Saturday, April 26, 2025
Homeಟಾಪ್ ನ್ಯೂಸ್SUPREME COURT : ಮಹಿಳೆಯ ಎದೆ ಮುಟ್ಟಿದರೆ ಅತ್ಯಾಚಾರವಲ್ಲ - ಅಲಹಾಬಾದ್ ತೀರ್ಪಿಗೆ ಸುಪ್ರೀಂ ತಡೆ 

SUPREME COURT : ಮಹಿಳೆಯ ಎದೆ ಮುಟ್ಟಿದರೆ ಅತ್ಯಾಚಾರವಲ್ಲ – ಅಲಹಾಬಾದ್ ತೀರ್ಪಿಗೆ ಸುಪ್ರೀಂ ತಡೆ 

ನವದೆಹಲಿ : ಹುಡುಗಿಯ ಖಾಸಗಿ ಅಂಗ ಮುಟ್ಟುವುದು, ಬಟ್ಟೆಯ ದಾರವನ್ನು ಎಳೆಯುವುದನ್ನು  ಅತ್ಯಾಚಾರ ಅಥವಾ ಅತ್ಯಾಚಾರಕ್ಕೆ ಯತ್ನ ಎಂದು ಹೇಳಲು ಸಾಧ್ಯವಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪಿಗೆ ಸುಪ್ರೀಂ ಕೋರ್ಟ್ ತಡೆಯಜ್ಞೆ ನೀಡಿದೆ.

ನ್ಯಾಯಮೂರ್ತಿ ಬಿ.ಆರ್.ಗವಾಯಿ ನೇತೃತ್ವದ ನ್ಯಾಯಪೀಠವು ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ತೀವ್ರವಾಗಿ ಟೀಕಿಸಿದೆ. ಇದು ತೀರ್ಪು ನೀಡಿದ ನ್ಯಾಯಾಧೀಶರ ಕಡೆಯಿಂದ ಸಂಪೂರ್ಣ ಸಂವೇದನಾಶೀಲತೆಯ ಕೊರತೆಯನ್ನು ತೋರಿಸುತ್ತದೆ ಎಂದು ಹೇಳಲು ನಮಗೆ ನೋವಾಗಿದೆ. 

ಅಲಹಾಬಾದ್ ಹೈಕೋರ್ಟ್‌ನ ಅವಲೋಕನವನ್ನು ಅಸಂವೇದನಾಶೀಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅಲಹಾಬಾದ್ ಹೈಕೋರ್ಟ್‌ನ ಈ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿ ಆದೇಶ ಹೊರಡಿಸಿದೆ.

ಏನಿದು ಪ್ರಕರಣ,  ಈ ಹಿಂದೆ ಅಪ್ರಾಪ್ತ ಬಾಲಕಿಯೊಬ್ಬಳ ಖಾಸಗಿ ಅಂಗವನ್ನು ಹಿಡಿದು ಆಕೆಯ ಬಟ್ಟೆಯ ದಾರವನ್ನು ಎಳೆದಿದ್ದಲ್ಲ, ಆಕೆಯನ್ನು ರಸ್ತೆ ಬಳಿಯಿದ್ದ ಮೋರಿಯ ಕಡೆ ಎಳೆದೊಯ್ಯಲು ಯತ್ನಿಸಿದ್ದರು, ಈ ವೇಳೆ ಸ್ಥಳೀಯ ಆಗಮಿಸಿದ ಹಿನ್ನಲೆ ಆಕೆಯನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದರು.

ಈ ಪ್ರಕರಣದ ಸಂಬಂಧ ಆಕಾಶ್ ಹಾಗೂ ಸಚಿನ್ ಎಂಬಾತನ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೀಗ ಈ ಪ್ರಕರಣವನ್ನು ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್ ಈ ಪ್ರಕರಣವನ್ನು ಅತ್ಯಾಚಾರ ಅಥವಾ ಅತ್ಯಾಚಾರಕ್ಕೆ ಯತ್ನ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಮಾರ್ಚ್ 17 ರಂದು ಆದೇಶಿಸಿತ್ತು.

ಇದೀಗ, ಅಪ್ರಾಪ್ತ ಬಾಲಕಿಯ ಸ್ತನಗಳನ್ನು ಹಿಡಿಯುವುದು, ಆಕೆಯ ಪೈಜಾಮವನ್ನು ಮುರಿಯುವುದು ಮತ್ತು ಆಕೆಯನ್ನು ಕಲ್ವರ್ಟ್‌ನ ಕೆಳಗೆ ಎಳೆದುಕೊಂಡು ಹೋಗಲು ಪ್ರಯತ್ನಿಸುವುದು ಅತ್ಯಾಚಾರ ಅಥವಾ ಅತ್ಯಾಚಾರದ ಪ್ರಯತ್ನದ ಅಡಿಯಲ್ಲಿ ಬರುವುದಿಲ್ಲ ಎಂದು ಹೇಳಿರುವ ಅಲಹಾಬಾದ್ ಹೈಕೋರ್ಟ್‌ನ ತೀರ್ಪನ್ನು ಸುಪ್ರೀಂ ಕೋರ್ಟ್ ತಡೆಹಿಡಿದಿದೆ.

ಹೆಚ್ಚಿನ ಸುದ್ದಿ

error: Content is protected !!