Saturday, April 26, 2025
Homeಕ್ರೈಂSUPREME COURT : ಮರವನ್ನು ಕತ್ತರಿಸುವುದು ಮನುಷ್ಯನ ಹತ್ಯೆಗಿಂತ ನೀಚತನ - ಪ್ರತಿ ಮರಕ್ಕೆ ಲಕ್ಷ...

SUPREME COURT : ಮರವನ್ನು ಕತ್ತರಿಸುವುದು ಮನುಷ್ಯನ ಹತ್ಯೆಗಿಂತ ನೀಚತನ – ಪ್ರತಿ ಮರಕ್ಕೆ ಲಕ್ಷ ರೂ. ದಂಡ ವಿಧಿಸಿದ ಕೋರ್ಟ್!

ನವದೆಹಲಿ : ಮರಗಳ ಮಾರಣಹೋಮ ಪ್ರಕೃತಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಹವಾಮಾನ ವೈಪರೀತ್ಯಗಳಿಗೂ ಇದೇ ವಿಚಾರ ಸಾಕ್ಷಿಯಾಗುತ್ತಿದ್ದು, ಸರ್ವೋಚ್ಚ ನ್ಯಾಯಾಲಯ ಮಹತ್ವದ ಆದೇಶ ನೀಡಿ ಎಲ್ಲರ ಗಮನ ಸೆಳೆದಿದೆ.

454 ಮರಗಳನ್ನು ಕಡಿದು ಕೋರ್ಟ್ ನಲ್ಲಿ ದ್ಯಾವೆ ಎದುರಿಸುತ್ತಿದ್ದ ವ್ಯಕ್ತಿಯ ವಾದ ಆಲಿಸಿದ ಸುಪ್ರೀಂಕೋರ್ಟ್, ಭಾರಿ ಮೊತ್ತದ ದಂಡ ವಿಧಿಸಿದೆ. 1 ಮರಕ್ಕೆ ಬರೋಬ್ಬರಿ 1 ಲಕ್ಷ ಹಣ ಫೈನ್ ಹಾಕಿ ಒಟ್ಟು 4.54 ಕೋಟಿ ದಂಡ ಹಾಕಿ ಆದೇಶ ನೀಡಿದೆ.

ವ್ಯಕ್ತಿಯೊಬ್ಬ ತಾಜ್ ಟ್ರಾಪೇಸಿಯಂ ನಲ್ಲಿ ಸಂರಕ್ಷಿಸಲ್ಪಟ್ಟಿದ್ದ ಮರಗಳನ್ನು ಕಡಿದು ಹಾಕಿದ್ದನು. ಈ ಸಂಬಂಧ ಕೇಸ್ ಕೂಡ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯ ಮರಗಳನ್ನು ಕಡಿಯುವುದು ಮನುಷ್ಯನನ್ನು ಕೊಲ್ಲುವುದಕ್ಕಿಂತಲೂ ಘೋರ ಅಪರಾಧ ಎಂದು ಅಭಿಪ್ರಾಯ ಪಟ್ಟಿದೆ. ಅಲ್ಲದೆ ವಾದ ಪ್ರತಿವಾದ ಆಲಿಸಿ ವ್ಯಕ್ತಿಗೆ ಭಾರಿ ಮೊತ್ತದ ದಂಡ ವಿಧಿಸಲಾಗಿದೆ.

ಹೆಚ್ಚಿನ ಸುದ್ದಿ

error: Content is protected !!