ಮಧ್ಯಪ್ರದೇಶ : ನಂಬಿಕೆಗಳೇ ಬೇರೆ..ಮೂಢನಂಬಿಕೆಗಳೇ ಬೇರೆ. ಪೋಷಕರ ಮೌಡ್ಯದಿಂದ ಆರು ತಿಂಗಳ ಹಸುಗೂಸು ಪರಿತಪಿಸುವಂತಾಗಿದೆ.ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯಲ್ಲಿ ಮೂಢನಂಬಿಕೆ ಆಚರಣೆ ಮಾಡಲು ಹೋಗಿ ತಾಂತ್ರಿಕನೊಬ್ಬ ಆರು ತಿಂಗಳ ಮಗುವಿನ ಮುಖಕ್ಕೆ ಬೆಂಕಿಯಿಂದ ಸುಟ್ಟು ಗಾಯಗೊಳಿಸಿದ್ದಾನೆ.
ಈ ತಾಂತ್ರಿಕನ ಯಡವಟ್ಟಿನಿಂದ ಹಾಲು ಗಲ್ಲದ ಮಗುವಿನ ಕೆನ್ನೆ ಮತ್ತು ತುಟಿಯ ಭಾಗ ಸುಟ್ಟು ಹೋಗಿದೆ. ಕೇವಲ ಅಷ್ಟು ಮಾತ್ರವಲ್ಲದೆ ಮಗುವಿನ ಕಣ್ಣಿಗೂ ಹಾನಿಯಾಗಿದೆ. ಇಷ್ಟೆಲ್ಲಾ ಆದ ನಂತರ ಆತಂಕಗೊಂಡ ಮಗುವಿನ ತಂದೆ
ಆದೇಶ್ ವರ್ಮಾ ತಮ್ಮ ಮಗ ಮಯಾಂಕ್ ನನ್ನು ಆಸ್ಪತ್ರೆಗೆ ಕರೆತಂದಿದ್ದಾರೆ.
ಆದ್ರೆ ಮಗುವಿನ ಮುಖದಲ್ಲಿ ಸುಟ್ಟ ಗಾಯಗಳನ್ನು ನೋಡಿದ ಡಾಕ್ಟರ್ ಈ ಬಗ್ಗೆ ಪೋಷಕರ ಬಳಿ ಕೇಳಿದಾಗ ತಾಯಿ ತಾಂತ್ರಿಕನ ಬಳಿ ಕರ್ಕೊಂಡು ಹೋಗಿದ್ದ ಕಹಾನಿ ಬಿಚ್ಚಿಟ್ಟಿದ್ದಾರೆ. ಮಗುವಿನ ಸ್ಥಿತಿ ನೋಡಿ ಬೇಸರಗೊಂಡ ವೈದ್ಯರು ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದು, ಈ ತಾಂತ್ರಿಕನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.ಇದೇ ವೇಳೆ ಮಗುವಿನ ಕಣ್ಣು ಶಾಶ್ವತವಾಗಿ ಊನವಾಗುವ ಸಾಧ್ಯತೆಯಿದೆ ಎಂದು ಡಾಕ್ಟರ್ ಹೇಳಿದ್ದಾರೆ. ಆ ನಂತರ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿ ಕೇಸ್ ದಾಖಲಿಸಿದ್ದಾರೆ.