Thursday, March 27, 2025
Homeಟಾಪ್ ನ್ಯೂಸ್ಅಮಿತ್ ಶಾ ಸಂಧಾನ : `ಸೋಮ'ನ ಕುಣಿತ ಮುಕ್ತಾಯ?

ಅಮಿತ್ ಶಾ ಸಂಧಾನ : `ಸೋಮ’ನ ಕುಣಿತ ಮುಕ್ತಾಯ?

ಗೋವಿಂದರಾಜನಗರ ಶಾಸಕ, ವಸತಿ ಸಚಿವ ವಿ.ಸೋಮಣ್ಣ ಪಕ್ಷಾಂತರದ ಚಟುವಟಿಕೆ ನಿರ್ಣಾಯಕ ಹಂತಕ್ಕೆ ತಲುಪಿದೆ.
ಬಿಜೆಪಿ ವರಿಷ್ಠ ಅಮಿತ್ ಶಾ ಜೊತೆಗಿನ ಸಂಧಾನ ಯಶಸ್ವಿಯಾಗುವ ಸಾಧ್ಯತೆಗಳು ಹೆಚ್ಚಾಗಿದ್ದು ಸೋಮಣ್ಣ ಬಿಜೆಪಿಯಲ್ಲೇ ಮುಂದುವರೆಯುವುದು ಬಹುತೇಕ ಖಚಿತವಾಗಿದೆ.

ಕಳೆದ ವಾರವಷ್ಟೇ ಪತ್ರಿಕಾಗೋಷ್ಠಿ ನಡೆಸಿ ಕಣ್ಣೀರಿಟ್ಟಿದ್ದ ವಿ. ಸೋಮಣ್ಣ ಎಂದಿಗೂ ಬಿಜೆಪಿ ತೊರೆಯುವುದಿಲ್ಲ ಎಂದು ಹೇಳಿದ್ದರು. ಆದರೆಕಳೆದೆರೆಡು ತಿಂಗಳಿಂದ ಇನ್ನೇನು ಕಾಂಗ್ರೆಸ್ ಸೇರಿಯೇ ಬಿಡುತ್ತಾರೆಂಬ ವದಂತಿ ಸೋಮಣ್ಣ ನಿಕಟವರ್ತಿಗಳಿಂದ ಹೊರಬಿದ್ದಿತ್ತು.

ಒಂದು ಕಾಲದ ಆಪ್ತ ಬಿ.ಎಸ್.ಯಡಿಯೂರಪ್ಪ ಜೊತೆಗಿನ ಸಂಬಂಧ ಹಳಸಿರುವುದು, ಪ್ರಮುಖ ವೀರಶೈವ ಮುಖಂಡರಾದ ತಮಗೆ ಸಾಕಷ್ಟು ಪ್ರಾಶಸ್ತ್ಯ ಸಿಗದಿರುವುದು, ಬಿ.ವೈ ವಿಜಯೇಂದ್ರರ ನಡವಳಿಕೆ.. ಇದೆಲ್ಲವೂ ವಿ.ಸೋಮಣ್ಣ ಕಾಂಗ್ರೆಸ್‌ನತ್ತ ಮುಖ ಮಾಡಲು ಕಾರಣ ಎಂಬ ಸುದ್ದಿ ಹರಿದಾಡಿತ್ತು.

ಕಾಂಗ್ರೆಸ್‌ನಲ್ಲಿ ಡಿಕೆಶಿ ಕಡೆಯಿಂದ ಸ್ವಾಗತ ದೊರೆತಿತ್ತಾದರೂ, ರಾಜಕೀಯ ಶತ್ರುಗಳಾದ ಕೃಷ್ಣಪ್ಪ ಮತ್ತು ಪ್ರಿಯಾಕೃಷ್ಣ ಬಳಗದಿಂದ ವಿರೋಧವೆದ್ದಿತ್ತು. ತನ್ನ “ಬ್ಲೂ ಐಡ್ ಬಾಯ್” ಪ್ರಿಯಾಕೃಷ್ಣನನ್ನು ಕಳೆದುಕೊಳ್ಳಲು ಸಿದ್ದರಾಮಯ್ಯನವರಿಗೂ ಇಷ್ಟವಿರಲಿಲ್ಲ.

ಹೀಗಾಗಿ ರಾಜಕೀಯವಾಗಿ ಅತಂತ್ರ ಪರಿಸ್ಥಿತಿಗೊಳಗಾಗುವುದಕ್ಕಿಂತ ಮಗ ಅರುಣ್ ಸೋಮಣ್ಣ ಸಲುವಾಗಿಯಾದರೂ ಭವಿಷ್ಯ ಭದ್ರಪಡಿಸಿಕೊಳ್ಳಲು ಸೋಮಣ್ಣ ನಿರ್ಧರಿಸಿದ್ದಾರೆನ್ನಲಾಗಿದೆ.

ದೆಹಲಿಯಲ್ಲಿ ಅಮಿತ್ ಶಾ ಮತ್ತು ಪ್ರಹ್ಲಾದ್ ಜೋಷಿ ಜೊತೆ ನಡೆದ 15 ನಿಮಿಷಗಳ ಸಂವಾದದಲ್ಲಿ ಎಲ್ಲ ಸಮಸ್ಯೆಗಳನ್ನು ಪರಿಹರಿಸುವ ಭರವಸೆ ಸಿಕ್ಕಿದೆ ಎನ್ನಲಾಗಿದೆ.

ಆದರೆ ಯಡಿಯೂರಪ್ಪ ಕುಟುಂಬದ ನಡುವಿನ ಮನಸ್ತಾಪದ ಬಗ್ಗೆ ಪ್ರತಿಕ್ರಿಯಿಸುವಾಗ ನಾವಿಬ್ಬರೂ ತಂದೆಮಗ ಎದ್ದಂತೆ ಎಂದು ಹೇಳಿ ನಯವಾಗಿ ಜಾರಿಕೊಂಡಿರುವ ಸೋಮಣ್ಣ, ವಿಜಯೇಂದ್ರ ವಿಷಯ ಬಂದಾಗ , ವಿಜಯೇಂದ್ರ ವಯಸೇನು ‌ನನ್ನ ವಯಸೇನು ಎನ್ನುವ ಮೂಲಕ ಅನುಭವ ಜ್ಯೇಷ್ಠತೆಗೆ ಸಿಗಬೇಕಾದ ಗೌರವ, ಮಾನ್ಯತೆ ಸಿಕ್ಕಿಲ್ಲ ಎಂಬ ಅಳಲನ್ನು ಪರೋಕ್ಷವಾಗಿ ತೋಡಿಕೊಂಡಿದ್ದಾರೆ.

ಹೆಚ್ಚಿನ ಸುದ್ದಿ

error: Content is protected !!