ನವದೆಹಲಿ: ಅಕಾಸ ಏರ್ ಲೈನ್ ವಿಮಾನ ಪತನಗೊಳ್ಳುತ್ತದೆ ಎಂದು ಟ್ವೀಟ್ ಮಾಡಿದ್ದಕ್ಕಾಗಿ 12ನೆ ತರಗತಿ ವಿದ್ಯಾರ್ಥಿಯೊಬ್ಬನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಈ ಟ್ವೀಟ್ ಗಮನಿಸಿ ಅಕಾಸ ಏರ್‌ಲೈನ್ಸ್ ಏರ್ ಪೋರ್ಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿತ್ತು.
18 ವರ್ಷದ ಈ ವಿದ್ಯಾರ್ಥಿ “ಅಕಾಸ ಏರ್ ಬೋಯಿಂಗ್ 737 ಮ್ಯಾಕ್ಸ್ ಪತನಗೊಳ್ಳುತ್ತದೆ” ಎಂದು ಟ್ವೀಟ್ ಮಾಡಿದ್ದ.
ತನಿಖೆಯ ವೇಳೆ ಐಪಿ ಅಡ್ರೆಸ್ ಟ್ರೇಸ್ ಮಾಡಿ ಗುಜರಾತ್ ನ ಸೂರತ್ ನಿಂದ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ.
ವಿಚಾರಣೆ ವೇಳೆ ತನಗೆ ವಿಮಾನಗಳ ಬಗ್ಗೆ ಆಸಕ್ತಿ ಇದ್ದು, ಇಂತಹ ಟ್ವೀಟ್ ನ ಪರಿಣಾಮದ ಬಗ್ಗೆ ಯೋಚಿಸಿಲ್ಲ. ಆತಂಕ ಸೃಷ್ಟಿಸುವುದು ತನ್ನ ಉದ್ದೇಶವಾಗಿರಲಿಲ್ಲ ಎಂದು ಆತ ಹೇಳಿದ್ದಾನೆ.
ಸದ್ಯ ಆತನಿಗೆ ಪರೀಕ್ಷೆ ಇರುವ ಕಾರಣ 5000 ದಂಡ ವಿಧಿಸಿ ಬಿಡುಗಡೆಗೊಳಿಸಲಾಗಿದೆ.