ಚಿಕ್ಕಮಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಮುಂದಿನ ಸಿಎಂ ಯಾರಾಗಬೇಕು ಎಂಬ ಯದ್ಧದ ನಡುವೆಯೇ ಕೆಪಿಸಿ ಅಧ್ಯಕ್ಷ ಹಾಗೂ ಸಿಎಂ ಪದವಿ ಆಕಾಂಕ್ಷಿ ಡಿ.ಕೆ ಶಿವಕುಮಾರ್‌ಗೆ ಬೆಂಬಲಿಗರಿಂದ ಭಾವೀ ಸಿಎಂ ಎಂಬ ಪಟ್ಟ ಸಿಕ್ಕಿದೆ
ಇಂದು ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ತೆರಳುವ ವೇಳೆ ಶೃಂಗೇರಿಯ ಹೆಲಿಪ್ಯಾಡ್‌ನಲ್ಲಿ ಭಾವೀ ಸಿಎಂ ಡಿ.ಕೆ ಶಿವಕುಮಾರ್‌ಗೆ ಜೈ ಎನ್ನುವ ಮೂಲಕ ಅಭಿಮಾನಿಗಳು ನೆಚ್ಚಿನ ನಾಯಕನಿಗೆ ಬೆಂಬಲ ಸೂಚಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಗೆದ್ದರೆ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಗಾದಿಗೆ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ತೀವ್ರ ಪೈಪೋಟಿ ನಡೆಸಿದ್ದಾರೆ. ಈ ನಡುವೆ ಖರ್ಗೆ ಸಿಎಂ ಆದ್ರೆ ತಾವು ರೇಸ್‌ನಿಂದ ಹಿಂದೆ ಸರಿಯೋದಾಗಿ ಹೇಳಿದ್ದ ಡಿ.ಕೆ ಶಿವಕುಮಾರ್ ನಂತರ ಸಿದ್ದರಾಮಯ್ಯ ಕೂಡಾ ಖರ್ಗೆ ಬಂದ್ರೆ ನಮಗೂ ಓಕೆ ಎಂದಿದ್ರು. ಇದೀಗ ಬೆಂಬಲಿಗರ ಭವೀ ಸಿಎಂ ಜೈಕಾರದ ಮೂಲಕ ಮತ್ತೆ ಸಿಎಂ ರೇಸ್ ವಿಚಾರ ಮುನ್ನೆಲೆಗೆ ಬಂದಿದೆ.