ಗುರುಗ್ರಾಮ್: ಈ ಜಗತ್ತಿನಲ್ಲಿ (World) ಯಾವಾಗ ಏನಾಗುತ್ತದೆ ಎಂಬುದನ್ನ ಅರ್ಥ ಮಾಡಿಕೊಳ್ಳುವುದು ಎಷ್ಟು ಕಷ್ಟವೋ ಹಾಗೆಯೇ ಮನುಷ್ಯನ ಸ್ವಭಾವವನ್ನ (Human Behaviour) ಸಹ ಅರಿಯುವುದು ಕಷ್ಟದ ಮಾತೇ, ಯಾರು ಯಾವಾಗ ಯಾವ ರೀತಿ ವರ್ತನೆ ಮಾಡುತ್ತಾರೆ ಎಂಬುದು ತಿಳಿಯಲ್ಲ. ಇದೀಗ ತಂದೆಯೊಬ್ಬರು̈ Father) ಮಗಳನ್ನ ಗುಂಡಿಕ್ಕಿ ಕೊಂದಿರುವ ಘಟನೆ ಗುರುಗ್ರಾಮ್‌ದಲ್ಲಿ (Gurugram) ನಡೆದಿದೆ.
ಟೆನಿಸ್ ಆಟಗಾರ್ತಿಗೆ ಗುಂಡಿಕ್ಕಿದ ತಂದೆ
ಗುರುಗ್ರಾಮದ ಸುಶಾಂತ್ ಲೋಕ್‌ನಲ್ಲಿ ಈ ಘಟನೆ ನಡೆದಿದ್ದು, ಟೆನಿಸ್ ಆಟಗಾರ್ತಿರಾಧಿಕಾ ಯಾದವ್ ಅವರನ್ನ ತಂದೆಯೇ ಗುಡು ಹಾರಿಸಿ ಕೊಲೆ ಮಾಡಿದ್ದಾರೆ. ಸುಶಾಂತ್ ಲೋಕ್-ಹಂತ 2 ರಲ್ಲಿ ವಾಸಿಸುತ್ತಿದ್ದ ರಾಧಿಕಾ ಅವರ ಮೇಲೆ 5 ಗುಂಡುಗಳನ್ನ ಹಾರಿಸಿದ್ದು, 3 ಗುಂಡುಗಳು ತಗುಲಿ ರಾಧಿಕಾ ಸಾವನ್ನಪ್ಪಿದ್ದಾರೆ. ಸದ್ಯ ಪೊಲೀಸರು ಆರೋಪಿಯನ್ನ ಬಂಧಿಸಿದ್ದು, ವಿಚಾರಣೆ ಮಾಡುತ್ತಿದ್ದಾರೆ.
ಮಗಳ ರೀಲ್ಸ್ ಹುಚ್ಚಿನಿಂದ ಅಸಮಾಧಾನಗೊಂಡಿದ್ದ ತಂದೆ
ರಾಧಿಕಾ ರಾಜ್ಯಮಟ್ಟದ ಟೆನಿಸ್ ಆಟಗಾರ್ತಿಯಾಗಿ ಹೆಸರು ಪಡೆದಿದ್ದು, ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆದ್ದು ಬಂದಿದ್ದಾರೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ರಾಧಿಕಾ ಅವರು ಸಾಮಾಜಿಕ ಮಾಧ್ಯಮದಲ್ಲಿ ರೀಲ್ಸ್ ಮಾಡುವ ಅಭ್ಯಾಸವನ್ನ ಬೆಳೆಸಿಕೊಂಡಿದ್ದರು. ಆದರೆ ತಂದೆಗೆ ಇದು ಸುತರಾಂ ಇಷ್ಟವಿರಲ್ಲಿಲ್ಲ. ಎಷ್ಟೇ ಹೇಳಿದರೂ ಮಗಳು ಕೇಳಿದಿದ್ದಾಗ ಈ ಕೆಲಸ ಮಾಡಿದ್ದು, 25 ವರ್ಷದ ರಾಧಿಕಾರನ್ನ ಮನೆಯೊಳಗೆ ಮಧ್ಯಾಹ್ನದ ಸುಮಾರಿಗೆ ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ.