Monday, February 9, 2026
Homeಟಾಪ್ ನ್ಯೂಸ್STRALINK: ಭಾರತಕ್ಕೆ ಬಂತು ಮಸ್ಕ್ ಒಡೆತನದ ಇಂಟರ್ನೆಟ್- ಸ್ಟಾರ್​​ಲಿಂಕ್‌ಗೆ ಕೇಂದ್ರ ಅನುಮತಿ

STRALINK: ಭಾರತಕ್ಕೆ ಬಂತು ಮಸ್ಕ್ ಒಡೆತನದ ಇಂಟರ್ನೆಟ್- ಸ್ಟಾರ್​​ಲಿಂಕ್‌ಗೆ ಕೇಂದ್ರ ಅನುಮತಿ

ನವದೆಹಲಿ: ಉದ್ಯಮಿ ಎಲೋನ್ ಮಸ್ಕ್ ಮಾಲೀಕತ್ವ ಸ್ಟಾರ್‌ಲಿಂಕ್ ಭಾರತದಲ್ಲಿ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆಗಳನ್ನು ನಿರ್ವಹಿಸಲು ಸರ್ಕಾರದ ಅನುಮೋದನೆ ಪಡೆದಿದೆ. ರಾಷ್ಟ್ರೀಯ ಭದ್ರತೆಗೆ ಬೇಕಾದ ಲೈಸೆನ್ಸ್‌ ಷರತ್ತುಗಳನ್ನು ಪಾಲಿಸಲು ಕಂಪನಿ ಒಪ್ಪಿಕೊಂಡ ಬೆನ್ನಲ್ಲೇ ದೂರಸಂಪರ್ಕ ಇಲಾಖೆ ಅನುಮತಿ ನೀಡಿದೆ.

ಸ್ಟಾರ್‌ಲಿಂಕ್ ವಿಶ್ವದ ಅತಿದೊಡ್ಡ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆ ನೀಡುತ್ತಿದ್ದು, ಬರೋಬ್ಬರಿ 6,750 ಕ್ಕೂ ಹೆಚ್ಚು ಉಪಗ್ರಹಗಳನ್ನು ಒಳಗೊಂಡಿದೆ. ವಿಶ್ವಾದ್ಯಂತ ಲಕ್ಷಾಂತರ ಬಳಕೆದಾರರಿಗೆ ಅತ್ಯಂತ ವೇಗದ ಇಂಟರ್ನೆಟ್ ನೀಡುತ್ತಿದೆ. ಉತ್ತರ ಅಮೆರಿಕ, ಯುರೋಪ್‌, ಆಸ್ಟ್ರೇಲಿಯಾ, ಏಷ್ಯಾದ ಕೆಲವು ಭಾಗಗಳು, ಆಫ್ರಿಕಾದ ಬಹುತೇಕ ಎಲ್ಲಾ ದೇಶಗಳಲ್ಲಿ ಸ್ಟಾರ್‌ಲಿಂಕ್‌ ತನ್ನ ಸೇವೆಯನ್ನು ವಿಸ್ತರಿಸಲಿದೆ.

ಸ್ಪೇಸ್‌ಎಕ್ಸ್‌ನ ಸ್ಟಾರ್‌ಲಿಂಕ್ ಇತ್ತೀಚೆಗೆ ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್‌ ಜೊತೆ ಒಪ್ಪಂದ ಮಾಡಿಕೊಂಡಿವೆ. ಸ್ಟಾರ್‌ಲಿಂಕ್‌ ಹೇಗೆ ಕೆಲಸ ಮಾಡುತ್ತದೆ. ಸದ್ಯ ನಾವು ಬಳಸುವ ಇಂಟರ್ನೆಟ್ ಸೇವೆಗೆ ಟವರ್‌ಗಳು ಬೇಕೇ ಬೇಕು. ಆದರೆ, ಸ್ಟಾರ್‌ಲಿಂಕ್‌ ವ್ಯವಸ್ಥೆಯಲ್ಲಿ ಇಂಟರ್ನೆಟ್​ನ್ನು ಉಪಗ್ರಹದಿಂದ ನೇರವಾಗಿ ಬಳಕೆದಾರರ ಮನೆಗೆ ತಲುಪಿಸಲಾಗುತ್ತದೆ. ಈ ರೀತಿ ಇಂಟರ್ನೆಟ್​ನ್ನು ಸ್ವೀಕರಿಸಲು ಬಳಕೆದಾರರು ಸ್ಟಾರ್‌ಲಿಂಕ್‌ ಡಿಶ್‌ ಅಥವಾ ರೂಟರ್‌ ಹೊಂದಿರಬೇಕು. ಈ ಉಪಕರಣ ತನ್ನ ಜಾಗಕ್ಕೆ ಸಮೀಪದ ಸ್ಟಾರ್‌ಲಿಂಕ್‌ ಉಪಗ್ರಹಗಳ ಜೊತೆ ಸಂಪರ್ಕ ಸಾಧಿಸುತ್ತದೆ.

ಯಾಕೆ ಬೇಕು ಸ್ಟಾರ್​ಲಿಂಕ್..?: ಎಲ್ಲರಿಗೂ ಗೊತ್ತಿರುವ ಹಾಗೆ ಮೊಬೈಲ್‌ ಸಂಪರ್ಕಕ್ಕೆ ಟವರ್‌ಗಳು ಬೇಕೇ ಬೇಕು. ಇಂದಿಗೂ ದೇಶದ ಹಲವೆಡೆ ಅದರಲ್ಲಿಯೂ ಮುಖ್ಯವಾಗಿ ಗ್ರಾಮೀಣ ಭಾಗಗಳಲ್ಲಿ ಮೊಬೈಲ್‌ ಸಂಪರ್ಕದ ಸಮಸ್ಯೆ ಇದೆ. ಇದರಿಂದಾಗಿ 70 ಕೋಟಿಗೂ ಅಧಿಕ ಭಾರತೀಯರು ಅತ್ಯುತ್ತಮ ಇಂಟರ್ನೆಟ್‌ ಸೇವೆಯಿಂದ ವಂಚಿತರಾಗಿದ್ದಾರೆ. ಸ್ಟಾರ್​ಲಿಂಕ್ ಬಂದರೆ ಎಲ್ಲಾ ಸಮಸ್ಯೆಗಳಿಗೂ ಮುಕ್ತಿ ಸಿಗಲಿದೆ.

ಹೆಚ್ಚಿನ ಸುದ್ದಿ

Change Language »
While viewing the website, tap in the menu bar. Scroll down the list of options, then tap Add to Home Screen.
Use Safari for a better experience.
error: Content is protected !!