Tuesday, November 5, 2024
Homeಚುನಾವಣೆ 2023ಕೈತಪ್ಪಿದ ಕಾಂಗ್ರೆಸ್ ಟಿಕೆಟ್: ಸವದತ್ತಿ ಕ್ಷೇತ್ರದಲ್ಲಿ ಬಂಡಾಯದ ಕಿಚ್ಚು

ಕೈತಪ್ಪಿದ ಕಾಂಗ್ರೆಸ್ ಟಿಕೆಟ್: ಸವದತ್ತಿ ಕ್ಷೇತ್ರದಲ್ಲಿ ಬಂಡಾಯದ ಕಿಚ್ಚು

ಬೆಳಗಾವಿ: ಸವದತ್ತಿ ಮತ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಸೌರಭ್ ಚೋಪ್ರಾ ಟಿಕೆಟ್ ಕೈತ್ತಪ್ಪಿದ ಹಿನ್ನೆಲೆಯಲ್ಲಿ ಬಂಡಾಯವೆದ್ದಿದ್ದಾರೆ. ಸವದತ್ತಿ ಪಟ್ಟಣದಲ್ಲಿ ಕಾರ್ಯಕರ್ತರ ಸಭೆ ನಡೆಸಿದ ಸೌರಭ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಕಾರ್ಯಕರ್ತರ ಒತ್ತಡಕ್ಕೆ ಮಣಿದು ಸ್ಪರ್ಧೆ ಮಾಡುತ್ತಿದ್ದೇನೆ ಎನ್ನುವ ಮೂಲಕ ಸವದತ್ತಿ ಕ್ಷೇತ್ರದಲ್ಲಿ ಬಂಡಾಯದ ಕಿಡಿ ಹೊತ್ತಿಸಿದ್ದಾರೆ

ಕಾಂಗ್ರೆಸ್ ನಾಯಕರು ಈ ಚುನಾವಣೆಗೆ ನನಗೆ ಟಿಕೆಟ್ ನೀಡುವ ವಿಶ್ವಾಸ ಹೊಂದಿದ್ದೆ. ಸವದತ್ತಿ ಕ್ಷೇತ್ರದ ಜನರ ಭಾವನೆಗಳಿಗೆ ಸ್ಪಂದಿಸುವುದು ನನ್ನ ಕರ್ತವ್ಯ. ಅವರ ಆಶಯದಂತೆ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ನಿರ್ಧಾರ ಮಾಡಿದ್ದೇನೆ ಎಂದಿದ್ದಾರೆ.

ಈ ಹಿಂದೆ 2013 ಹಾಗೂ 2018 ರಲ್ಲಿ ನಮ್ಮ ತಂದೆಗೆ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿತ್ತು. ಈ ಕಾರಣಕ್ಕೆ 2023ರಲ್ಲಿ ನನಗೆ ಸವದತ್ತಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಸಿಗುವ ನಿರೀಕ್ಷೆ ಇತ್ತು ಕಾಂಗ್ರೆಸ್ ಟಿಕೆಟ್‍ಗೆ ಅರ್ಜಿ ಸಲ್ಲಿಸಿದವರಲ್ಲಿ ನಾನೇ ಅತ್ಯಂತ ಕಿರಿಯವನಾಗಿದ್ದೇನೆ. ಯುವಕರ ಕೋಟಾದಲ್ಲಾದರೂ ನನಗೆ ಸವದತ್ತಿ ಕಾಂಗ್ರೆಸ್ ಟಿಕೆಟ್ ಸಿಗಬೇಕಿತ್ತು. ಸರ್ವೆನಲ್ಲಿ ನನ್ನ ಹೆಸರಿದೆ ಆದರೂ ನನಗೆ ಟಿಕೆಟ್ ಸಿಗಲಿಲ್ಲ. ಎಲ್ಲಾ ಅರ್ಹತೆಗಳೂ ನನ್ನಲ್ಲಿದ್ದರೂ ಸಹ ನನ್ನನ್ನು ಪರಿಗಣಿಸಲಿಲ್ಲ. ಈ ಕಾರಣದಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ ಎಂದು ಸೌರಭ್ ಚೋಪ್ರಾ ಹೇಳಿದ್ದಾರೆ

ಹೆಚ್ಚಿನ ಸುದ್ದಿ

error: Content is protected !!