ಒಡಿಶಾ: 6 ಬೀದಿ ನಾಯಿಗಳಿಗೆ ವಿಷ ಹಾಕಿ ಕೊಂದಿರುವ ಘಟನೆ ಒಡಿಶಾ ರಾಜಧಾನಿಯ ಚಂದ್ರಶೇಖರ್‌ಪುರ ಪ್ರದೇಶದ ಕೊಳೆಗೇರಿಯಲ್ಲಿ ನಡೆದಿದೆ. ಆಹಾರದಲ್ಲಿ ವಿಷವನ್ನು ಹಾಕಿ ನಾಯಿಗಳಿಗೆ ತಿನ್ನಲು ನೀಡಿದ್ದಾರೆ. ಇದರಿಂದ ಪ್ರಾಣಿಗಳು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಇದರ ಜತೆಗೆ ಇತರ ನಾಯಿಗಳು ಈ ಆಹಾರವನ್ನು ಸೇವಿಸಿದ್ದು, ಇದೀಗ ಅವುಗಳ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
ನಾಯಿಗಳನ್ನು ಕೊಂದಿರುವುದಕ್ಕೆ ಯಾವುದೇ ನಿಖರ ಕಾರಣ ಇನ್ನೂ ತಿಳಿಸದುಬಂದಿಲ್ಲ. ಘಟನೆ ಕುರಿತು ‘ಪೀಪಲ್ ಫಾರ್ ಅನಿಮಲ್ಸ್’ ಸಂಘಟನೆ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಗಳ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.