2026ರ ಟಿ 20 (T20 World Cup) ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ (Team India) ಭರ್ಜರಿ ಪ್ರದರ್ಶನ ನೀಡಿ ವೆಸ್ಟ್ ಇಂಡೀಸ್ (West Indies) ವಿರುದ್ಧ ಐದು ವಿಕೆಟ್‌ಗಳ ಐತಿಹಾಸಿಕ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಭಾರತ ಸೂಪರ್ 8ರ ಮೊದಲ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದು ಸೆಮಿಫೈನಲ್‌ಗೆ ಅಧಿಕೃತವಾಗಿ ಪ್ರವೇಶಿಸಿದೆ.
ಹೈವೋಲ್ಟೇಜ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡ 20 ಓವರ್‌ಗಳಲ್ಲಿ 195 ರನ್‌ಗಳ ಭಾರೀ ಮೊತ್ತ ಕಲೆಹಾಕಿತು. ಪ್ರತಿಯಾಗಿ ಗುರಿ ಬೆನ್ನಟ್ಟಿದ ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತೀಯ ಬಳಗ ಅದ್ಭುತ ಹೋರಾಟ ಪ್ರದರ್ಶಿಸಿತು. ವಿಶೇಷವಾಗಿ ಸಂಜು ಸಮ್ಸನ್ ಅಜೇಯ 97 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.
ಭಾರತ 19.2 ಓವರ್‌ಗಳಲ್ಲಿ ಕೇವಲ ಐದು ವಿಕೆಟ್ ಕಳೆದುಕೊಂಡು 199 ರನ್‌ಗಳನ್ನು ಕಲೆಹಾಕಿ ಟಿ20 ವಿಶ್ವಕಪ್ ಇತಿಹಾಸದಲ್ಲೇ ತನ್ನ ಅತ್ಯಧಿಕ ಚೇಸಿಂಗ್ ಸಾಧನೆ ದಾಖಲಿಸಿತು. ಜೊತೆಗೆ, ಚೇಸಿಂಗ್‌ಗೆ ಸವಾಲಿನ ಮೈದಾನವೆಂದು ಪರಿಗಣಿಸಲ್ಪಡುವ ಈಡನ್ ಗಾರ್ಡನ್
ನಲ್ಲಿ ನಡೆದ ಅತ್ಯಂತ ದೊಡ್ಡ ಯಶಸ್ವಿ ಚೇಸ್ ಇದಾಗಿದೆ.
ಟೀಂ ಇಂಡಿಯಾ ಪರ ಸಂಜು ಕೇವಲ 50 ಎಸೆತಗಳಲ್ಲಿ 12 ಬೌಂಡರಿ, 4 ಸಿಕ್ಸ್‌ರ್‌ಗಳೊಂದಿಗೆ ಅಜೇಯ 97 ರನ್ ಕಲೆಹಾಕಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು. ಉಳಿದಂತೆ ತಿಲಕ್ ವರ್ಮಾ 27(15), ನಾಯಕ ಸೂರ್ಯಕುಮಾರ್ ಯಾದವ್ 18(16), ಇಶಾನ್ ಕಿಶನ್ 10(6), ಹಾರ್ದಿಕ್ ಪಾಂಡ್ಯ 17(14) ಅಭಿಷೇಕ್ ಶರ್ಮಾ 10(11), ಶಿವಂ ದುಬೆ ಅಜೇಯ 8 ರನ್ ಕಲೆಹಾಕಿದರು.
ಈ ಜಯದೊಂದಿಗೆ ಟೀಮ್ ಇಂಡಿಯಾ ಪ್ರಶಸ್ತಿ ಕನಸಿನತ್ತ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ.