ನವದೆಹಲಿ: ಆನ್ ಲೈನ್ ನಲ್ಲಿ ಜಾನುವಾರುಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಐಐಟಿ ದಿಲ್ಲಿಯ ನಾಲ್ವರು ವಿದ್ಯಾರ್ಥಿಗಳು ಆರಂಭಿಸಿದ ಆನ್ಲೈನ್ ಬ್ಯುಸಿನೆಸ್ ಈಗ 565 ಕೋಟಿ ರೂಪಾಯಿಗೆ ತಲುಪಿದೆ.
ಆರ್ಥಿಕ ವರ್ಷ 2022 ರಲ್ಲಿ 7.4 ಕೋಟಿಯಷ್ಟಿದ್ದ ಫ್ಲಾಟ್ ಫಾರ್ಮ್ ನ ಆದಾಯ ಈಗ 565 ಕೋಟಿ ರೂಪಾಯಿಯನ್ನು ತಲುಪಿ ಎಲ್ಲರ ಹುಬ್ಬೇರಿಸಿದೆ.
2019ರಲ್ಲಿ ಬೆಂಗಳೂರು ಮೂಲದ ಈ ಸ್ಟಾರ್ಟಪ್ ಅನ್ನು ಪ್ರಾರಂಭಿಸಲಾಯಿತು. ಅನುರಾಗ್ ಬಿಸೋಯ್, ಕೀರ್ತಿ ಜಾಂಗ್ರಾ, ಲಿಪಿನ್ ಬಾಬು ಮತ್ತು ನೀತು ಎಂಬ ವಿದ್ಯಾರ್ಥಿಗಳು ಆರಂಭಿಸಿದ ಈ ಉದ್ಯಮ ರೈತರಿಗೆ ನೆರವಾಗಿದೆ ಮತ್ತು ಜಾನುವಾರು ಮಾರಾಟ ಉದ್ದಿಮೆಯನ್ನು ಬಹುದೊಡ್ಡ ಉದ್ದಿಮೆಯನ್ನಾಗಿ ಮಾಡಿದೆ.
2021 ರಲ್ಲಿ 5 ಲಕ್ಷ ರೂಪಾಯಿಯಷ್ಟಿದ್ದ ಈ ಉದ್ಯಮದ ವಹಿವಾಟು 2002ರಲ್ಲಿ 7.4 ಕೋಟಿ ತಲುಪುವುದರೊಂದಿಗೆ ಈ ಉದ್ಯಮದ ವಹಿವಾಟಿನಲ್ಲಿ 145 ಶೇಕಡಾದಷ್ಟು ಹೆಚ್ಚಳವಾಗಿತ್ತು. ಈ ಆನ್ ಲೈನ್ ಬ್ಯುಸಿನೆಸ್ ಗೆ ಇತರ ಬೃಹತ್ ಕಂಪನಿಗಳು 170 ಕೋಟಿ ರೂಪಾಯಿ ಹೂಡಿಕೆ ಮಾಡಿದೆ.