Monday, February 9, 2026
Homeಟಾಪ್ ನ್ಯೂಸ್BREAKING: ಪಾಕಿಸ್ತಾನದ ಎಲ್ಲಾ ಒಟಿಟಿಗಳು ಬ್ಯಾನ್​- ಜಿನ್ನಾಲ್ಯಾಂಡ್​ಗೆ ಮತ್ತೊಂದು ಶಾಕ್ ಕೊಟ್ಟ ಭಾರತ!

BREAKING: ಪಾಕಿಸ್ತಾನದ ಎಲ್ಲಾ ಒಟಿಟಿಗಳು ಬ್ಯಾನ್​- ಜಿನ್ನಾಲ್ಯಾಂಡ್​ಗೆ ಮತ್ತೊಂದು ಶಾಕ್ ಕೊಟ್ಟ ಭಾರತ!

ನವದೆಹಲಿ: ಪಾಕಿಸ್ತಾನ ವಿರುದ್ಧ ಏನೆಲ್ಲಾ ಕಠಿಣ ಕ್ರಮ ಕೈಗೊಳ್ಳಬೇಕೋ ಎಲ್ಲವನ್ನೂ ಮೋದಿ ಸರ್ಕಾರ ಮಾಡುತ್ತಿದೆ. ಈಗ ಪಾಕಿಸ್ತಾನದ ಎಲ್ಲಾ ಒಟಿಟಿ ಪ್ಲಾಟ್‌ಫಾರ್ಮ್‌ಗಳು, ಮೀಡಿಯಾ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳು, ಪಾಕಿಸ್ತಾನ ಮೂಲದ ವೆಬ್ ಸೀರಿಸ್, ಚಲನಚಿತ್ರಗಳು, ಹಾಡುಗಳು, ಪಾಡ್‌ಕಾಸ್ಟ್‌ಗಳು ಮತ್ತು ಇತರ ಸ್ಟ್ರೀಮಿಂಗ್ ಪ್ರಸಾರವನ್ನು ತಕ್ಷಣವೇ ನಿಲ್ಲಿಸುವಂತೆ ಭಾರತ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸೂಚನೆ ನೀಡಿದೆ.

ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಭಾರತ ಹೇಳಿದೆ. ಪಹಲ್ಗಾಮ್​ ಭಯೋತ್ಪಾದಕರ ದಾಳಿ ನಡೆದ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಸಂಪೂರ್ಣವಾಗಿ ಹದಗೆಟ್ಟಿದ್ದು, ಪ್ರಸಾರ ಸಚಿವಾಲಯ ಪಾಕಿಸ್ತಾನದ ಒಟಿಟಿ ಕಂಟೆಂಟ್​ಗಳಿಗೆ ನಿಷೇಧ ಹೇರಿದೆ.

ಭಾರತವು ಈಗಾಗಲೇ ಪಾಕಿಸ್ತಾನದ ಹಲವಾರು ಯೂಟ್ಯೂಬ್ ಚಾನೆಲ್‌ಗಳನ್ನು ನಿಷೇಧಿಸಿದೆ. ಅವೆಲ್ಲವೂ ಭಾರತದ ವಿರುದ್ಧ ಪ್ರಚೋದನಕಾರಿ, ದೇಶವಿರೋಧಿ ಮಾಹಿತಿ ಹರಡುತ್ತವೆ ಎಂದು ಆರೋಪಿಸಲಾಗಿತ್ತು. ಆ ನಿಷೇಧವನ್ನು ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೂ ವಿಸ್ತರಿಸಲಾಗಿದೆ.

ಭಾರತದಲ್ಲಿ ಪಾಕ್ ಧಾರಾವಾಹಿಗಳು ಫೇಮಸ್!: ಪಾಕಿಸ್ತಾನದ ಜನಪ್ರಿಯ ಧಾರಾವಾಹಿಗಳಾದ ಜಿಂದಗಿ ಗುಲ್ಜಾರ್ ಹೈ, ಹಮ್‌ಸಫರ್, ಮೇರೆ ಹಮ್‌ಸಫರ್ ಮತ್ತು ತೇರೆ ಬಿನ್​ ಭಾರತೀಯ ಪ್ರೇಕ್ಷಕರನ್ನು ಸೆಳೆಯುತ್ತಿದ್ದವು. ಈಗ ಅವೆಲ್ಲವೂ ಭಾರತದಲ್ಲಿ ಬ್ಯಾನ್ ಆಗಿವೆ.

ಪಾಕಿಸ್ತಾನದ ಖ್ಯಾತ ಸೆಲೆಬ್ರಿಟಿಗಳಾದ ಮಹೀರಾ ಖಾನ್, ಹನಿಯಾ ಅಮೀರ್, ಅಲಿ ಜಾಫರ್ ಮತ್ತು ಸನಮ್ ಸಯೀದ್ ಸೇರಿದಂತೆ ಹಲವರ ಇನ್‌ಸ್ಟಾಗ್ರಾಮ್ ಖಾತೆಗಳನ್ನು ನಿಷೇಧಿಸಲಾಗಿದೆ.

ಪಾಕಿಸ್ತಾನದಲ್ಲಿ ಚಿತ್ರೀಕರಣಗೊಂಡಿದ್ದ ಭಾರತೀಯ ನಟಿ ವಾಣಿ ಕಪೂರ್ ಮತ್ತು ಪಾಕಿಸ್ತಾನಿ ನಟ ಫವಾದ್ ಖಾನ್ ಅಭಿನಯದ ಅಬೀರ್ ಗುಲಾಲ್ ಚಲನಚಿತ್ರದ ಭಾರತದ ಬಿಡುಗಡೆಯನ್ನೂ ರದ್ದುಗೊಳಿಸಲಾಗಿದೆ.

ಹೆಚ್ಚಿನ ಸುದ್ದಿ

Change Language »
While viewing the website, tap in the menu bar. Scroll down the list of options, then tap Add to Home Screen.
Use Safari for a better experience.
error: Content is protected !!