ಉತ್ತರ ಪ್ರದೇಶ: ಈ ಸಮಾಜದಲ್ಲಿ ಅದೆಂತ ಜನರಿರುತ್ತಾರೆ ನೋಡಿ.. ತಪ್ಪು ಮಾಡಿದ್ದನ್ನ ಗದರಿ ತಿದ್ದಿ ಹೇಳಿದ ತಂದೆಯನ್ನೇ ಜೀವಂತ ಸುಟ್ಟು ಹಾಕಿದ್ದಾನೆ ಪಾಪಿ ಮಗ. ಈ ಘಟನೆಯ ಉತ್ತರಪ್ರದೇಶದ ಫಾರಿದಾ ಬಾದ್ ನಲ್ಲಿ ನಡೆದಿದೆ.
ಜೇಬಿನಿಂದ ಹಣ ಕದ್ದಿದ್ದಕ್ಕಾಗಿ ಅಲೀಮ್ ತನ್ನ ಮಗನನ್ನು ಗದರಿಸಿದ್ದರು. ಅದನ್ನು ಪ್ರಶ್ನಿಸಿದ್ದಕ್ಕೆ ಕಾನೂನು ಸಂಘರ್ಷಕ್ಕೊಳಗಾದ ಬಾಲಕನು ಕೋಪದಿಂದ ಬೆಂಕಿ ಹಚ್ಚಿದ್ದಾನೆ ಎಂದು ಶಂಕಿಸಲಾಗಿದೆ.
ಫರೀದಾಬಾದ್‌ನ ಅಜಯ್ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಮುಹಮ್ಮದ್ ಅಲೀಮ್ ತನ್ನ ಮಗನ ಜೊತೆ ಫರೀದಾಬಾದ್ ನ ರಿಯಾಝುದ್ದೀನ್ ಅವರ ಮನೆಯ ಟೆರೇಸ್‌ನಲ್ಲಿ ಒಂದು ಕೋಣೆಯನ್ನು ಬಾಡಿಗೆಗೆ ಪಡೆದಿದ್ದರು. ಈ ವೇಳೆ ತನ್ನ ಮಗ ಜೇಬಿನಿಂದ ಹಣವನ್ನು ಕದ್ದಿದ್ದ ಅದನ್ನು ಗದರಿಸಿದ್ದಕ್ಕಾಗಿ ಅಲೀಮ್ ನನ್ನೇ 14 ವರ್ಷದ ಮಗ ಮುಂಜಾನೆ ಎರಡು ಗಂಟೆ ಸುಮಾರಿಗೆ ಬೆಂಕಿ ಹಚ್ಚಿದ್ದಾನೆ. ಮನೆ ಮಾಲೀಕನಿಗೆ ಕಿರುಚಾಟ ಕೇಳಿದ ಕೂಡಲೇ ಓಡಿ ಬಂದು ನೋಡಿದಾಗ ಅಲಿಂ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. 14 ವರ್ಷದ ಬಾಲಕ ತಂದೆಗೆ ಬೆಂಕಿ ಹಚ್ಚಿ ಬಾಗಿಲು ಹಾಕಿ ಬೇರೊಂದು ಮನೆಯ ಮೂಲಕ ಪರಾರಿಯಾಗಿದ್ದಾನೆ.
ಸದ್ಯ ಮನೆ ಮಾಲೀಕ ರಿಯಾಝುದ್ದೀನ್ ನೀಡಿರುವ ದೂರಿನ ಅನ್ವಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ ಮಾತ್ರವಲ್ಲ ಬಾಲಕನ ಪತ್ತೆಗೆ ಬಲೆ ಬೀಸಿದ್ದಾರೆ.