ಶಿವಮೊಗ್ಗ: ಎಸೆಸೆಲ್ಸಿ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ತನ್ನ ತಂದೆಯ ಅಂತ್ಯಸಂಸ್ಕಾರವನ್ನು ವಿಡಿಯೋ ಕಾಲ್ ನಲ್ಲಿ ನೋಡಿದ ದಾರುಣ ಘಟನೆ ಶಿವಮೊಗ್ಗದ ಹೊಸನಗರ ತಾಲೂಕಿನಲ್ಲಿ ನಡೆದಿದೆ.
ಕೊಪ್ಪಳ ಮೂಲದ ವಿದ್ಯಾರ್ಥಿನಿಯಾದ ಅರ್ಷಿಯಾಳ ತಂದೆ ಆಬಿದ್ ಕಳೆದ ರಾತ್ರಿ ಹೃದಯಘಾತದಿಂದ ನಿಧನರಾದರು. ಸುದ್ದಿ ತಿಳಿದು ತಕ್ಷಣವೇ ಶಿಕ್ಷಕರು ಬೇಕಾದ ವ್ಯವಸ್ಥೆ ಮಾಡಿ ಅರ್ಷಿಯಾಳನ್ನು ತಂದೆಯ ಮೃತದೇಹ ನೋಡಲು ಕರೆದೊಯ್ದಿದ್ದಾರೆ.
ತಂದೆಯ ಮೃತದೇಹ ನೋಡಿದ ನಂತರ ಅರ್ಷಿಯಾ ಮತ್ತೆ ವಾಪಸ್ ಆಗಿ ಪರೀಕ್ಷೆ ಬರೆದಿದ್ದಾಳೆ. ಇವತ್ತು ಅರ್ಷಿಯಾಇಂಗ್ಲಿಷ್ ಪರೀಕ್ಷೆ ಬರೆದಿದ್ದು, ಪರೀಕ್ಷೆ ಬರೆಯುವ ಸಂದರ್ಭದಲ್ಲಾಗಿತ್ತು ತಂದೆಯ ಅಂತ್ಯಸಂಸ್ಕಾರ ನಡೆದಿದ್ದು. ಹೀಗಾಗಿ ಪರೀಕ್ಷೆ ಬರೆದ ನಂತರ ಅರ್ಷಿಯಾ ಕೊಠಡಿಯಿಂದ ಹೊರಬಂದು ವಿಡಿಯೋ ಕಾಲ್ ಮೂಲಕ ತನ್ನ ತಂದೆಯ ಅಂತ್ಯ ಸಂಸ್ಕಾರವನ್ನು ವೀಕ್ಷಿಸಿದ್ದಾಳೆ.