Saturday, May 16, 2026
Homeಟಾಪ್ ನ್ಯೂಸ್JP THUMINAD: ಹೊಸ ಬಾಳಿಗೆ ಕಾಲಿಟ್ಟ 'ಸು ಫ್ರಮ್ ಸೋ' ನಿರ್ದೇಶಕ ಜೆ.ಪಿ. ತುಮಿನಾಡ್

JP THUMINAD: ಹೊಸ ಬಾಳಿಗೆ ಕಾಲಿಟ್ಟ ‘ಸು ಫ್ರಮ್ ಸೋ’ ನಿರ್ದೇಶಕ ಜೆ.ಪಿ. ತುಮಿನಾಡ್

ಮಂಗಳೂರು: ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ಯುವ ನಿರ್ದೇಶಕ ಜೆ.ಪಿ. ತುಮಿನಾಡ್ (JP Thuminad) ಅವರು ವೈವಾಹಿಕ (Wedding) ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಚೊಚ್ಚಲ ಚಿತ್ರ ‘ಸು ಫ್ರಮ್ ಸೋ’ (Su From So) ಮೂಲಕ ಇಡೀ ಕನ್ನಡ ಚಿತ್ರರಂಗವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದ ಈ ಯುವ ನಿರ್ದೇಶಕ, ಇಂದು ರಶ್ಮಿಕಾ ಎನ್ನುವವರ ಕೈಹಿಡಿಯುವ ಮೂಲಕ ಹೊಸ ಬಾಳಿಗೆ ನಾಂದಿ ಹಾಡಿದ್ದಾರೆ.

ಮಂಗಳೂರಿನ ಪಿಲಿಕುಲದಲ್ಲಿರುವ ಸ್ಕೌಟ್ ಭವನದಲ್ಲಿ ನಡೆದ ಈ ಮದುವೆ ಸಮಾರಂಭದಲ್ಲಿ ಕುಟುಂಬದವರು ಹಾಗೂ ಆಪ್ತ ಗೆಳೆಯರು ಮಾತ್ರ ಭಾಗಿಯಾಗಿದ್ದರು. ಚಿತ್ರರಂಗದ ಹೆಸರಾಂತ ವ್ಯಕ್ತಿಗಳಾದ ನಿರೂಪಕ ನಿರಂಜನ್ ದೇಶಪಾಂಡೆ, ನಟಿ ಸಂಧ್ಯಾ ಅರಕೆರೆ ಮತ್ತು ನಿರ್ದೇಶಕ ಶ್ರೀನಿಧಿ ಅವರು ಪಾಲ್ಗೊಂಡು ನವದಂಪತಿಗೆ ಶುಭ ಹಾರೈಸಿದರು.

ರಂಗಭೂಮಿಯಿಂದ ಬೆಳೆದು ಬಂದ ಜೆ.ಪಿ. ತುಮಿನಾಡ್ ಅವರು ಕೇವಲ ನಿರ್ದೇಶಕರಷ್ಟೇ ಅಲ್ಲದೆ ಉತ್ತಮ ನಟರೂ ಹೌದು. ಅವರು ನಿರ್ದೇಶಿಸಿದ ‘ಸು ಫ್ರಮ್ ಸೋ’ ಸಿನಿಮಾ 2025ರಲ್ಲಿ ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಯಾವುದೇ ದೊಡ್ಡ ತಾರಾಗಣವಿಲ್ಲದಿದ್ದರೂ, ಕೇವಲ ಕಥೆಯ ಬಲದಿಂದ ಈ ಚಿತ್ರ 125 ಕೋಟಿಗೂ ಅಧಿಕ ಹಣ ಗಳಿಸಿ ದಾಖಲೆ ಬರೆದಿತ್ತು.

ಕನ್ನಡದ ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆಯ ಸಿನಿಮಾಗಳ ಪಟ್ಟಿಯಲ್ಲಿ 7ನೇ ಸ್ಥಾನ ಪಡೆದಿರುವುದು ತುಮಿನಾಡ್ ಅವರ ಪ್ರತಿಭೆಗೆ ಸಾಕ್ಷಿಯಾಗಿದೆ. ಈಗ ವೃತ್ತಿಜೀವನದಲ್ಲಿ ಯಶಸ್ಸಿನ ಶಿಖರದಲ್ಲಿರುವಾಗಲೇ ಅವರು ದಾಂಪತ್ಯ ಜೀವನಕ್ಕೆ ಪ್ರವೇಶಿಸಿರುವುದು ಅವರ ಅಭಿಮಾನಿಗಳಲ್ಲಿ ಸಂತಸ ತಂದಿದೆ.

ಇದನ್ನೂ ಓದಿ : ಯುರೋಪ್ ಟು ಆಫ್ರಿಕಾ ಸ್ವಿಮ್ಮಿಂಗ್ – ಅರವತ್ತರ ಹರೆಯದ ನಟನ ಫಿಟ್‌ನೆಸ್ ನೋಡಿ!- VIDEO

ಹೆಚ್ಚಿನ ಸುದ್ದಿ

Change Language »
error: Content is protected !!