ಬೆಳಗಾವಿ : ಮಾನಸಿಕ ಖಿನ್ನತೆಗೊಳಗಾಗಿ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿಯಲ್ಲಿ ನಡೆದಿದೆ
ಅಂತಿಮ ವರ್ಷದ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದ ಜಾಹ್ನವಿ (22) ಎಂಬಾಕೆ ಆತ್ಮಹತ್ಯೆ ಮಾಡಿಕೊಂಡವಳು. ಮೂಲತಃ ಹಾಸನ ಜಿಲ್ಲೆಯವಳಾದ ಜಾಹ್ನವಿ ಬೆಳಗಾವಿಯಲ್ಲಿ ಕಾಲೇಜು ವ್ಯಾಸಂಗ ಮಾಡುತ್ತಿದ್ದಳು.
ಆದರೆ ಇತ್ತೀಚೆಗೆ ಮಾನಸಿಕ ಒತ್ತಡದಿಂದ ಬಳಲುತ್ತಿದ್ದ ಆಕೆ “ನನ್ನ ಮೇಲೆ ಯಾರೂ ವಿಶ್ವಾಸ ಇಡಲಿಲ್ಲ.. ಸ್ನೇಹಿತರಿಗೆ ವಿದಾಯ ಹೇಳಲು ತಿಳಿಸುತ್ತೇನೆ” ಎಂದು ತಾನು ವಾಸವಿದ್ದ ರೂಂನ ಗೋಡೆಯ ಮೇಲೆ ಡೆತ್‌ನೋಟ್ ಬರೆದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಬೆಳಗಾವಿಯ ಸಾಂಭ್ರಾ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