Wednesday, August 19, 2026
Homeಟಾಪ್ ನ್ಯೂಸ್SHOCKING‌ : ಢೀ ಢೀ ಡಿಕ್ಕಿ - ಚಂದಮಾಮನಿಗೆ ಇಂದು ಡಿಕ್ಕಿ ಹೊಡೆಯಲಿದೆ ಸ್ಪೇಸ್...

SHOCKING‌ : ಢೀ ಢೀ ಡಿಕ್ಕಿ – ಚಂದಮಾಮನಿಗೆ ಇಂದು ಡಿಕ್ಕಿ ಹೊಡೆಯಲಿದೆ ಸ್ಪೇಸ್ ಎಕ್ಸ್ ರಾಕೆಟ್ ಭಾಗ!

ವಾಷಿಂಗ್ಟನ್: ಕಳೆದ ವರ್ಷದಿಂದ ಬಾಹ್ಯಾಕಾಶದಲ್ಲಿ(Space) ನಿಯಂತ್ರಣವಿಲ್ಲದೆ ತೇಲುತ್ತಿದ್ದ ‘ಸ್ಪೇಸ್ ಎಕ್ಸ್’ (SpaceX) ಸಂಸ್ಥೆಯ 4 ಟನ್ ತೂಕದ ರಾಕೆಟ್‌ ಭಾಗವೊಂದು(Rocket part) ಬುಧವಾರದಂದು ಗಂಟೆಗೆ ಬರೋಬ್ಬರಿ 8,690 ಕಿ.ಮೀ (5,400 ಮೈಲಿ) ತೀವ್ರ ವೇಗದಲ್ಲಿ ಚಂದ್ರನ ಮೇಲ್ಮೈಗೆ ಡಿಕ್ಕಿ ಹೊಡೆಯಲಿದೆ. ಭಾರತೀಯ ಕಾಲಮಾನ ಮಧ್ಯಾಹ್ನ 12.05ರ ವೇಳೆಗೆ ಈ ಘಟನೆ ನಡೆಯಲಿದ್ದು, ಇದರಿಂದ ಭೂಮಿಗೆ ಯಾವುದೇ ಅಪಾಯವಿಲ್ಲವಾದರೂ ಚಂದ್ರನ ಮೇಲೆ ಹೊಸ ಕುಳಿ ಸೃಷ್ಟಿಯಾಗಲಿದೆ.

ಶಾಲಾ ಬಸ್‌ ಗಾತ್ರದ ಈ ವಸ್ತು ಸ್ಪೇಸ್ ಎಕ್ಸ್‌ನ ‘ಫಾಲ್ಕನ್ 9’ (Falcon 9) ರಾಕೆಟ್‌ನ ಎರಡನೇ ಹಂತದ ಭಾಗವಾಗಿದೆ. ಈ ರಾಕೆಟ್ 2025ರ ಜನವರಿಯಲ್ಲಿ ‘ಫೈರ್‌ಫ್ಲೈ ಏರೋಸ್ಪೇಸ್’ ಸಂಸ್ಥೆಯ ಲೂನಾರ್ ಲ್ಯಾಂಡರ್ ಅನ್ನು ಚಂದ್ರನತ್ತ ಹೊತ್ತೊಯ್ದಿತ್ತು. ಕಾರ್ಯಾಚರಣೆ ಮುಗಿದ ನಂತರ ಬಾಹ್ಯಾಕಾಶದಲ್ಲಿ ಉಳಿದುಕೊಂಡಿದ್ದ ಈ ಭಾಗ, ಸೂರ್ಯನ ವಿಕಿರಣ ಹಾಗೂ ಗುರುತ್ವಾಕರ್ಷಣೆಯ ಬಲದಿಂದಾಗಿ ಪಥ ಬದಲಾಯಿಸಿ ಚಂದ್ರನತ್ತ ಸಾಗಿದೆ.

