ಹುಬ್ಬಳ್ಳಿ: ಬಿಜೆಪಿ ಪರ ನಟ ಸುದೀಪ್ ಪ್ರಚಾರ ಕುರಿತು ಟೀಕಿಸಿದ್ಧ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಸಿಎಂ ಬಸವರಾಜ ಬೊಮ್ಮಾಯಿ ತುರುಗೇಟು ನೀಡಿದ್ದಾರೆ.
ಈ ಬಗ್ಗೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹೆಚ್.ಡಿ.ಕುಮಾರಸ್ವಾಮಿ ಯಾವ ಸ್ಟಾರ್ ನಟರನ್ನೂ ನಿಲ್ಲಿಸಿಲ್ವಾ..? 1996 ರಾಮನಗರ ಉಪಚುನಾವಣೆಯಲ್ಲಿ ಅಂಬರೀಶ್ ಕರೆದುಕೊಂಡು ಬಂದು ಪ್ರಚಾರ ಮಾಡಿದ್ದಾರೆ. ನಟರು ರಾಜಕೀಯ ಪಕ್ಷಕ್ಕೆ ಬೆಂಬಲ ಕೊಡುವುದು ಹೊಸದೇನಲ್ಲ. ಸುದೀಪ್ ನಮ್ಮ ಪರ ಪ್ರಚಾರಕ್ಕೆ ಬಂದರೇ ಇವರಿಗ್ಯಾಕೆ ಕಳವಳ?. ಕುಮಾರಸ್ವಾಮಿ ಅವರಿಗೆ ಆತಂಕ ಇದೆ. ಹೀಗಾಗಿ ಟೀಕೆ ಮಾಡುತ್ತಿದ್ದಾರೆ. ಅವರು ಸೋಲನ್ನ ನೋಡುತ್ತಿದ್ದಾರೆ. ಸೋಲುವ ಭಯ ಅವರಿಗಿದೆ. ನಮಗೆ ಗೆಲುವಿನ ವಿಶ್ವಾಸವಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಟಾಂಗ್ ಕೊಟ್ಟಿದ್ದಾರೆ.