರು ಮತ್ತೆ ಅಪಘಾತ, ಇಟಲಿಯಲ್ಲಿ ರೇಸಿಂಗ್ ಮಾಡುವಾಗ ಅವಘಡ-VIDEO
ಬೆಂಗಳೂರಿನಲ್ಲೂ ಬಸ್ -ಬೈಕ್ ಅಪಘಾತ
ಕಿಲ್ಲರ್ ಬಿಎಂಟಿಸಿ ಗೆ ಬೆಂಗಳೂರಲ್ಲಿ ಮತ್ತೊಂದು ಬಲಿಯಾಗಿದೆ. ಬಿಎಂಟಿಸಿ ಬಸ್ ಡಿಕ್ಕಿಯಾಗಿ ಬೈಕ್ ಹಿಂಬದಿ ಸವಾರ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ರೇಷ್ಮೆ ಸಂಸ್ಥೆಯ ಮೆಟ್ರೋ ಸ್ಟೇಷನ್ ಬಳಿ ಘಟನೆ ನಡೆದಿದೆ. ಬದುಕುಳಿದ ಬೈಕ್ ಸವಾರನಿಗೆ ಗಂಭೀರವಾದ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ಆತನನ್ನು ಶಿಫ್ಟ್ ಮಾಡಲಾಗಿದೆ. ಕೆಆರ್ ಮಾರ್ಕೆಟ್ ನಿಂದ ಹಂಚಿಪುರ ಕಾಲೋನಿಗೆ ಬಿಎಂಟಿಸಿ ಬಸ್ ತೆರಳುತ್ತಿತ್ತು. KA 01 4168 ಸಂಖ್ಯೆಯ ಬಿಎಂಟಿಸಿ ಬಸ್ ನಿಂದ ಈ ಅಪಘಾತ ಸಂಭವಿಸಿದೆ.