18 ಮೀಟರ್ ಅಗಲದ ಹೊಸ ಕುಳಿ ಸೃಷ್ಟಿ
ನಾಸಾ (NASA) ನೀಡಿದ ಮಾಹಿತಿಯ ಪ್ರಕಾರ, ಈ ಅಪಘಾತದಿಂದ ಚಂದ್ರನ ಪಶ್ಚಿಮ ಅಂಚಿನಲ್ಲಿರುವ ‘ಐನ್ಸ್ಟೈನ್ ಕುಳಿ’ ಪ್ರದೇಶದಲ್ಲಿ ಸುಮಾರು 60 ಅಡಿ (18 ಮೀಟರ್) ಅಗಲ ಹಾಗೂ 12 ಅಡಿ (4 ಮೀಟರ್) ಆಳದ ನೂತನ ಕುಳಿ ನಿರ್ಮಾಣವಾಗಲಿದೆ. ಡಿಕ್ಕಿಯ ತೀವ್ರತೆಗೆ ಅಪಾರ ಪ್ರಮಾಣದ ಕಲ್ಲು ಮತ್ತು ಧೂಳಿನ ಕಣಗಳು ಹೊರಚೆಲ್ಲಲಿವೆ. ಈ ಘಟನೆಯ ಮೊದಲು ಮತ್ತು ನಂತರದ ಚಿತ್ರಗಳನ್ನು ಸೆರೆಹಿಡಿದು, ಮಾನವ ನಿರ್ಮಿತ ಡಿಕ್ಕಿಗಳು ಹಾಗೂ ಬಾಹ್ಯಾಕಾಶ ತ್ಯಾಜ್ಯಗಳ ನಡವಳಿಕೆಯನ್ನು ಅಧ್ಯಯನ ಮಾಡಲು ನಾಸಾ ನಿರ್ಧರಿಸಿದೆ.

ಹೆಚ್ಚುತ್ತಿರುವ ಬಾಹ್ಯಾಕಾಶ ತ್ಯಾಜ್ಯದ ಆತಂಕ
ಸಾಮಾನ್ಯವಾಗಿ ರಾಕೆಟ್‌ಗಳ ಬಿಡಿಭಾಗಗಳು ಭೂಮಿಯ ವಾತಾವರಣಕ್ಕೆ ಮರಳಿ ಉರಿದು ಹೋಗುತ್ತವೆ ಅಥವಾ ಸಾಗರಕ್ಕೆ ಬೀಳುತ್ತವೆ. ಆದರೆ ಆಳ ಬಾಹ್ಯಾಕಾಶ ಯೋಜನೆಗಳಲ್ಲಿ ಹೀಗೆ ನಿಯಂತ್ರಣ ತಪ್ಪಿ ಉಳಿಯುವ ‘ಸ್ಪೇಸ್ ಜಂಕ್’ (Space Junk) ಚಂದ್ರನಿಗೆ ಡಿಕ್ಕಿಯಾಗುತ್ತಿರುವುದು ಬಾಹ್ಯಾಕಾಶ ಜವಾಬ್ದಾರಿಯ ಕುರಿತು ಕಳವಳ ಮೂಡಿಸಿದೆ. 2022ರಲ್ಲಿ ಚೀನಾದ ರಾಕೆಟ್ ಭಾಗವೊಂದು ಚಂದ್ರನಿಗೆ ಡಿಕ್ಕಿಯಾಗಿತ್ತು. ಇಂತಹ ಅನಗತ್ಯ ಅಪಘಾತಗಳನ್ನು ತಡೆಯುವ ತಂತ್ರಜ್ಞಾನ ರೂಪಿಸಲು ನಾಸಾ ಮತ್ತು ಸ್ಪೇಸ್ ಎಕ್ಸ್ ಚರ್ಚೆ ನಡೆಸುತ್ತಿವೆ.

ಇದನ್ನೂ ಓದಿ : ಸಚಿವ ಸ್ಥಾನ ಸಿಕ್ಕಿಲ್ಲ ಅಂತ ಬಂದ್ ಮಾಡೋದೆಲ್ಲ ತಪ್ಪು – ಯತೀಂದ್ರ ಸಿದ್ದರಾಮಯ್ಯ

ಹೆಚ್ಚಿನ ಸುದ್ದಿ

Change Language »
error: Content is protected !!