ಬೆಂಗಳೂರು : ಮಚ್ಚಾ ಎಂದು ಕರೆದ ಕ್ಷುಲ್ಲಕ ಕಾರಣಕ್ಕೆ ತನ್ನ ಹೆಂಡತಿಯ ತಮ್ಮ ಅರ್ಥಾತ್ ನಿಜವಾದ ಮಚ್ಚನನ್ನು ಕರೆತಂದು ಅವನೊಡನೆ ಸೇರಿ ಹತ್ಯೆಗೆ ಯತ್ನಿಸಿರುವ ಘಟನೆ ಚಿಕ್ಕಗೊಲ್ಲರ ಹಟ್ಟಿಯಲ್ಲಿ ನಡೆದಿದೆ. ಕೀರ್ತಿಕುಮಾರ್ ಹಲ್ಲಗೊಳಗಾದ ಯುವಕನಾಗಿದ್ದು, ಸುನಿಲ್ ಮತ್ತು ಗಣೇಶ್ ಎಂಬಿಬ್ಬರು ಯುವಕರು ಹಲ್ಲೆ ನಡೆಸಿದ್ದಾರೆ.
ಶುಕ್ರವಾರ ರಾತ್ರಿ ಕೀರ್ತಿಕುಮಾರ್ ಗೆಳೆಯರಾದ ಮಧು ಮತ್ತು ಮಹೇಶ್ ಎಂಬ ಇಬ್ಬರು ಯುವಕರು ಬಾರ್ ನಲ್ಲಿ ಕುಡಿದು ಜಗಳವಾಡಿಕೊಂಡಿದ್ದರು. ಈ ಜಗಳವನ್ನು ನೋಡಲು ಗುಂಪು ನೆರೆದಿತ್ತು. ಅಲ್ಲೇ ಸಾಗುತ್ತಿದ್ದ ಸುನಿಲ್ ತನ್ನ ಬೈಕ್ ನಿಲ್ಲಿಸಿ ಜಗಳ ನೋಡಲು ಬಂದಿದ್ದ. ಇದನ್ನು ನೋಡಿದ ಕೀರ್ತಿಕುಮಾರ್ ಏನ್ ನೋಡ್ತಿಯೋ ಮಚ್ಚಾ ನಡೆಯೋ ಮನೆಗೆ ಎಂದು ಅವಾಜ್ ಬಿಟ್ಟಿದ್ದ. ಇದರಿಂದ ಕೆರಳಿದ ಸುನಿಲ್ ಮನೆಗೆ ತೆರಳಿ ತನ್ನ ಮಚ್ಚ ಗಣೇಶ್ ನನ್ನು ಕರೆತಂದು ಕೀರ್ತಿಕುಮಾರ್ ಗೆ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ.
ಆರೋಪಿಗಳನ್ನು ಬಂಧಿಸಿರುವ ಮಾದನಾಯಕನಹಳ್ಳಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.