ಸದ್ಯ ಹೊರಗೆ ಮಳೆ ಆಗುತ್ತಿರುವುದರಿಂದ ಚಳಿ ಜೋರಾಗಿ ಇದೆ. ಮಧ್ಯಾಹ್ನ ಮೃಷ್ಟಾನ್ನ ಭೋಜನ ಸವಿದಿದ್ರೂ ಸಂಜೆ ಒಂದು ಕಪ್ ಟೀ ಜೊತೆ ಏನಾದ್ರೂ ಕುರುಕುಲು ಇರಬೇಕು ಅನ್ನಿಸುತ್ತದೆ. ಆದ್ರೆ ಮಳೆಗಾಲ ಆಗಿರುವುದರಿಂದ ಹೊರಗಿನ ತಿಂಡಿ ತಿನ್ನುವುದು ಆರೋಗ್ಯಕರವಲ್ಲ ಅನ್ನಿಸುತ್ತದೆ. ಹೀಗಿರುವಾಗ ಮನೆಯಲ್ಲಿ ಏನಾದ್ರೂ ಸ್ನ್ಯಾಕ್ಸ್ ಮಾಡಿ ಸವಿಯೋಣ ಅಂದ್ರೆ ಅದೇ ಬಜ್ಜೆ, ಬೋಂಡಾ ತಿಂದು ಬೋರ್ ಆಗಿರುತ್ತದೆ. ಹಾಗೇ ಡೈಲಿ ಎಣ್ಣೆಯಲ್ಲಿ ಕರಿದ ತಿಂಡಿ ತಿನ್ನೋದು ಒಳ್ಳೆಯದಲ್ಲ. ಅದಕ್ಕಾಗಿಯೇ ನಾವಿಂದು ನಿಮಗೆ ಪನೀರ್ ನಗ್ಗೆಟ್ಸ್ ಮಾಡಬಹುದಾದ ಸ್ನ್ಯಾಕ್ಸ್ ರೆಸಿಪಿಯನ್ನು ಹೇಳಿಕೊಡುತ್ತಿದ್ದು, ಇದು ಆರೋಗ್ಯಕಾರಿ ಕೂಡ ಆಗಿದೆ. ಹಾಗಾದ್ರೆ ಆ ತಿಂಡಿ ಮಾಡುವುದೇಗೆ..? ಎಂಬುದನ್ನು ನೋಡೋಣಾ…
ಬೇಕಾಗುವ ಸಾಮಗ್ರಿಗಳು:
ಪನೀರ್
ಕಾರ್ನ್ ಫ್ಲೋರ್
ಅರಿಶಿನ
ಕೆಂಪು ಮೆಣಸಿನ ಪುಡಿ
ಕರಿಮೆಣಸಿನ ಪುಡಿ
ಓರೆಗಾನೊ
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಉಪ್ಪು
ಎಣ್ಣೆ
ಬ್ರೆಡ್ ಕ್ರಂಬ್ಸ್
ಮಾಡುವ ವಿಧಾನ
* ಮೊದಲಿಗೆ ಒಂದು ಪಾತ್ರೆಯಲ್ಲಿ ಕಾರ್ನ್ ಫ್ಲೋರ್, ಅರಿಶಿನ, ಮೆಣಸಿನ ಪುಡಿ, ಕರಿಮೆಣಸಿನ ಪುಡಿ, ಓರೆಗಾನೊ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ.
* ಅದಕ್ಕೆ ಸ್ವಲ್ಪ ಸ್ವಲ್ಪವೇ ನೀರನ್ನು ಸೇರಿಸಿ ಹಿಟ್ಟು ತಯಾರಿಸಿಕೊಂಡು ಪನೀರ್ ತುಂಡುಗಳನ್ನು ಬ್ಯಾಟರ್‌ಗೆ ಹಾಕಿ, ಚೆನ್ನಾಗಿ ಲೇಪನವಾಗುವಂತೆ ಮಿಶ್ರಣ ಮಾಡಿಕೊಳ್ಳಿ.
* ಈಗ ಬ್ರೆಡ್ ಕ್ರಂಬ್ಸ್ ಅನ್ನು ತಟ್ಟೆಯಲ್ಲಿ ಹರಡಿ, ಪನೀರ್ ತುಂಡುಗಳನ್ನು ಒಂದೊಂದಾಗಿ ಬ್ರೆಡ್ ಕ್ರಂಬ್ಸ್ ಮೇಲೆ ರೋಲ್ ಮಾಡಿ. ಪನೀರ್ ಪೀಸ್ ಗಳಿಗೆ ಬ್ರೆಡ್ ಕಂಬ್ಸ್ ಕೋಟ್ 15-20 ನಿಮಿಷಗಳ ವರೆಗೆ ಫ್ರಿಜ್‌ನಲ್ಲಿಡಿ.
* ಬಳಿಕ ಬಿಸಿ ಎಣ್ಣೆಯಲ್ಲಿ ಪನೀರ್ ತುಂಡುಗಳನ್ನು ಡೀಪ್ ಫ್ರೈ ಮಾಡಿದ್ದರೆ ಪನೀರ್ ತುಂಡುಗಳು ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಚೆನ್ನಾಗಿ ಕರಿದ್ದರೆ ಗರಿಗರಿಯಾದ ಪನೀರ್ ನಗ್ಗೆಟ್ಸ್ ಸವಿಯಿರಿ.

