ಹೈದರಾಬಾದ್: ವಂದೇ ಭಾರತ್ ರೈಲಿನ ಮೇಲೆ ಕಲ್ಲು ತೂರಾಟ ನಡೆದಿದ್ದು, ರೈಲಿನ ಕಿಟಕಿ ಗಾಜು ಒಡೆದಿವೆ ಎಂದು ಮೂಲಗಳು ತಿಳಿಸಿವೆ.
ಕಳೆದ ಮೂರು ತಿಂಗಳಲ್ಲಿ ವಿಶಾಖಪಟ್ಟಣಂ-ಸಿಕಂದರಾಬಾದ್ ವಂದೇ ಭಾರತ್ ಎಕ್ಸ್ ಪ್ರೆಸ್ ಮೇಲೆ ಕಲ್ಲು ತೂರಾಟ ನಡೆದ ಮೂರನೇ ಘಟನೆ ಇದಾಗಿದೆ. ಬುಧವಾರ ವಿಶಾಖಪಟ್ಟಣದಿಂದ ಹೊರಡಬೇಕಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ಅನ್ನು 05:45 ಗಂಟೆಗೆ ನಿಗದಿತ ನಿರ್ಗಮನದ ಬದಲು 09:45 ಗಂಟೆಗೆ ಮರು ನಿಗದಿಪಡಿಸಲಾಗಿದೆ. ದುಷ್ಕರ್ಮಿಗಳ ಕಲ್ಲು ತೂರಾಟದಿಂದಾಗಿ ಸಿ -8 ಕೋಚ್‌ನ ಕಿಟಕಿ ಗಾಜು ಒಡೆದಿವೆ ಎಂದು ಅಡಿಕಾರಿಗಳು ತಿಳಿಸಿದ್ದಾರೆ.
ಜನವರಿಯಲ್ಲಿಯೂ ವಿಶಾಖಪಟ್ಟಣಂನಲ್ಲಿ ಕಲ್ಲು ತೂರಾಟ ನಡೆದಿತ್ತು. ವಿಶಾಖಪಟ್ಟಣಂನ ಕಂಚರಪಾಲೆಂ ಬಳಿ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಕೋಚ್‌ನ ವಿಂಡ್ಶೀಲ್ಡ್ಗೆ ಹಾನಿಯಾಗಿತ್ತು