Thursday, March 27, 2025
Homeಟಾಪ್ ನ್ಯೂಸ್30 ಕೋಟಿ ಆಸ್ತಿ ಇದ್ದರೂ ಮಗ ಊಟ ಹಾಕಲ್ಲ: ವೃದ್ಧ ದಂಪತಿ ಆತ್ಮಹತ್ಯೆ.!

30 ಕೋಟಿ ಆಸ್ತಿ ಇದ್ದರೂ ಮಗ ಊಟ ಹಾಕಲ್ಲ: ವೃದ್ಧ ದಂಪತಿ ಆತ್ಮಹತ್ಯೆ.!

ಮಗ ಸರಿಯಾಗಿ ಊಟವನ್ನೂ ಹಾಕುವುದಿಲ್ಲ ಎಂದು ಮನನೊಂದು ವೃದ್ಧ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಹರಿಯಾಣದಲ್ಲಿ ನಡೆದಿದೆ. ಮಾರ್ಚ್ 29 ರ ರಾತ್ರಿ ಸಲ್ಫಾಸ್ ಮಾತ್ರೆಗಳನ್ನು ಸೇವಿಸಿ ಹಿರಿಯ ಆತ್ಮಹತ್ಯೆ ಮಾಡಿಕೊಂಡಿದೆ.

ತಮ್ಮ ಮಗನಿಗೆ 30 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇದೆ, ಆದರೆ ನಮಗೆ ಆತ ಸರಿಯಾಗಿ ಆಹಾರ ಕೂಡಾ ಹಾಕುತ್ತಿಲ್ಲ ಎಂದು ಆತ್ಮಹತ್ಯಾ ಪತ್ರ ಬರೆದಿದ್ದಾರೆ.

ಮೃತರನ್ನು ಜಗದೀಶ್ ಚಂದ್ರ ಆರ್ಯ (78) ಮತ್ತು ಭಗ್ಲಿ ದೇವಿ (77) ಎಂದು ಗುರುತಿಸಲಾಗಿದ್ದು, ಅವರು ಚಾರ್ಖಿ ದಾದ್ರಿಯ ಬದ್ರಾದ ಶಿವ ಕಾಲೋನಿಯಲ್ಲಿರುವ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ವಿಷ ಸೇವಿಸುವ ಮುನ್ನ ಪೊಲೀಸ್‌ ಕಂಟ್ರೋಲ್‌ ರೂಮ್‌ಗೆ ಕರೆ ಮಾಡಿದ್ದ ವೃದ್ಧ ದಂಪತಿಯೇ ಪೊಲೀಸರಿಗೆ‌ ಆತ್ಮಹತ್ಯೆಯ ಬಗ್ಗೆ ಮಾಹಿತಿ ನೀಡಿದ್ದಾರೆ.

ಹೆಚ್ಚಿನ ಸುದ್ದಿ

error: Content is protected !!