ರಾಜ್ಯಾದ್ಯಂತ ಚುರುಕಿನಮತದಾನ ಪ್ರಾರಾಂಭವಾಗಿದ್ದು, ಜನ ಮುಂಜಾನೆ ಏಳು ಗಂಟೆಯಿಂದಲೇ ಮತಗಟ್ಟೆಗಳಿಗೆ ಆಗಮಿಸಿ ಹಕ್ಕು ಚಲಾಯಿಸುತ್ತಿದ್ದಾರೆ. ಇನ್ನು ಹಲವೆಡೆ ಇವಿಎಂ ಕೈಕೊಟ್ಟ ಪರಿಣಾಮ ಜನ ಕಾದುನಿಲ್ಲುವ ಪರಿಸ್ಥಿತಿನಿರ್ಮಾಣವಾಗಿದೆ.
ತುಮಕೂರು ನಗರದ ಶಿರಾ ಗೇಟ್ ಬಳಿಯ ಅರಳೀಮರದಪಾಳ್ಯ ಬೂತ್ ನಂ 21ರಲ್ಲಿ ಇವಿಎಂಂ ಕೈಕೊಟ್ಟು ಮತದಾನ ವಿಳಂಬವಾಗಿದೆ. ಇವಿಎಂ ಮತ ಯಂತ್ರ ಸರಿಪಡಿಸಲು ಅಧಿಕಾರಿಗಳು ಹರಸಾಹಸ ಪಡುವಂತಾಯಿತು. ಕೊನೆಗೆ ಮತಯಂತ್ರದ ದೋಷ ಸರಿಪಡಿಸಿಲು ಮತಗಟ್ಟೆಗೆ ಟೆಕ್ನಿಷಿಯನ್ ಆಗಮಿಸಿದರು.
ಇತ್ತ ಮಂಡ್ಯದಲ್ಲೂ ಬೆಳಗ್ಗೆಯೇ ಇವಿಎಂ ಕೈಕೊಟ್ಟು ನಿಂತಿತ್ತು. ನಗರದ ಗುತ್ತಲಿನ ಅರಕೇಶ್ಚರ ನಗರದ ಬೂತ್ ನಂ 230 ನಲ್ಲಿ ಮಾರ್ಕ್ ಪೊಲೀಂಗ್ ಸಿದ್ದತೆ ವೇಳೆ ಇವಿಎಂ ಕೈಕೊಟ್ಟಿತ್ತು. ತಕ್ಷಣವೇ ಚುನಾವಣಾ ಮೇಲುಸ್ತುವಾರಿ ಗಮನಕ್ಕೆ ತಂದ ಮತಗಟ್ಟೆ ಸಿಬ್ಬಂದಿಗಳು, ಚುನಾವಣಾ ಶಾಖೆಯ ತಾಂತ್ರಿಕ ವರ್ಗದಿಂದ ಇವಿಎಂ ಪರಿಶೀಲನೆ ನಡೆಸಿದರು. ಕೂಡಲೇ ಕೈ ಕೊಟ್ಟ ಮತಯಂತ್ರ ದುರಸ್ತಿ ಮಾಡಿ ಮಾರ್ಕ್ ಪೊಲೀಂಗ್ ಗೆ ಅವಕಾಶ ಮಾಡಿಕೊಡಲಾಯಿತು.